ಬೆಳಗಾವಿ:10ನೇ ಸತೀಶ ಶುರ್ಗಸ್ ಕ್ಲಾಸಿಕ್ : ರಾಜ್ಯಮಟ್ಟದ ಚಾಂಪಿಯನ್ ಆಫ್ ಚಾಂಪಿಯನಯಾಗಿ ಮಂಗಳೂರಿನ ಧನರಾಜ ಆಯ್ಕೆ
10ನೇ ಸತೀಶ ಶುರ್ಗಸ್ ಕ್ಲಾಸಿಕ್ : ರಾಜ್ಯಮಟ್ಟದ ಚಾಂಪಿಯನ್ ಆಫ್ ಚಾಂಪಿಯನಯಾಗಿ ಮಂಗಳೂರಿನ ಧನರಾಜ ಆಯ್ಕೆ
ಬೆಳಗಾವಿ ಡಿ 16 : ಕಳೆದ ಎರಡು ದಿನಗಳಿಂದ ಬೆಳಗಾವಿ ಮಹಾ ನಗರದಲ್ಲಿ ಸತೀಶ ಶುರ್ಗಸ ಪೌಂಡೇಶನ ಆಶ್ರಯದಲ್ಲಿ ನಡೆಯುತ್ತಿರುವ 10ನೇ ಸತೀಶ ಶುರ್ಗಸ್ ಕ್ಲಾಸಿಕ್ ಸ್ವರ್ಧೆಯಲ್ಲಿ ಇಂದು ಸಾಯಂಕಾಲ ನಡೆದ ರಾಜ್ಯ ಮಟ್ಟದ ಧೇಹದ್ಯಾರ್ಡ ಸ್ವರ್ಧೆಯಲ್ಲಿ ಚಾಂಪಿಯನ್ ಆಫ್ ಚಾಂಪಿಯನಯಾಗಿ ಮಂಗಳೂರಿನ ಧನರಾಜ ಆಯ್ಕೆಯಾದರು .
ನಗರದ ಸರ್ದಾರ್ ಹೈಸ್ಕೂಲ್ ಮೈದಾನದಲ್ಲಿ ನಡೆದ 10ನೇ ಸತೀಶ ಶುರ್ಗಸ್ ಕ್ಲಾಸಿಕ್ ರಾಜ್ಯ ಮಟ್ಟದ ಧೇಹದ್ಯಾರ್ಡ ಸ್ವರ್ಧೆಯಲ್ಲಿ ವಿಜೇತನಾದ ಸ್ವರ್ದಾಳು ನಗದು 2,00,000 ರೂ ಮತ್ತು ಆರ್ಕಷಕ ಟ್ರೋಫಿ ಪಡೆದು ಕೊಂಡರು
ಇನ್ನುಳಿದ ವಿವಿಧ ವಿಭಾಗಗಳಲ್ಲಿ ಆಯ್ಕೆಗೊಂಡ ಸ್ವರ್ಧಾಳುಗಳು ಕ್ರಮವಾಗಿ 15,000, 14000, 13000, 12000 ಮತ್ತು 11000 ರೂ ನಗದು ಮತ್ತು ಪ್ರಶಸ್ತಿ ಪತ್ರಗಳನ್ನು ಪಡೆದರು
ಬೆಸ್ಟ ಪೋಜರ್ ರಾಗಿ ಬೆಳಗಾವಿಯ ಗೌರಂಗ ಗೇನಜಿ ಆಯ್ಕೆಗೊಂಡು 20 ,000 ರೂ. ನಗದು ಹಾಗೂ ಟ್ರೋಫಿ ಪಡೆದರು.
ಈ ಸಂದರ್ಭದಲ್ಲಿ ಮಂಜುನಾಥ್ ಜಂಟಿ ಆಯುಕ್ತರು ಅಬಕಾರಿ ಇಲಾಖೆ ಬೆಳಗಾವಿ , ಜಿ.ಪಂ ಅಧ್ಯಕ್ಷೆ ಶ್ರೀಮತಿ ಆಶಾ ಐಹೋಳೆ , ಅನಿಲ ಪೋತದಾರ , ಸುನೀಲ ಅಫಟೇಕರ , ಅಜೀತ ಸಿದ್ದಣನ್ನವರ , ಸಂಜು ದೇವರಮನಿ , ಸೇರಿದಂತೆ ಅನೇಕರು ಉಪಸ್ಥಿತರಿದ್ದರು