RNI NO. KARKAN/2006/27779|Thursday, July 31, 2025
You are here: Home » breaking news » ಗೋಕಾಕ:ಕ್ರೀಡೆಗಳಲ್ಲಿ ಪಾಲ್ಗೋಳುವದರಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಿ ಸಾಧಕರಾಗಲು ಸಾಧ್ಯ : ತೋರಣಗಟ್ಟಿ

ಗೋಕಾಕ:ಕ್ರೀಡೆಗಳಲ್ಲಿ ಪಾಲ್ಗೋಳುವದರಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಿ ಸಾಧಕರಾಗಲು ಸಾಧ್ಯ : ತೋರಣಗಟ್ಟಿ 

ಕ್ರೀಡೆಗಳಲ್ಲಿ ಪಾಲ್ಗೋಳುವದರಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಿ ಸಾಧಕರಾಗಲು ಸಾಧ್ಯ  : ತೋರಣಗಟ್ಟಿ

ಗೋಕಾಕ ಜ 16 : ಕ್ರೀಡೆಗಳಲ್ಲಿ ಪಾಲ್ಗೋಳುವದರಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಿ ಸಾಧಕರಾಗಲು ಸಾಧ್ಯ ಎಂದು ದೈಹಿಕ ಶಿಕ್ಷಣಾಧಿಕಾರಿ ಎಲ್.ಕೆ ತೊರಣಗಟ್ಟಿ ಹೇಳಿದರು.
ಸೋಮವಾರದಂದು ನಗರದ ಲಕ್ಷ್ಮೀ ಎಜುಕೇಶನ್ ಟ್ರಸ್ಟ್ ನ ವಿವಿಧ ಅಂಗ ಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಸರ್ವಾಂಗೀಣಯ ಬೆಳವಣಿಗೆಯಲ್ಲಿ ಪಠ್ಯೇತರ ಚಟುವಟಿಕೆಗಳು ಪ್ರಮುಖಪಾತ್ರ ವಹಿಸುತ್ತವೆ. ಕ್ರೀಡಾಪಟುಗಳು ಕ್ರೀಡಾ ಮನೋಭಾವನೆಯಿಂದ ಸೋಲು ಗೆಲುವಿಗೆ ಮಹತ್ವ ನೀಡದೆ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಶಿಕ್ಷಕರು ಸೂಕ್ತ ಮಾರ್ಗದರ್ಶನ ನೀಡಿ ಅವರನ್ನು ಸಾಧಕರನ್ನಾಗಿ ಮಾಡಿ ಕಠಿಣ ಪರಿಶ್ರಮ ಹಾಗೂ ನಿರಂತರ ಪ್ರಯತ್ನದಿಂದ ಪ್ರಯತ್ನಶೀಲರಾಗಿ ಪ್ರತಿಭಾವಂತರಾಗಿರೆಂದು ಹಾರೈಸಿದರು.
ವೇದಿಕೆಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ, ಆಡಳಿತಾಧಿಕಾರಿ ಬಿ. ಕೆ ಕುಲಕರ್ಣಿ, ವಿವಿಧ ಅಂಗ ಸಂಸ್ಥೆಗಳ ಮುಖ್ಯಸ್ಥರಾದ ಅರುಣ್ ಪೂಜೇರ, ಆರ್.ಎಂ ದೇಶಪಾಂಡೆ, ಎಚ.ವ್ಹಿ.ಪಾಗನಿಸ, ಪಿ.ವ್ಹಿ.ಚಚಡಿ ಇದ್ದರು.


Related posts: