RNI NO. KARKAN/2006/27779|Wednesday, October 15, 2025
You are here: Home » breaking news » ಗೋಕಾಕ:ಬೆಳಗಾವಿ ಜಿಲ್ಲೆ ವಿಭಜಿಸಿ ಹೊಸ ಜಿಲ್ಲೆ ಮಾಡುವುದಾದರೆ ಮೊದಲು ಗೋಕಾಕ ಜಿಲ್ಲೆ ಮಾಡಲೇಬೇಕು : ಮುರುಘರಾಜೇಂದ್ರ ಮಹಾಸ್ವಾಮಿಗಳ ಎಚ್ಚರಿಕೆ

ಗೋಕಾಕ:ಬೆಳಗಾವಿ ಜಿಲ್ಲೆ ವಿಭಜಿಸಿ ಹೊಸ ಜಿಲ್ಲೆ ಮಾಡುವುದಾದರೆ ಮೊದಲು ಗೋಕಾಕ ಜಿಲ್ಲೆ ಮಾಡಲೇಬೇಕು : ಮುರುಘರಾಜೇಂದ್ರ ಮಹಾಸ್ವಾಮಿಗಳ ಎಚ್ಚರಿಕೆ 

ಬೆಳಗಾವಿ ಜಿಲ್ಲೆ ವಿಭಜಿಸಿ ಹೊಸ ಜಿಲ್ಲೆ ಮಾಡುವುದಾದರೆ ಮೊದಲು ಗೋಕಾಕ ಜಿಲ್ಲೆ ಮಾಡಲೇಬೇಕು : ಮುರುಘರಾಜೇಂದ್ರ ಮಹಾಸ್ವಾಮಿಗಳ ಎಚ್ಚರಿಕೆ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಏ 7 :
ಗೋಕಾಕ ತಾಲೂಕನ್ನು ನೂತನ ಜಿಲ್ಲೆಯನ್ನಾಗಿ ಘೋಷಿಸುವಂತೆ ಆಗ್ರಹಿಸಿ ಇಲ್ಲಿನ ಗೋಕಾಕ ಜಿಲ್ಲಾ ಹೋರಾಟ ಚಾಲನಾ ಸಮಿತಿ , ವಕೀಲರ ಸಂಘ ಹಾಗೂ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಪ್ರತಿಭಟನೆ ನಡೆಸಲಾಯಿತು.
ಗುರುವಾರದಂದು ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ನಗರ ಹಾಗೂ ಗ್ರಾಮೀಣ ಭಾಗದಿಂದ ಆಗಮಿಸಿದ್ದ ಸಾರ್ವಜನಿಕರು ಸಚಿವ ಉಮೇಶ ಕತ್ತಿ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ, ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದರು.

ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಹೋರಾಟ ಚಾಲನಾ ಸಮಿತಿಯ ಅಧ್ಯಕ್ಷರಾದ ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಮುರುಘರಾಜೇಂದ್ರ ಮಹಾಸ್ವಾಮಿಗಳು ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಹೊಸ ಜಿಲ್ಲೆ ಮಾಡುವುದಾದರೆ ಮೊದಲು ಗೋಕಾಕ ಜಿಲ್ಲೆ ಮಾಡಲೇಬೇಕು. ಪಿ.ಸಿ ಗದ್ದಿಗೌಡರ , ಹುಂಡೇಕರ ಹಾಗೂ ವಾಸುದೇವ ಆಯೋಗಗಳ ವರದಿಯನ್ನು ಆಧರಿಸಿಯೇ 1997 ರಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಎಚ್.ಪಟೇಲ್ ಅವರು ಗೋಕಾಕ ಜಿಲ್ಲೆ ಎಂದು ಘೋಷಿಸಿದ್ದರು ಆದರೆ ಕಾರಣಾಂತರಗಳಿಂದ ಮತ್ತೆ ತಾವು ಹೋರಡಿ‌ಸಿದ್ದ ಗೇಜೆಟ್ ನ್ನು ರದ್ದು ಪಡಿಸಿದ್ದರು . ಅಂದಿನ ಇಂದಿನ ವರೆಗೆ ಗೋಕಾಕ ಜಿಲ್ಲೆಗೆ ಆಗ್ರಹಿಸಿ ನಿರಂತರ ಹೋರಾಟಗಳು ಮಾಡಿ ಕಾಲಕಾಲಕ್ಕೆ ಮುಖ್ಯಮಂತ್ರಿಗಳಿಗೆ ಬೇಟಿಯಾಗಿ ಮನವಿ ಮಾಡಲಾಗಿದ್ದರೂ ಸಹ ಬೊಮ್ಮಾಯಿ ಸಂಪುಟದ ಸಚಿವ ಕತ್ತಿ ಅವರು ಬೆಳಗಾವಿಯನ್ನು ವಿಭಾಗೀಯವಾಗಿ ಮೂರು ಜಿಲ್ಲೆಯನ್ನಾಗಿ ಮಾಡಬೇಕು ಎಂದು ಹೇಳಿಕೆ ನೀಡಿ ಗೋಕಾಕ ಜನತೆಯನ್ನು ಕೆರಳಿಸಿದ್ದಾರೆ. ಇದು ಸರಿಯಾದ ಕ್ರಮವಲ್ಲ ಒಬ್ಬ ಜವಾಬ್ದಾರಿಯುತ್ತ ಸ್ಥಾನದಲ್ಲಿದ್ದುಕೊಂಡು ಹಿಂತಹ ಅಸಮಂಜಸ ಹೇಳಿಕೆಗಳನ್ನು ನೀಡುವದು ಅವರ ಘನತೆಗೆ ಶೋಭೆ ತರುವಂತದ್ದಲ್ಲ . ಸರಕಾರ ಎಚ್ಚೆತ್ತುಕೊಂಡು ಕೂಡಲೇ ಗೋಕಾಕ ಜಿಲ್ಲೆಯನ್ನಾಗಿ  ಘೋಷಣೆ ಮಾಡಬೇಕು ಇಲ್ಲದಿದ್ದರೆ ಗೋಕಾಕ ಜನತೆ ಉಗ್ರ ಹೋರಾಟದ ಹಾದಿ ತುಳಿಯಬೇಕಾಗಿದೆ ಎಂದು ಸರಕಾರವನ್ನು ಎಚ್ಚರಿಸಿದರು.

ಜಾರಕಿಹೊಳಿ ಸಹೋದರರು ಮನಸ್ಸು ಮಾಡಬೇಕು : ಗೋಕಾಕ ಜಿಲ್ಲೆಗಾಗಿ ಕಳೆದ 4 ದಶಕಗಳಿಂದ ನಡೆಯುತ್ತಿರುವ ಹೋರಾಟಕ್ಕೆ ಜಾರಕಿಹೊಳಿ ಸಹೋದರರು ಬೆಂಬಲ ನೀಡಿ ಮುಖ್ಯಮಂತ್ರಿಗಳ ಬಳಿ ನಿಯೋಗ ಒಯ್ದು ಗೋಕಾಕ ಜಿಲ್ಲೆ ಮಾಡುವಂತೆ ಒತ್ತಾಯಿಸಿದ್ದಾರೆ. ಒಂದು ಸರಕಾರ ತಗೆದು ಮತ್ತೊಂದು ಸರಕಾರ ರಚಿಸುವ ಶಕ್ತಿ ಇರುವ ಜಾರಕಿಹೊಳಿ ಸಹೋದರಿಗೆ ಗೋಕಾಕ ಜಿಲ್ಲೆ ಮಾಡಿಸುವದು ದೊಡ್ಡ ಕೆಲಸ ವಲ್ಲ ಕೂಡಲೇ ಈ ಬಗ್ಗೆ ಗಂಭೀರವಾದ ಚಿಂತನೆ ನಡೆಸಿ ಅಧಿಕಾರದಲ್ಲಿರುವ 4 ಜನ ಜಾರಕಿಹೊಳಿ ಸಹೋದರರು ಮನಸ್ಸು ಮಾಡಿ ಗೋಕಾಕ ಜಿಲ್ಲೆ ಮಾಡಲು ಸರಕಾರ ಮಟ್ಟದಲ್ಲಿ ಉಗ್ರ ಹೋರಾಟ ಮಾಡಿದರೆ ಖಂಡಿತ ಗೋಕಾಕ ಜಿಲ್ಲೆಯಾಗುವಲ್ಲಿ ಎರೆಡು ಮಾತಿಲ್ಲಾ ಆ ನಿಟ್ಟಿನಲ್ಲಿ ಜಾರಕಿಹೊಳಿ ಸಹೋದರರು ಮುಂದಾಗಬೇಕು ಎಂದು ಶ್ರೀಗಳು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

ಮುಖಂಡರುಗಳಾದ ಬಸಗೌಡ ಪಾಟೀಲ, ಬಿ.ಆರ್.ಕೊಪ್ಪ
ಎಂ.ಆರ್. ಬೋವಿ , ಶಶಿಧರ ದೇಮಶೆಟ್ಟಿ ಮಾತನಾಡಿ ಕಳೆದ 4 ದಶಕಗಳಿಂದ ಗೋಕಾಕ ಜಿಲ್ಲೆಗಾಗಿ ಹೋರಾಟಗಳನ್ನು ನಡೆಸಿ ಆಯಾ ಸರಕಾರಗಳಿಗೆ ಮನವಿ ಅರ್ಪಿಸಿ ಗೋಕಾಕ ನೂತನ ಜಿಲ್ಲೆಗಾಗಿ ಆಗ್ರಹಿಸಲಾಗುತ್ತಿದ್ದರೂ ಸಹ ಸರಕಾರದಲ್ಲಿ ಜವಾಬ್ದಾರಿಯುತ್ತ ಸ್ಥಾನದಲ್ಲಿರುವ ಸಚಿವ ಕತ್ತಿ ಅವರು ಗೋಕಾಕನ್ನು ಕಡೆಗಣಿಸುವಂತಾ ಹೇಳಿಕೆ ನೀಡುತ್ತಿರುವುದು ಖಂಡನಾರ್ಹವಾಗಿದೆ. ಆದಷ್ಟು ಬೇಗ ಸರಕಾರ ಎಚ್ಚೆತ್ತುಕೊಂಡು ಗೋಕಾಕ ತಾಲೂಕನ್ನು ನೂತನ ಜಿಲ್ಲೆಯಾಗಿ ಘೋಷಿ‌ಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣ್ಣಚ್ಯಾಳಿ, ನಿಂಗಪ್ಪ ಕರುಬೇಟ್, ಬಿಜೆಪಿ ನಗರ ಮಂಡಳ ಅಧ್ಯಕ್ಷ ಭೀಮಶಿ ಭರಮನ್ನವರ, ಎಲ್.ಟಿ.ತಪಸಿ, ಅಬ್ಬಾಸ ದೇಸಾಯಿ, ಶಂಕರ ಗೋರೋಶಿ, ಬಸವರಾಜ ಖಾನಪ್ಪನವರ, ಕಿರಣ ಢಮಾಮಗರ, ಪವನ  ಮಹಾಲಿಂಗಪೂರ ಗಣಪತಿ ಈಳಿಗೇರ,  ಸೇರಿದಂತೆ ಗೋಕಾಕ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಮುಖಂಡರುಗಳು ಉಪಸ್ಥಿತರಿದ್ದರು.

Related posts: