RNI NO. KARKAN/2006/27779|Saturday, June 15, 2024
You are here: Home » breaking news » ಗೋಕಾಕ:ಅಕ್ರಮವಾಗಿ ಸಾಗಿಸುತ್ತಿದ್ದ 7.70 ಲಕ್ಷ ರೂ ಮೌಲ್ಯದ ಮದ್ಯವಶ

ಗೋಕಾಕ:ಅಕ್ರಮವಾಗಿ ಸಾಗಿಸುತ್ತಿದ್ದ 7.70 ಲಕ್ಷ ರೂ ಮೌಲ್ಯದ ಮದ್ಯವಶ 

ಅಕ್ರಮವಾಗಿ ಸಾಗಿಸುತ್ತಿದ್ದ 7.70 ಲಕ್ಷ ರೂ ಮೌಲ್ಯದ ಮದ್ಯವಶ

ಗೋಕಾಕ ಏ 5 : ತಾಲೂಕಿನ ಖನಗಾಂವ ಗ್ರಾಮದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 7.70 ಲಕ್ಷ ರೂ ಮೌಲ್ಯದ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿರುವ ಘಟನೆ ಮಂಗಳವಾರ ಸಾಯಂಕಾಲ ಜರುಗಿದೆ.
ಗೋಕಾಕ ವಲಯ ವ್ಯಾಪ್ತಿಯ ಖನಗಾಂವ ಗ್ರಾಮದ ಮನೆಯೊಂದರಲ್ಲಿ ಸುಮಾರು 7.70 ಲಕ್ಷ ರೂ ಮೌಲ್ಯದ ಮದ್ಯವನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ಬಗ್ಗೆ ಖಚಿತ ಮಾಹಿತಿ ಸಿಕಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ 7.30 ಗಂಟೆ ಸಮಯದಲ್ಲಿ ಅಬಕಾರಿ ನಿರೀಕ್ಷಕರು, ಉಪ ನಿರೀಕ್ಷಕರು ಹಾಗೂ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಮನೆಯಲ್ಲಿ ವಿವಿಧ ನಮೂನೆಯ 202 ಪೆಟ್ಟಿಗೆಯ ಒಟ್ಟು 1745.280 ಲೀಟರ್ ನಷ್ಟು ಮದ್ಯ ಹಾಗೂ 24 ಪೆಟ್ಟಿಗೆಯ ಒಟ್ಟು 206. 280 ಲೀಟರ್‌ನಷ್ಟು ಬೀಯರ್ ಪತ್ತೆಯಾಗಿದೆ.ಸಿಕ್ಕ ಮದ್ಯ ಹಾಗೂ ಬೀಯರನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ. ಅಕ್ರಮವಾಗಿ ಮದ್ಯಸಂಗ್ರಹಿಸಿಟ್ಟಿದ್ದ ಮನೆಯ ಮಾಲೀಕನ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Related posts: