ಗೋಕಾಕ:ರಾಜ್ಯದಲ್ಲಿ ರಾಜ್ಯ ಸರಕಾರ ಒಳ ಮೀಸಲಾತಿ ಜಾರಿ ಮಾಡಬಾರದು : ರಾಜ್ಯಾಧ್ಯಕ್ಷ ವಾಯ್.ಕೊಟ್ರೇಶ್

ರಾಜ್ಯದಲ್ಲಿ ರಾಜ್ಯ ಸರಕಾರ ಒಳ ಮೀಸಲಾತಿ ಜಾರಿ ಮಾಡಬಾರದು : ರಾಜ್ಯಾಧ್ಯಕ್ಷ ವಾಯ್.ಕೊಟ್ರೇಶ್
ಗೋಕಾಕ ಜ 12 : ರಾಜ್ಯದಲ್ಲಿ ರಾಜ್ಯ ಸರಕಾರ ಒಳ ಮೀಸಲಾತಿ ಜಾರಿ ಮಾಡಬಾರದು ಎಂದು ಅಖಿಲ ಕರ್ನಾಟಕ ಭೋವಿ ವಡ್ಡರ ಯುವ ವೇದಿಕೆಯ ರಾಜ್ಯಾಧ್ಯಕ್ಷ ವಾಯ್,ಕೊಟ್ರೇಶ್ ಹೇಳಿದರು.
ರವಿವಾರದಂದು ನಗರದ ಸಮುದಾಯ ಭವನದಲ್ಲಿ ಅಖಿಲ ಕರ್ನಾಟಕ ಭೋವಿ ವಡ್ಡರ ಯುವ ವೇದಿಕೆ ಮತ್ತು ಕಲ್ಲು ,ಬಂಡೆ, ಮಣ್ಣು, ಕಟ್ಟಡ ಕಾರ್ಮಿಕರ ವೇದಿಕೆ ಬೆಳಗಾವಿ ಜಿಲ್ಲಾ ಘಟಕದ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಮಟ್ಟದ ಸ್ವಾಭಿಮಾನಿ ಭೋವಿ ವಡ್ಡರ ಜನಜಾಗೃತಿ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಿಂದಲೂ ಗುಡ್ಡಗಳಲ್ಲಿ ಕಲ್ಲುಗಳನ್ನು ಒಡೆದು ಬದಕುವ ಸಮಾಜ ಆದಿ ಅನಾದಿ ಕಲಾದಿಂದಲೂ ಆಯಾ ಕಾಲದ ಸರಕಾರದ ಕಟ್ಟಡಗಳನ್ನು ಕಟ್ಟಿದ್ದೇವೆ.ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಸಮಾಜ ಭೋವಿ ವಡ್ಡರ , ಭೋವಿ ವಡ್ಡರರು ಹಿಂಬಾಗಲಿನಿಂದ ಮೀಸಲಾತಿ ಪಡೆದುಕೊಂಡಿದ್ದಾರೆ ಎಂಬ ಆರೋಪವನ್ನು ನಿರಾಕರಿಸಿದ ಅವರು ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ಹೃದಯದಲ್ಲಿ ಇಟ್ಟು ಪೂಜೆ ಮೋಡುವವ ಸಮಾಜ ಭೋವಿ ವಡ್ಡರ ಸಮಾಜ. ಭೋವಿ ಸಮಾಜವನ್ನು 1897ರಲ್ಲಿ ಶೋಷಿತ ಜನಾಂಗವೆಂದು ಎಲಿಜಿಬೆತ್ ರಾಣಿ ಕರೆದಿದ್ದಾರೆ. ಅದರಿಂದ ನಮಗೆ ಎಸ್.ಸಿ ಮೀಸಲಾತಿಗೆ ಸೇರಿಸಿದ್ದಾರೆ.ನಾವು ಮೋಸದಿಂದ ಮೀಸಲಾತಿ ಪಡೆದಿಲ್ಲ. ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ಗೌರವದಿಂದ ಪೂಜಿಸುವ ಸಮಾಜ ನಾವು ವಸೂಲಿ ಮಾಡುವ ಸಮಾಜವಲ್ಲ ಎಂದ ಅವರು ಸರಿಯಾಗಿ ಜನಗಣತಿ ಮಾಡಿ ಮೀಸಲಾತಿ ಮಾಡಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಸರಕಾರಗಳು ಜನರನ್ನು ಒಡೆದಾಳುವ ನೀತಿಯನ್ನು ಅನುಸರಿಸುತ್ತವೆ. ಒಳಮೀಸವಾಯಿ ಜಾರಿಯಾದರೆ ವಡ್ಡರ ಸಮಾಜಕ್ಕೆ ತೊಂದರೆಯಾಗುತ್ತದೆ. ಓದಲು ಸ್ವಾಭಿಮಾನದಿಂದ ಬದುಕುವುದು ಕಷ್ಟವಾಗುತ್ತದೆ. ಈಗಾಗಲೇ ನಮಗೆ ಸೌಲಭ್ಯಗಳು ಸಿಗುತ್ತಿಲ್ಲ. ಒಳಮೀಸಲಾಯಿ ಜಾರಿಯಾದರೆ ಭೋವಿ ವಡ್ಡರ ಸಮಾಜ ಸ್ವಾತಂತ್ರ್ಯವಾಗಿ ,ಸರಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿಲ್ಲ . ಒಳ ಮೀಸಲಾತಿ ಎಂಬುದರ ಬಗ್ಗೆ ಸಮಾಜ ತಿಳಿದುಕೊಳ್ಳಬೇಕು. ಸಿದ್ದರಾಮಯ್ಯ ಶೋಷಿತ ಸಮಾಜದ ನಾಯಕರು ನಾವು ಮತಗಳನ್ನು ನೀಡಿ ಸಹಕಾರ ನೀಡಿದ್ದೇವೆ. ಆದರೆ ಇಂದು ವೋಟಬ್ಯಾಂಕ ಗೋಸ್ಕರ ಸಿದ್ದರಾಮಯ್ಯ ಒಳ ಮೀಸಲಾತಿ ಜಾರಿ ಮಾಡಲು ಹೋರಟಿದ್ದಾರೆ ಅದಕ್ಕೆ ನಾವು ಯಾವ ಕಾರಣಕ್ಕೂ ಜಾರಿ ಮಾಡಲು ಬಿಡುವುದಿಲ್ಲ ಎಂದು ಸರಕಾರವನ್ನು ಒತ್ತಾಯಿಸಿದ ಅವರು 101 ಜಾತಿಗಳಲ್ಲಿ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದು, ಆದಕ್ಕೆ ಸಮಾಜ ಎಂದು ಬಿಡುವುದಿಲ್ಲ ಎಂದು ಸರಕಾರವನ್ನು ಎಚ್ಚರಿಸಿದ ಅವರು ಸಮಾಜ ಬಾಂಧವರು ಪ್ರತಿಯೊಂದು ಗ್ರಾಮಕ್ಕೆ ಹೋಗಿ ಇದರ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದ ದಿವ್ಯ ಸಾ ಸಾನಿಧ್ಯವನ್ನು ವಹಿಸಿ ಮಾತನಾಡಿದ
ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು
ಭೋವಿ ವಡ್ಡರ ಸಮಾಜ ತತ್ವದಿಂದ ಬಹಳ ಶ್ರೀಮಂತ ಸಮಾಜ.ನಾಡಿನ ಮೂರನೇಯ ಶೂನ್ಯ ಪೀಠಾಧಿಪತಿ ಸಿದ್ದರಾಮೇಶ್ವರರು ಅಂತಹ ಸಮಾಜದಲ್ಲಿ ಹುಟ್ಟಿದವರು ಇಂದು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕಾಗಿದೆ. ಸಮಾಜದ ತುಳಿತಕ್ಕೆ ಒಳಗಾದವರಿಗೆ ದೇವರು ಒಲಿದಿದ್ದಾರೆ. ಈ ಸಮಾಜಕ್ಕೆ ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಮಾನತೆ ಸಿಗಬೇಕಾಗಿದೆ ಹಾಗಾಗಿ ಸರಕಾರಗಳು ಭೋವಿ ಸಮಾಜಕ್ಕೆ ನ್ಯಾಯ ದೊರಕಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮವನ್ನು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯರುಗಳಾದ .ಆರ್.ಕಾಗಲ್, ಮಡೆಪ್ಪ ತೋಳಿನವರ, ಕಾಂಗ್ರೆಸ್ ಮುಖಂಡ ಅಶೋಕ್ ಪೂಜಾರಿ, ಪರಶುರಾಮ ಕಾಳೆ, ಜಿಲ್ಲಾಧ್ಯಕ್ಷ ಸಂಜಯ ವಡ್ಡರ, ಮಾರುತಿ ಗಾಡಿವಡ್ಡರ, ಬಸವರಾಜ ಬಂಡಿವಡ್ಡರ, ಎಲ್.ಬಿ.ಗಾಡಿವಡ್ಡರ, ಮಹಾನಿಂಗ ಬಂಡಿವಡ್ಡರ, ಲಕ್ಕಪ್ಪ ಮಾಳಗಿ, ವಿಠಲ ಗುಂಡಿ , ರಾಜು ಗಾಡಿವಡ್ಡರ, ಸುನಿಲ್ ದೋಥರೆ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.