RNI NO. KARKAN/2006/27779|Wednesday, October 15, 2025
You are here: Home » breaking news » ಮೂಡಲಗಿ :ಜಾತ್ರೆಗಳು ದೇಶದ ಸಂಸ್ಕøತಿ-ಪರಂಪರೆಯ ಪ್ರತೀಕ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ :ಜಾತ್ರೆಗಳು ದೇಶದ ಸಂಸ್ಕøತಿ-ಪರಂಪರೆಯ ಪ್ರತೀಕ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ 

ಜಾತ್ರೆಗಳು ದೇಶದ ಸಂಸ್ಕøತಿ-ಪರಂಪರೆಯ ಪ್ರತೀಕ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

 

ನಮ್ಮ ಬೆಳಗಾವಿ ಇ – ವಾರ್ತೆ , ಮೂಡಲಗಿ ಜ 8 :

 

ಜಾತ್ರೆಗಳು ನಮ್ಮ ದೇಶದ ಸಂಸ್ಕøತಿ ಹಾಗೂ ಪರಂಪರೆಯನ್ನು ಎತ್ತಿ ತೋರಿಸುತ್ತವೆ. ಜೊತೆಗೆ ಬಾಲ್ಯದ ಘಟನೆಗಳನ್ನು ನೆನಪು ಮಾಡುತ್ತವೆ ಎಂದು ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಸಮೀಪದ ಗುಜನಟ್ಟಿ ಗ್ರಾಮದಲ್ಲಿ ಮಂಗಳವಾರದಂದು ನಿಂಗಮ್ಮಾದೇವಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಲ್ಲ ಜಾತಿ ಜನಾಂಗದವರನ್ನು ಧಾರ್ಮಿಕತೆಯಲ್ಲಿ ಒಂದುಗೂಡಿಸುವುದೇ ಜಾತ್ರೆಯ ಉದ್ಧೇಶವೆಂದು ತಿಳಿಸಿದರು.
ಭಕ್ತರ ಇಷ್ಟಾರ್ಥಗಳನ್ನು ನಂಬಿದ ದೇವರು ಈಡೇರಿಸುವುದರಿಂದ ಅದರಿಂದ ಕೃತಾರ್ಥರಾಗಲು ದೇವರ ಸನ್ನಿಧಿಗೆ ಹೋಗಿ ಭಕ್ತಿ-ಭಾವಗಳಿಂದ ಸ್ಮರಣೆ ಮಾಡಿಕೊಳ್ಳುತ್ತಾರೆ. ಮುಂದೆಯೂ ಕಷ್ಟ-ಕಾರ್ಪಣ್ಯಗಳು ಬಾರದಂತೆ ದೇವರಲ್ಲಿ ವಿನಮ್ರದಿಂದ ಬೇಡಿಕೊಳ್ಳುತ್ತಾರೆ. ಬಾಲ್ಯದ ದಿನಗಳಲ್ಲಿ ನಡೆದಿರುವ ಘಟನೆಗಳನ್ನು ಮಿತ್ರರೊಂದಿಗೆ ಹೊಂದಿದ ಸ್ನೇಹ-ಸಂಬಂಧಗಳನ್ನು ಜಾತ್ರೆಗಳು ನೆನಪಿಸುತ್ತಿವೆ. ಜಾತ್ರೆಗಳಲ್ಲಿ ಪಾಲ್ಗೊಂಡರೆ ನಮಗೆ ಶಾಂತಿ, ನೆಮ್ಮದಿ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು.
ಶಿಕ್ಷಣಕ್ಕೆ ಒತ್ತು ನೀಡಿ : ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಸಮೀಕ್ಷೆ ಕಾರ್ಯ ರಾಜ್ಯಾಧ್ಯಂತ ಜಾರಿಯಲ್ಲಿದ್ದು, ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿಕೊಟ್ಟು ಉತ್ತಮ ಶಿಕ್ಷಣ ನೀಡಲು ಪ್ರೇರಣೆಯಾಗಬೇಕು. ಶಿಕ್ಷಣದ ಅಮೂಲಾಗ್ರ ಬದಲಾವಣೆಗೆ ಪಾಲಕರು ಸಹ ಶಿಕ್ಷಕರೊಂದಿಗೆ ಕೈಜೋಡಿಸುವಂತೆ ಇದೇ ಸಂದರ್ಭದಲ್ಲಿ ಅವರು ಮನವಿ ಮಾಡಿಕೊಂಡರು.
ಗುಜನಟ್ಟಿ ಗ್ರಾಮದ ಅಭಿವೃದ್ಧಿಗಾಗಿ ಕಳೆದ 15 ವರ್ಷಗಳಿಂದ ಸಾಕಷ್ಟು ಕಾರ್ಯಗಳನ್ನು ಕೈಗೊಳ್ಳಲಾಗಿದೆ. ನಾಗರೀಕರ ಮೂಲ ಸೌಕರ್ಯಕ್ಕೆ ಹೆಚ್ಚಿನಾದ್ಯತೆ ನೀಡಲಾಗುತ್ತಿದೆ. ಮುಂದೆಯೂ ಸಹ ಗ್ರಾಮದ ಪ್ರಗತಿಗಾಗಿ ಸರ್ಕಾರದ ಯೋಜನೆಗಳನ್ನು ಅನುಷ್ಟಾನಗೊಳಿಸಲಾಗುವುದು. ಅಭಿವೃದ್ಧಿ ಕಾರ್ಯಗಳಲ್ಲಿ ಎಲ್ಲರೂ ಒಂದಾಗಿ ಒಗ್ಗಟ್ಟಾಗಿ ದುಡಿಯುವಂತೆ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ಗ್ರಾಮಸ್ಥರಲ್ಲಿ ಮನವಿ ಮಾಡಿಕೊಂಡರು.
ಪ್ರಭಾಶುಗರ ನಿರ್ದೇಶಕರಾದ ಕೃಷ್ಣಪ್ಪ ಬಂಡ್ರೊಳ್ಳಿ, ಶಿದ್ಲಿಂಗಪ್ಪ ಕಂಬಳಿ, ನ್ಯಾಯವಾದಿ ಮುತ್ತೆಪ್ಪ ಕುಳ್ಳೂರ, ತಾಪಂ ಮಾಜಿ ಸದಸ್ಯ ಸಾಬಪ್ಪ ಬಂಡ್ರೊಳ್ಳಿ, ಲಕ್ಷ್ಮಣ ಬಂಡ್ರೋಳ್ಳಿ, ರಾಮಪ್ಪ ಅರಭಾವಿ, ಬಸವರಾಜ ಬಂಡ್ರೊಳ್ಳಿ, ಪವಾಡೆಪ್ಪ ಕುರಿಬಾಗಿ, ಅಮೃತ ದಪ್ಪಿನವರ, ಭೀಮಪ್ಪ ನಾವಿ, ಮುಂತಾದವರು ಉಪಸ್ಥಿತರಿದ್ದರು.

Related posts: