ಗೋಕಾಕ:ಇಂದಿನಿಂದ ಅರಭಾವಿಯಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಕಾರ್ಯಾರಂಭ

ಇಂದಿನಿಂದ ಅರಭಾವಿಯಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಕಾರ್ಯಾರಂಭ
ಗೋಕಾಕ ಜ 30 : ಮಾನ್ಯ ಆಯುಕ್ತರು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಇಲಾಖೆ ಬೆಂಗಳೂರು ಇವರ ಆದೇಶದಂತೆ ಸದ್ಯ ಗೋಕಾಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯನ್ನು ಮೂಡಲಗಿ ತಾಲೂಕಿನ ಅರಭಾವಿಯಲ್ಲಿರುವ ಜಿ.ಟಿ.ಟಿ.ಸಿ ಕಾಲೇಜ ಸಮೀಪದ ನಾಡ ಕಛೇರಿ ಪಕ್ಕದಲ್ಲಿರುವ ಕಟ್ಟಡಕ್ಕೆ ಶುಕ್ರವಾರ ದಿನಾಂಕ 30-01-2026 ರಂದು ಸ್ಥಳಾಂತರಿಸಿ ಕಾರ್ಯಾರಂಭ ಮಾಡಲಾಗುತ್ತಿದ್ದು, ಕಾರಣ ಸಾರ್ವಜನಿಕರು ಸಹಕರಿಸಲು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಗೋಕಾಕ ಇವರು ಪ್ರಕಟಣೆ ಮೂಲಕ ಕೋರಿದ್ದಾರೆ.
