ಗೋಕಾಕ:ಮಹಿಳಾ ದಿನಾಚರಣೆ ಅಂಗವಾಗಿ ಸಾಧಕಿಯರಿಗೆ ಸತ್ಕಾರ

ಮಹಿಳಾ ದಿನಾಚರಣೆ ಅಂಗವಾಗಿ ಸಾಧಕಿಯರಿಗೆ ಸತ್ಕಾರ
ಗೋಕಾಕ ಮಾ 25 : ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಇಲ್ಲಿನ ಇನರವಿಲ್ ಸಂಸ್ಥೆ ಅವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕಿಯರಾದ ಡಾ.ಶಾಮಾಲಾ ಮಾಸುರಕರ, ಸಾರಿಗೆ ಇಲಾಖೆಯ ಅನ್ನಪೂರ್ಣ ಹೂಗಾರ ಹಾಗೂ ಅನಿತಾ ಜೋಡಟ್ಟಿ ಇವರನ್ನು ರವಿವಾರದಂದು ನಗರದ ರೋಟರಿ ರಕ್ತಭಂಡಾರ ಸಭಾಂಗಣದಲ್ಲಿ ಸತ್ಕರಿಸಲಾಯಿತು.
ಸಂಸ್ಥೆಯ ಅಧ್ಯಕ್ಷೆ ಜಯಾ ಕಮತ್, ಕಾರ್ಯದರ್ಶಿ ಅನುಪಾ ಕೌಶಿಕ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.