ಗೋಕಾಕ:ಮಕ್ಕಳಲ್ಲಿಯೂ ಕನ್ನಡಾಭಿಮಾನವನ್ನು ಮೂಡಿಸಿ : ತಹಶೀಲ್ದಾರ್ ಡಾ.ಭಸ್ಮೆ
ಮಕ್ಕಳಲ್ಲಿಯೂ ಕನ್ನಡಾಭಿಮಾನವನ್ನು ಮೂಡಿಸಿ : ತಹಶೀಲ್ದಾರ್ ಡಾ.ಭಸ್ಮೆ
ಗೋಕಾಕ ನ 6 : ಕನ್ನಡ ಸಂಸ್ಕೃತಿ, ಸಂಸ್ಕಾರವನ್ನು ಎಲ್ಲರೂ ಪಾಲನೆ ಮಾಡಿ ತಮ್ಮ ಮಕ್ಕಳಲ್ಲಿಯೂ ಕನ್ನಡಾಭಿಮಾನವನ್ನು ಮೂಡಿಸುವಂತೆ ತಹಶೀಲ್ದಾರ್ ಡಾ.ಮೋಹನ್ ಭಸ್ಮೆ ಹೇಳಿದರು.
ಮಂಗಳವಾರದಂದು ನಗರದ ಬಸವ ಮಂಟಪದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಮತ್ತು ಭಾವಯಾನ ಮಹಿಳಾ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಗೋಕಾಕ ಇವುಗಳ ಸಂಯುಕ್ತದಲ್ಲಿ ಹಮ್ಮಿಕೊಂಡ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಭಾಷೆಯನ್ನು ದಿನನಿತ್ಯ ಪೂಜಿಸಿ ಸದಾ ಸ್ಮರಿಸಬೇಕು.ಕನ್ನಡ ಕಲೆ, ಸಾಹಿತ್ಯ, ಸಂಸ್ಕೃತಿಗಳನ್ನು ಪ್ರೋತ್ಸಾಹಿಸಿ ಬೆಳೆಸಬೇಕು. ಸಾಹಿತಿ ಕಲಾವಿದರನ್ನು ಗೌರವಿಸಬೇಕು. ಮಾತೃಭಾಷೆ ಕನ್ನಡಕ್ಕೆ ಮೊದಲ ಆದ್ಯತೆ ನೀಡಿ ಕನ್ನಡ ಪರಂಪರೆಯನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ನೀಡುವಂತೆ ಕರೆ ನೀಡಿದರು.
ಡಾ.ರಾಜಶೇಖರ್ ಬಿರಾದಾರ ಕನ್ನಡ ಉಳಿವಿಗಾಗಿ ಹೋರಾಟ ಅಂದು-ಇಂದು ಹಾಗೂ ಭಾಗ್ಯಾ ಗುರವ್ ಕಿತ್ತೂರ ವಿಜಯೋತ್ಸವ ಕುರಿತು ಉಪನ್ಯಾಸ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿ.ಆರ್.ಬೆಳಗಲಿ ದತ್ತಿ ಪ್ರಶಸ್ತಿ ಪುರಸ್ಕೃತ ಸುರೇಶ್ ಮುದ್ದಾರ, ಛಾಯಾಶ್ರೀ ಪ್ರಶಸ್ತಿ ಪುರಸ್ಕೃತ ಛಾಯಾಗ್ರಾಹಕ ಬಿ.ಪ್ರಭಾಕರ ಇವರನ್ನು ಸತ್ಕರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷೆತೆಯನ್ನು ಕಸಾಪ ಗೋಕಾಕ ಘಟಕದ ಅಧ್ಯಕ್ಷೆ ಭಾರತಿ ಮದಬಾವಿ ವಹಿಸಿದ್ದರು.
ವೇದಿಕೆಯಲ್ಲಿ ಕ.ಸಾ.ಪ ಮಾಜಿ ಜಿಲ್ಲಾಧ್ಯಕ್ಷ ಮೋಹನ ಪಾಟೀಲ, ತಾಲೂಕು ಮಾಜಿ ಅಧ್ಯಕ್ಷ ಮಹಾಂತೇಶ ತಾವಂಶಿ, ಸಾಹಿತಿ ಪ್ರೋ.ಚಂದ್ರಶೇಖರ್ ಅಕ್ಕಿ, ಭಾವಯಾನ ವೇದಿಕೆಯ ವಸುಂಧರಾ ಕಾಳೆ, ಬಸವ ಮಂಟಪದ ರಾಜೇಶ್ ಉಳ್ಳಾಗಡ್ಡಿ ಇದ್ದರು.