RNI NO. KARKAN/2006/27779|Saturday, February 14, 2026
You are here: Home » breaking news » ಗೋಕಾಕ:ಸತೀಶ ಶುಗರ್ಸ್ ಆರ್ವಾಡ್ಸ ಮೂಲಕ ಬೆಳೆದ ಪ್ರತಿಭೆಗಳು ಬೆಂಗಳೂರಿನಿಂದ ದೆಹಲಿವರೆಗೆ ಹೆಸರು ಮಾಡುತ್ತಿದ್ದಾರೆ : ಫ್ಯಾನ್ ಶೋ ಉದ್ಘಾಟಿಸಿದ ಶಾಸಕ ಸತೀಶ ಅಭಿಮತ

ಗೋಕಾಕ:ಸತೀಶ ಶುಗರ್ಸ್ ಆರ್ವಾಡ್ಸ ಮೂಲಕ ಬೆಳೆದ ಪ್ರತಿಭೆಗಳು ಬೆಂಗಳೂರಿನಿಂದ ದೆಹಲಿವರೆಗೆ ಹೆಸರು ಮಾಡುತ್ತಿದ್ದಾರೆ : ಫ್ಯಾನ್ ಶೋ ಉದ್ಘಾಟಿಸಿದ ಶಾಸಕ ಸತೀಶ ಅಭಿಮತ 

ಸತೀಶ ಶುಗರ್ಸ್ ಆರ್ವಾಡ್ಸ ಮೂಲಕ ಬೆಳೆದ ಪ್ರತಿಭೆಗಳು ಬೆಂಗಳೂರಿನಿಂದ ದೆಹಲಿವರೆಗೆ ಹೆಸರು ಮಾಡುತ್ತಿದ್ದಾರೆ : ಫ್ಯಾನ್ ಶೋ ಉದ್ಘಾಟಿಸಿದ  ಶಾಸಕ  ಸತೀಶ ಅಭಿಮತ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 23 :

ಸತೀಶ ಶುಗರ್ಸ್ ಆರ್ವಾಡ್ಸ ಮೂಲಕ ಬೆಳೆದ ಪ್ರತಿಭೆಗಳು ಬೆಂಗಳೂರಿನಿಂದ ದೆಹಲಿವರೆಗೆ ಬೆಳೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ಶುಕ್ರವಾರದಂದು ಇಲ್ಲಿನ ಲಕ್ಷ್ಮೀ ಚಿತ್ರಮಂದಿರದಲ್ಲಿ ನಗರದ ಕಾಮೆಡಿ ಕಿಲಾಡಿ ಖ್ಯಾತಿಯ ಪ್ರವಿಣಕುಮಾರ್ ಗಸ್ತಿ ನಟಿಸಿರುವ ಗೆಳೆಯಾ ಚಲನಚಿತ್ರದ ಫ್ಯಾನ್ ಶೋ ಉದ್ಘಾಟಿಸಿ ಅವರು ಮಾತನಾಡಿದರು.
ಹಲವಾರು ಪ್ರತಿಭೆಗಳು ನಮ್ಮ ಸತೀಶ್ ಶುಗರ್ಸ ಆರ್ವಾಡ್ಸ ನಿಂದ ಹೊರಹೊಮ್ಮಿದ್ದಾರೆ ಅದರಲ್ಲಿ ಪ್ರವಿಣಕುಮಾರ ಗಸ್ತಿ ಅವರು ಕೂಡಾ ಒಬ್ಬರು. ಅಭಿನಯ, ಗಾಯನ ಸೇರಿದಂತೆ ಹಲವಾರು ರಂಗಗಳಲ್ಲಿ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಳೆದ 2 ದಶಕಗಳಿಂದ ಪ್ರಾಮಾಣಿಕವಾಗಿ ಪ್ರಯತ್ನ ನಡೆಸುತ್ತಿದ್ದು, ಸತೀಶ ಜಾರಕಿಹೊಳಿ ಪೌಂಡೇಶನ್ ವತಿಯಿಂದ ಘಟಪ್ರಭಾದ ಸೇವಾದಳದಲ್ಲಿ ನಾಟಕ, ಗಾಯನ , ಜಾನಪದ ಕಲಾವಿದರಿಗೆ ಪ್ರೋತ್ಸಾಹ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸತೀಶ್ ಶುಗರ್ಸ ಆವಾರ್ಡ್ಸ ಕಾರ್ಯಕ್ರಮವನ್ನು ಮತ್ತೆ ಪ್ರಾರಂಭಿಸುವ ಯೋಜನೆ ಹಮ್ಮಿಕೊಂಡಿದ್ದು ಶೀಘ್ರದಲ್ಲೇ ಅದನ್ನು ಪ್ರಾರಂಭಿಸಲಾಗುವದು ಗೋಕಾಕ ಸೇರಿದಂತೆ ಜಿಲ್ಲೆಯ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದ ಸತೀಶ ಜಾರಕಿಹೊಳಿ ಅವರು ಗೆಳೆಯಾ ಚಿತ್ರ ರಾಜ್ಯಾದ್ಯಂತ ಯಶಸ್ವಿಯಾಗಿ ನಡೆಯಲಿ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಚಿತ್ರದ ನಾಯಕ ಪ್ರವೀಣಕುಮಾರ್ ಗಸ್ತಿ, ಕಲಾವಿದ ರಿಯಾಜ ಚೌಗಲಾ, ನಾಯಕಿ ನಟಿ, ನಾಯಕ ನಟರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: