RNI NO. KARKAN/2006/27779|Monday, February 16, 2026
You are here: Home » breaking news » ಗೋಕಾಕ:ಬಸ್ ಸ್ಟೇರಿಂಗ್ ರಾಡ್ ಕಟ್ಟ್ ಆಗಿ ವಾಹನ ಪಲ್ಟಿ : 17 ವಿದ್ಯಾರ್ಥಿಗಳಿಗೆ ಗಾಯ, ಪ್ರಕರಣ ದಾಖಲು

ಗೋಕಾಕ:ಬಸ್ ಸ್ಟೇರಿಂಗ್ ರಾಡ್ ಕಟ್ಟ್ ಆಗಿ ವಾಹನ ಪಲ್ಟಿ : 17 ವಿದ್ಯಾರ್ಥಿಗಳಿಗೆ ಗಾಯ, ಪ್ರಕರಣ ದಾಖಲು 

ಬಸ್ ಸ್ಟೇರಿಂಗ್ ರಾಡ್ ಕಟ್ಟ್ ಆಗಿ ವಾಹನ ಪಲ್ಟಿ : 17 ವಿದ್ಯಾರ್ಥಿಗಳಿಗೆ ಗಾಯ, ಪ್ರಕರಣ ದಾಖಲು

ಗೋಕಾಕ ಜು 24 : ತಾಲೂಕಿನ ಮೇಲ್ಮಟ್ಟಿ ಬಳಿ, ಮರಡಿಮಠ ಗ್ರಾಮದಲ್ಲಿರುವ ಜೈ ಹನುಮಾನ್ ಆಂಗ್ಲ ಮಾಧ್ಯಮ ಶಾಲೆಗೆ ಸೇರಿದ ಬಸ್ ಸ್ಟೇರಿಂಗ್ ರಾಡ್ ಕಟ್ಟ್ ಆಗಿ ವಾಹನ ಪಲ್ಟಿಯಾದ ಘಟನೆ ಬುಧವಾರದಂದು ನಡೆದಿದೆ .

ಘಟನೆಯಲ್ಲಿ 17 ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಗಾಯಗೊಂಡ ಎಲ್ಲ ವಿದ್ಯಾರ್ಥಿಗಳನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ.
ಆಸ್ಪತ್ರೆಗೆ ಭೇಟಿನೀಡಿದ ಗೋಕಾಕ ವಲಯ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಹಾಗೂ ಗ್ರಾಮೀಣ ಠಾಣೆ ಪಿಎಸ್ಐ ಕಿರಣ ಮೋಹಿತೆ ಘಟನೆಯಲ್ಲಿ ಗಾಯಗೊಂಡ ವಿದ್ಯಾರ್ಥಿಗಳ ಆರೋಗ್ಯ ವಿಚಾರಸಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ್ದಾರೆ. ಈ ಕುರಿತು ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts: