RNI NO. KARKAN/2006/27779|Saturday, January 31, 2026
You are here: Home » breaking news » ಗೋಕಾಕ:ಕರ್ನಾಟಕ ರಾಜ್ಯ ಪತ್ರಕರ್ತರ ವೇದಿಕೆಗೆ ತಾಲೂಕು ಪದಾಧಿಕಾರಿಗಳ ನೇಮಕ

ಗೋಕಾಕ:ಕರ್ನಾಟಕ ರಾಜ್ಯ ಪತ್ರಕರ್ತರ ವೇದಿಕೆಗೆ ತಾಲೂಕು ಪದಾಧಿಕಾರಿಗಳ ನೇಮಕ 

ಕರ್ನಾಟಕ ರಾಜ್ಯ ಪತ್ರಕರ್ತರ ವೇದಿಕೆಗೆ ತಾಲೂಕು ಪದಾಧಿಕಾರಿಗಳ ನೇಮಕ

ಗೋಕಾಕ ಜ 30 : ಕರ್ನಾಟಕ ರಾಜ್ಯ ಪತ್ರಕರ್ತರ ವೇದಿಕೆ ಗೋಕಾಕ ತಾಲೂಕ ಘಟಕದ ಪದಾಧಿಕಾರಿಗಳನ್ನು ಶುಕ್ರವಾರದಂದು ನಗರದಲ್ಲಿ ರಾಜ್ಯಾಧ್ಯಕ್ಷ ಅಶೋಕ ಭಜಂತ್ರಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ನೇಮಕ ಮಾಡಲಾಯಿತು.

ತಾಲೂಕ ಉಪಾಧ್ಯಕ್ಷರಾಗಿ ಜಗದೀಶ್ ಈಶ್ವರ ಮಂಡಿ, ಅಶಫಾಕ ಎನ್. ಮುಜಾವರ, ಪ್ರಧಾನ ಕಾರ್ಯದರ್ಶಿಯಾಗಿ ಶಫೀಕಅಲಿ ಮುಲ್ಲಾ,ಸಹ ಕಾರ್ಯದರ್ಶಿಯಾಗಿ ಶಶಿಕಾಂತ ಕುರಬೇಟ್, ಖಜಾಂಚಿಯಾಗಿ ದುಂಡಪ್ಪ ರೆಡ್ಡಿ ,ಪತ್ರಿಕಾ ಛಾಯಾ ಗ್ರಾಹಕರಾಗಿ ಚಿದಾನಂದ ಗೌಡರ ಇವರನ್ನು ನೇಮಕ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಜೈನುಲ್ಲಾ ಅಂಕಲಗಿ,ಉತ್ತರ ಕರ್ನಾಟಕ ಅಧ್ಯಕ್ಷರಾದ ಮಾನಿಂಗ ನೀಲನ್ನವರ, ಜಿಲ್ಲಾ ಘಟಕದ ಅಧ್ಯಕ್ಷರಾದ ಶಶಿ ಕನ್ನಪ್ಪನವರ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮು ಮರೆನ್ನವರ, ಗೋಕಾಕ ತಾಲೂಕ ಘಟಕದ ಗೌರವಾಧ್ಯಕ್ಷರಾದ ಲಕ್ಷ್ಮಣ್ ಖಡಕಬಾಂವಿ, ಸಾದಿಕ ಹಲ್ಯಾಳ, ರಾಜು ನಾಯಿಕ ಶಿವಲಿಂಗ ಸಂಬಳ ಶಶಿಕಾಂತ ದಂಡುಗೋಳ , ಬಾಹುರಾಜ ಮುನ್ನಾಳ ಉಪಸ್ಥಿತರಿದ್ದರು

Related posts: