RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಶಾಲಾ ರಜತ ಮಹೋತ್ಸವ ನಿಮಿತ್ತ ವಿವಿಧ ಸ್ಪರ್ಧೆ : ಕಡಕೋಳ

ಗೋಕಾಕ:ಶಾಲಾ ರಜತ ಮಹೋತ್ಸವ ನಿಮಿತ್ತ ವಿವಿಧ ಸ್ಪರ್ಧೆ : ಕಡಕೋಳ 

ಶಾಲಾ ರಜತ ಮಹೋತ್ಸವ ನಿಮಿತ್ತ ವಿವಿಧ ಸ್ಪರ್ಧೆ : ಕಡಕೋಳ

ಗೋಕಾಕ ಡಿ 15   : ಸ್ಥಳೀಯ  ಗೋಕಾಕ ಶಿಕ್ಷಣ  ಸಂಸ್ಥೆಯ,   ಮಾಡರ್ನ ಆಂಗ್ಲ ಮಾಧ್ಯಮ ಶಾಲೆಗೋಕಾಕ   25  ವರ್ಷಗಳನ್ನು  ಪೂರೈಸಿದ ನಿಮಿತ್ತವಾಗಿ  ವಿವಿಧ ಕ್ರೀಡೆಗಳನ್ನು ಹಾಗೂ ಸಾಂಸ್ಕೃತಿಕ  ಸ್ಪರ್ಧೆಗಳನ್ನು  ಏರ್ಪಡಿಸಲಾಗಿದೆ ಎಂದು  ಸಂಸ್ಥೆಯ  ಆಡಳಿತ ಮಂಡಳಿಯ  ಚೇರಮನ್‌  ವ್ಹಿ. ಎ. ಕಡಕೋಳ ತಿಳಿಸಿದ್ದಾರೆ .
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಚಿಕ್ಕೋಡಿ  ಹಾಗೂ  ಬೆಳಗಾವಿ  ಎರಡೂ ಶೈಕ್ಷಣಿಕ  ಜಿಲ್ಲೆಗಳ  ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ  ಆಂಗ್ಲ ಮಾಧ್ಯಮ  ಫ್ರೌಢ ಶಾಲಾ  ವಿದ್ಯಾರ್ಥಿಗಳಿಗೆ  ಅಂತರ  ಜಿಲ್ಲಾ ಮಟ್ಟದ  ಕ್ರಿಕೆಟ್‌  ಪಂದ್ಯಾವಳಿ ,ವಿದ್ಯಾರ್ಥಿನಿಯರಿಗೆ ವ್ಹಾಲಿಬಾಲ್‌  ಪಂದ್ಯಾವಳಿಗಳನ್ನು ಹಮ್ಮಿಕೊಳ್ಳಲಾಗಿದೆ
ಕ್ರಿಕೆಟ್‌  ಪಂದ್ಯಾವಳಿಗಳು ಇದೇ ತಿಂಗಳ ದಿನಾಂಕ 26 ರಿಂದ  30 ರವರೆಗೆ  ನಡೆಯಲಿದ್ದು, ಮೊದಲ ಬಹುಮಾನ ರೂ.15,000/- ದ್ವಿತೀಯ ಬಹುಮಾನ ರೂ. 10,000/-  ತೃತೀಯ ಬಹುಮಾನವಾಗಿ  ರೂ.5,000/- ನಗದು ಹಾಗೂ ವಿವಿಧ  ಆಕರ್ಷಕ ಪ್ರಶಸ್ತಿಗಳನ್ನು ನೀಡಲಾಗುವುದು.
ಬಾಲಕಿಯರ  ವ್ಹಾಲಿಬಾಲ್‌ ಪಂದ್ಯಾವಳಿಗಳು ಬರುವ  ಜನವರಿ 2 ರಿಂದ 4ರ ವರೆಗೆ ನಡೆಯಲಿದ್ದು , ಪ್ರಥಮ  ಬಹುಮಾನ ರೂ. 6,000 /-   ದ್ವಿತೀಯ ಬಹುಮಾನ  ರೂ. 4,000/-  ತೃತೀಯ ಬಹುಮಾನ ರೂ.2,000/- ನಗದು ಹಾಗೂ ಆಕರ್ಷಕ ಪ್ರಶಸ್ತಿಗಳನ್ನು ನೀಡಲಾಗುವುದು.
   ಇದೇ ಸಂದರ್ಭದಲ್ಲಿ  ಗೋಕಾಕ  ತಾಲೂಕಾ ಮಟ್ಟದ ವಿಜ್ಞಾನ ಮಾದರಿ ಪ್ರದರ್ಶನ , ರಸಪ್ರಶ್ನೆ, ಡ್ರಾಮಾ ಜ್ಯೂನಿಯರ್ಸ ಹಾಗೂ ಮೋಜಿನ  ವೇಷ  ಸ್ಪರ್ಧೆ  ಹಮ್ಮಿಕೊಳ್ಳಲಾಗಿದ್ದು, ಆ ಸ್ವರ್ಧೆಗಳಿಗೂ  ಸಹ ನಗದು ಪುರಸ್ಕಾರ , ಪ್ರಶಸ್ತಿಗಳನ್ನು  ನೀಡಲಾಗುವುದು.
  ಹೆಚ್ಚಿನ ಮಾಹಿತಿಗೆ  ಮಹಾಂತೇಶ  ಕುಮರೇಶಿ ದೈ.ಶಿ. ಮೊ ಸಂಖ್ಯೆ :8105238054  ಎಸ್.ವಿ. ಖನಗಾವಿ :9900882732   ಎಂ.ಎಂ .ಸೊಗಲದ: 8884744523, ಮುಖ್ಯೋಪಾಧ್ಯಾಯ ಎಸ್.ಕೆ. ಮಠದ  :9964403134 ಇವರನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ  ಕೋರಲಾಗಿದೆ.

Related posts: