ಗೋಕಾಕ:ದ್ವಿಚಕ್ರ ವಾಹನ ಅಫಘಾತ ಸವಾರ ಸ್ಥಳದಲ್ಲಿ ಸಾವು : ಮೇಲ್ಮಟ್ಟಿಯಲ್ಲಿ ಘಟನೆ.
ದ್ವಿಚಕ್ರ ವಾಹನ ಅಫಘಾತ ಸವಾರ ಸ್ಥಳದಲ್ಲಿ ಸಾವು : ಮೇಲ್ಮಟ್ಟಿಯಲ್ಲಿ ಘಟನೆ.
ಗೋಕಾಕ ಅ 15: ಬೈಕ್ ಸ್ಕಿಡ್ ಆಗಿ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಮೇಲ್ಮಟ್ಟಿ ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ.
ಗೋಕಾಕ ಫಾಲ್ಸ್ ಗ್ರಾಮದಿಂದ ಹುದಲಿ ಕಡೆಗೆ ಬೈಕ್ ಮೇಲೆ ಹೋಗುತ್ತಿದ ಗಂಗಾಧರ ಮಾರುತಿ ಪಣಗುತ್ತಿ (25) ಎಂಬ ಯುವಕ ನಿಯಂತ್ರಣ ತಪ್ಪಿ ಬೈಕ್ ನಿಂದ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಮೃತಯುವಕ ಮೂಲತ ಹುದಲಿ ಗ್ರಾಮದ ನಿವಾಸಿಯಾಗಿದು ಗೋಕಾಕ ಫಾಲ್ಸ್ ದಲ್ಲಿಯೂ ಸಹ ವಾಸಿಸುತ್ತಿದ ಎಂದು ಹೇಳಲಾಗುತ್ತಿದೆ ಗೋಕಾಕ ಫಾಲ್ಸ ದಿಂದ ಹುದಲಿಯಲ್ಲಿರುವ ತಮ್ಮ ಮನೆಗೆ ಮರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.