RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ಬರುವ ಜೂನ 30 ರಿಂದ ಜುಲೈ 8 ರವರೆಗೆ ಗೋಕಾಕ ಗ್ರಾಮದೇವತೆಯರ ಜಾತ್ರೆ : ಶಾಸಕ ರಮೇಶ ಘೋಷಣೆ

ಗೋಕಾಕ:ಬರುವ ಜೂನ 30 ರಿಂದ ಜುಲೈ 8 ರವರೆಗೆ ಗೋಕಾಕ ಗ್ರಾಮದೇವತೆಯರ ಜಾತ್ರೆ : ಶಾಸಕ ರಮೇಶ ಘೋಷಣೆ 

ಬರುವ ಜೂನ 30 ರಿಂದ ಜುಲೈ 8 ರವರೆಗೆ ಗೋಕಾಕ ಗ್ರಾಮದೇವತೆಯರ ಜಾತ್ರೆ : ಶಾಸಕ ರಮೇಶ ಘೋಷಣೆ

ಗೋಕಾಕ ಮಾ 30 : ಬರುವ ಜೂನ 30 ರಿಂದ ಜುಲೈ 8 ರವರೆಗೆ ಗೋಕಾಕ ಗ್ರಾಮದೇವತೆಯರ ಜಾತ್ರೆ ಅತ್ಯಂತ ವಿಜಂಭ್ರನೆಯಿಂದ ಜರುಗಲಿದೆ ಎಂದು ಶಾಸಕ ಹಾಗೂ ಜಾತ್ರಾ ಕಮಿಟಿಯ ಅಧ್ಯಕ್ಷ ರಮೇಶ ಜಾರಕಿಹೊಳಿ ಹೇಳಿದರು.

ರವಿವಾರದಂದು ನಗರದ ಗುರುವಾರಪೇಠೆ ವಡ್ಡರಗಲ್ಲಿಯಲ್ಲಿರುವ ಲಕ್ಷ್ಮೀ ದೇವಿ ದೇವಸ್ಥಾನದ ಆವರಣದಲ್ಲಿ ಜರುಗಿದ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರತಿ ಐದು ವರ್ಷಕ್ಕೊಮ್ಮೆ ಜರುಗುತ್ತಿದ್ದ ಗೋಕಾಕ ಗ್ರಾಮ ದೇವತೆಯರ ಜಾತ್ರೆ. ಮಹಾಮಾರಿ ಕೋವಿಡ ಹಾಗೂ ದೇವಿಯರ ಗುಡಿಗಳ ನವೀಕರಣ ಹಿನ್ನೆಲೆಯಲ್ಲಿ ಹತ್ತು ವರ್ಷಗಳವರೆಗೆ ಮುಂದುಡಲ್ಪಟ್ಟಿತ್ತು. ಈ ಬಾರಿಯ ಜಾತ್ರೆಯನ್ನು ಎಲ್ಲಾ ಸಮುದಾಯದವರು ಸಂಘಟಿತರಾಗಿ ಭಕ್ತಿ ಹಾಗೂ ಅತ್ಯಂತ ವಿಜಂಭ್ರನೆಯಿಂದ ಆಚರಿಸೋಣ ಎಲ್ಲಾ ಇಲಾಖೆಗಳ ಅಧಿಕಾರಿಗಳು ಜಾತ್ರೆಯೂ ವ್ಯವಸ್ಥಿತವಾಗಿ ನಡೆಯಲು ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿ ಕೊಳ್ಳಬೇಕು. ರಾಜ್ಯದಲ್ಲೇ ಪ್ರಸಿದ್ಧಿ ಪಡೆದಿರುವ ಈ ಜಾತ್ರೆಯು ಅತ್ಯಂತ ಶಾಂತಿಯುತವಾಗಿ ನಡೆಯಲು ಜನತೆ ಎಲ್ಲಾ ರೀತಿಯ ಸಹಕಾರ ನೀಡುವಂತೆ ಕೋರಿದರು.
ಜಾತ್ರಾ ಕಮಿಟಿಯ ಅಡಿವೆಪ್ಪ ಕಿತ್ತೂರ ಮಾತನಾಡಿ ಗ್ರಾಮದೇವತೆಯರ ಗುಡಿಗಳ ನವೀಕರಣ ಹಾಗೂ ನೂತನ ರಥ ನಿರ್ಮಾಣದಲ್ಲಿ ಜಾರಕಿಹೊಳಿ ಕುಟುಂಬದವರ ಪಾತ್ರ ಅಪಾರವಾಗಿದೆ. ಗುಡಿ ಆವರಣದಲ್ಲಿ ಭವ್ಯವಾದ ಸುಸಜ್ಜಿತ ಮಂಗಲ ಕಾರ್ಯಾಲಯ ನಿರ್ಮಿಸಿ ಜನರ ಸೇವೆಗೆ ನೀಡಿದ್ದಾರೆ. ಸಾರ್ವಜನಿಕರು ಈ ಜಾತ್ರೆಯಲ್ಲಿ ಭಕ್ತಿಯಿಂದ ಪಾಲ್ಗೊಂಡು ದೇವಿಯರ ಅನುಗ್ರಹಕ್ಕೆ ಪಾತ್ರರಾಗುವಂತೆ ಹೇಳಿದರು.
ಈ ಸಂದರ್ಭದಲ್ಲಿ ಅಶೋಕ ಪೂಜಾರಿ, ಅಶೋಕ ಪಾಟೀಲ, ಪ್ರಭಾಕರ ಚವ್ಹಾಣ, ಭೀಮಗೌಡ ಪೊಲೀಸ ಗೌಡರ , ರಾಜು ಮುನವಳ್ಳಿ, ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ಅಶೋಕ ಹೆಗ್ಗನ್ನವರ, ಸಗೀರ ಕೋತವಾಲ್, ಅಧಿಕಾರಿಗಳಾದ ತಹಶೀಲ್ದಾರ್ ಮೋಹನ ಭಸ್ಮೆ, ಡಿ.ವಾಯ್.ಎಸ್.ಪಿ ಡಿ.ಎಚ್.ಮುಲ್ಲಾ, ಪೌರಾಯುಕ್ತ ರಮೇಶ ಜಾಧವ್, ಎಂ.ಎಚ್.ಗಜಾಕೋಶ ಸೇರಿದಂತೆ ಅನೇಕರು ಇದ್ದರು.

Related posts: