ಗೋಕಾಕ:ಪಕ್ಷಿಗಳಿಗೆ ಸೂಕ್ತ ವಾತಾವರಣ ಕಲ್ಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಬೇಕು : ಷಕ್ಷಿ ತಜ್ಞ ಪ್ರಕಾಶ ಗೌಡರ

ಪಕ್ಷಿಗಳಿಗೆ ಸೂಕ್ತ ವಾತಾವರಣ ಕಲ್ಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಬೇಕು : ಷಕ್ಷಿ ತಜ್ಞ ಪ್ರಕಾಶ ಗೌಡರ
ಗೋಕಾಕ ಅ 27 : ಪಕ್ಷಿಗಳಿಗೆ ಸೂಕ್ತ ವಾತಾವರಣ ಕಲ್ಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಬೇಕು ಎಂದು ಧಾರವಾಡದ ವಿಶೇಷ ಪಕ್ಷಿ ತಜ್ಞ ಪ್ರಕಾಶ್ ಗೌಡರ ಹೇಳಿದರು.
ಮಂಗಳವಾರದಂದು ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರಣ್ಯ ಇಲಾಖೆ ವಿಭಾಗ, ಗೋಕಾಕ, ಪ್ರಾದೇಶಿಕ ಅರಣ್ಯ ವಲಯ ಗೋಕಾಕ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ವಿಶ್ವ ವಲಸೆ ಹಕ್ಕಿಗಳ ದಿನಾಚರಣೆ -2026 ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪರಿಸರ ನಾಶದಿಂದ ಪಕ್ಷಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಪರಿಸರ ರಕ್ಷಿಸಿ, ಪ್ರಾಣಿ ಪಕ್ಷಿಗಳ ಸಂಕುಲಗಳನ್ನು ಮುಂದಿನ ಪೀಳಿಗೆಗೆ ನೀಡಬೇಕು’ ಎಂದ ಅವರು ಪ್ರಕೃತಿ ಇಲ್ಲದೇ ಮಾನವನ ಬದುಕು ಅಸಾಧ್ಯ. ಪ್ರಕೃತಿಯನ್ನು ಪುಸ್ತಕದಲ್ಲಿ ನೋಡುವ ಬದಲು ಕಣ್ತೆರೆದು ನೋಡಿದರೆ ಅರ್ಥವಾಗುತ್ತದೆ. ಪಕ್ಷಿಗಳು ಆಹಾರ, ವಾಸಸ್ಥಳ, ಸಂತಾನೋತ್ಪತ್ತಿ, ರಕ್ಷಣೆ ಹಾಗೂ ಹವಾಮಾನಗಳ ಕಾರಣದಿಂದ ಸಾವಿರಾರು ಕಿ.ಮೀ ದೂರ ಕ್ರಮಿಸಿ ವಲಸೆ ಹೋಗುತ್ತವೆ ಅಂತಹ ಪಕ್ಷಿಗಳನ್ನು ನಾವು ಸಂರಕ್ಷಣೆ ಮಾಡಿ ಅವುಗಳ ಉಳಿಸಿ, ಬೆಳೆಸುವಂತಹರಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಲಯ ಅರಣ್ಯ ಅಧಿಕಾರಿ ಆನಂದ ಹೆಗಡೆ ವಿದ್ಯಾರ್ಥಿಗಳು ದಿನಂ ಪತ್ರಿ ಜೀವನದಲ್ಲಿ ಹಕ್ಕಿಗಳನ್ನು ಗುರುತಿಸುವ ಹವ್ಯಾಸಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಹಕ್ಕಿಗಳನ್ನು ಸಂರಕ್ಷಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅರಣ್ಯ ಇಲಾಖೆ ವತಿಯಿಂದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ವಿವಿಧ ಸರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸುರೇಶ ಕುಂದರಗಿ, ಪ್ರೋ.ವಿ.ಐ.ತಿಳಗಂಜಿ, ಪ್ರಮೋದ್ ಶಿರಗಾಂವಕರ, ಹಣಮಂತ ಹಮ್ಮನ್ಞವರ, ಅಶೋಕ ಮಧುರಿ, ಡಾ.ಆರ್.ಸಿ.ಕೊಪ್ಪದ, ಎಂ.ಎಸ್.ಹೆಬ್ಬಾಳ,ಸಂತೋಷ ಬಿ.ಎಸ್. ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
