RNI NO. KARKAN/2006/27779|Saturday, January 31, 2026
You are here: Home » breaking news » ಗೋಕಾಕ:ಕಲಾವಿದರನ್ನು ಪ್ರೋತ್ಸಾಹಿಸಿದರೆ ಅವರು ಕಲೆಯನ್ನು ಉಳಿಸಿ , ಬೆಳೆಸುತ್ತಾರೆ : ತಹಶೀಲ್ದಾರ ಡಾ.ಭಸ್ಮೆ

ಗೋಕಾಕ:ಕಲಾವಿದರನ್ನು ಪ್ರೋತ್ಸಾಹಿಸಿದರೆ ಅವರು ಕಲೆಯನ್ನು ಉಳಿಸಿ , ಬೆಳೆಸುತ್ತಾರೆ : ತಹಶೀಲ್ದಾರ ಡಾ.ಭಸ್ಮೆ 

ಕಲಾವಿದರನ್ನು ಪ್ರೋತ್ಸಾಹಿಸಿದರೆ ಅವರು ಕಲೆಯನ್ನು ಉಳಿಸಿ , ಬೆಳೆಸುತ್ತಾರೆ : ತಹಶೀಲ್ದಾರ ಡಾ.ಭಸ್ಮೆ

ಗೋಕಾಕ ಮಾ 7 : ಕಲಾವಿದರನ್ನು ಪ್ರೋತ್ಸಾಹಿಸಿದರೆ ಅವರು ಕಲೆಯನ್ನು ಉಳಿಸಿ ,ಬೆಳೆಸುತ್ತಾರೆಂದು ತಹಶೀಲ್ದಾರ ಡಾ.ಮೋಹನ ಭಸ್ಮೆ ಹೇಳಿದರು.
ಗುರುವಾರದಂದು ನಗರದ ಜ್ಞಾನ ಮಂದಿರದಲ್ಲಿ ಆಶಾಕಿರಣ ಕಲಾಟ್ರಸ್ಟ್ ನವರು ಹಮ್ಮಿಕೊಂಡ ರಂಗ ಸ್ಮರಣೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಿ ಅವರು ಮಾತನಾಡಿದರು.
ರಂಗ ಕಲಾವಿದರನ್ನು ಗುರುತಿಸಿ ಅವರ ಪ್ರತಿಭಾ ಪದರ್ಶನಕ್ಕೆ ಸೂಕ್ತ ವೇದಿಕೆ ಕಲ್ಪಿಸಬೇಕು. ಕಲಾವಿದರು ತಮ್ಮ ಕಲಾ.ಪ್ರದರ್ಶನದೊಂದಿಗೆ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುತ್ತಾ ತಮ್ಮ ಜೀವನವನ್ನು ಮೂಡಿಪಾಗಿಟ್ಟಿರುತ್ತಾರೆ. ಅಂತಹ ಕಲಾವಿದರನ್ನು ಆಶಾ ಕಿರಣ ಕಲಾ ಟ್ರಸ್ಟ್ ನವರು ಪ್ರೋತ್ಸಾಹಿಸುತ್ತಿರುವುದು ಮಾದರಿಯಾಗಿದೆ. ಇಂತಹ ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡಿ ಕಲೆ ಹಾಗೂ ಕಲಾವಿದರರನ್ನು ಬೆಳೆಸಿ ನಮ್ಮ ಮುಂದಿನ ಪಿಳಿಗೆಗೆ ಕೋಡುಗೆಯಾಗಿ ನೀಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಪ್ರಶಸ್ತಿ ಸ್ವೀಕರಸಿ ಮಾತನಾಡಿದ ಕಲಾವಿದ ಶಬ್ಬೀರ ಡಾಂಗೆ ಪ್ರೋತ್ಸಾಹವೇ ಕಲಾವಿದರಿಗೆ ಆಹಾರವಾಗಿದ್ದು, ಅದನ್ನು ನೀಡುವ ಮೂಲಕ ಜನರು ಕಲಾವಿದರನ್ನು ಪ್ರೋತ್ಸಾಹಿಸಬೇಕು. ಇಂದಿನ ಯುವ ಪಿಳಿಗೆಗೆ ಸಂಸ್ಕಾರದ ಅರಿವು ಮೂಡಿಸಿ ಅವರನ್ನು ಸಂಸ್ಕಾರವಂತರನ್ನಾಗಿ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ರಂಗಭೂಮಿ ಭೀಷ್ಮ ದಿವಂಗತ ಶ್ರೀ ಬಸವಣ್ಣೆಪ್ಪ ಹೊಸಮನಿ ರಂಗ ಪ್ರಶಸ್ತಿಯನ್ನು ಹುಬ್ಬಳ್ಳಿಯ ಕಲಾವಿದೆ ಜಯಲಕ್ಷ್ಮಿ ಪಾಟೀಲ ಹಾಗೂ ರಂಗಭೂಮಿ ದ್ರೋಣ ದಿವಂಗತ ಬಿ.ಆರ್ .ಅರಿಷಿಣಗೋಡಿ ರಂಗ ಪ್ರಶಸ್ತಿಯನ್ನು ಮೂಡಲಗಿಯ ಶಬ್ಬೀರ ಡಾಂಗೆ ಅವರಿಗೆ ನೀಡಿ ಗೌರವಿಸಲಾಯಿತು

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು ಹಾಗೂ ಕಮತಗಿಯ ಶಿವಕುಮಾರ್ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಶೋಕ ಪೂಜಾರಿ ವಹಿಸಿದ್ದರು.
ವೇದಿಕೆಯಲ್ಲಿ ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಹಾಂತೇಶ ತಾವಂಶಿ, ಸಿರಿಗನ್ನಡಂ ಮಹಿಳಾ ವೇದಿಕೆಯ ರಾಜ್ಯಾಧ್ಯಕ್ಷೆ ರಜನಿ ಜರಗ್ಯಾಳ, ಕಿರುತರೆ ಕಲಾವಿದ ಶ್ರೀಧರ , ಪ್ರೋ.ಚಂದ್ರಶೇಖರ್ ಅಕ್ಕಿ, ರವಿಅರಿಷಿಣಗೋಡಿ, ಕಲಾಟ್ರಸ್ಟ್ ಅಧ್ಯಕ್ಷೆ ಮಾಲತಿಶ್ರೀ ಇದ್ದರು .

Related posts: