RNI NO. KARKAN/2006/27779|Friday, March 29, 2024
You are here: Home » breaking news » ಗೋಕಾಕ: ಜಿಲ್ಲಾ ಹೋರಾಟಕ್ಕೆ ಮೂಡದ ಒಮ್ಮತ : ನ್ಯಾಯವಾದಿಗಳ ಸಂಘದಿಂದ ದಿ.15 ರಂದು ಗೋಕಾಕ ಬಂದ್

ಗೋಕಾಕ: ಜಿಲ್ಲಾ ಹೋರಾಟಕ್ಕೆ ಮೂಡದ ಒಮ್ಮತ : ನ್ಯಾಯವಾದಿಗಳ ಸಂಘದಿಂದ ದಿ.15 ರಂದು ಗೋಕಾಕ ಬಂದ್ 

ಗೋಕಾಕ ಜಿಲ್ಲಾ ಹೋರಾಟಕ್ಕೆ ಮೂಡದ ಒಮ್ಮತ :  ನ್ಯಾಯವಾದಿಗಳ ಸಂಘದಿಂದ ದಿ.15 ರಂದು ಗೋಕಾಕ ಬಂದ್

ಗೋಕಾಕ ಡಿ 13: ಗೋಕಾಕ ಜಿಲ್ಲಾ ರಚನೆಗೆ ಆಗ್ರಹಿಸಿ ಇದೇ ಶುಕ್ರವಾರ ದಿ. 15 ರಂದು ಸಂಪೂರ್ಣ ಗೋಕಾಕ ಬಂದ್ ಆಚರಿಸಲಾಗುವದು ಎಂದು ಗೋಕಾಕ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಧರ ದೇಮಶಟ್ಟಿ ಮತ್ತು ಕಾರ್ಯದರ್ಶಿ ಸಿ.ಬಿ. ಗಿಡ್ಡನವರ  ತಿಳಿಸಿದ್ದಾರೆ.

ನಗರದಲ್ಲಿ ಇಂದು ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈಗಾಗಲೇ ಈ ಹಿಂದೆ ನಡೆದ ನ್ಯಾಯವಾದಿಗಳ ಸಂಘದ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಿದಂತೆ ನಡೆಯಲಿರುವ ಗೋಕಾಕ ಬಂದ್ ದಿನದಂದು ಗೋಕಾಕ ನಗರದ ಸಮಗ್ರ ವ್ಯಾಪಾರಸ್ಥರು ತಮ್ಮ ವಾಣಿಜ್ಯ ವ್ಯವಹಾರಗಳನ್ನು ಸಂಪೂರ್ಣ ಸ್ಥಗಿತಗೊಳಿಸಿ ಬಂದ್ ಕಾರ್ಯಕ್ರಮದ ಮೆರವಣಿಗೆಯಲ್ಲಿ ಭಾಗವಹಿಸಬೇಕೆಂದು ಕೋರಿದ್ದಾರೆ.

ಮುಂಜಾನೆ 11-00 ಗಂಟೆಗೆ ನಗರದ ಶ್ರೀ ಸಂಗೊಳ್ಳಿ ರಾಯಣ್ಣಾ ವೃತ್ತದಿಂದ ಹೊರಡುವ ಮೆರವಣಿಗೆ ಅಪ್ಸರಾ ಕೂಟ, ತಂಬಾಕು ಕೂಟ, ಭಾಪನಾ ಕೂಟ, ಚಿತ್ರಾ ಟಾಕೀಜ, ಆನಂದ ಟಾಕೀಜ ರಸ್ತೆಗಳ ಮುಖಾಂತರ ಸಂಚರಿಸಿ ಶ್ರೀ ಬಸವೇಶ್ವರ ವೃತ್ತದಲ್ಲಿ ಸಭೆ ಸೇರಿ ಸರಕಾರಕ್ಕೆ ಗೋಕಾಕ ಜಿಲ್ಲೆಗಾಗಿ ಆಗ್ರಹಿಸಿ ತಹಶೀಲ್ದಾರ ಮುಖಾಂತರ ಮನವಿ ಸಲ್ಲಿಸಲಾಗುವದು ಎಂದು ತಿಳಿಸಿದ್ದಾರೆ.

ಗೋಕಾಕ ಜಿಲ್ಲಾ ರಚನೆ ಆಯೋಗಗಳ ಶಿಪಾರಸ್ಸಿಗೆ ಪೂರಕವಾಗಿದ್ದು, ಗೋಕಾಕ ಜಿಲ್ಲಾ ರಚನೆಯ ಹೋರಾಟ ಸುಮಾರು ವರ್ಷಗಳಿಂದ ನಡೆದುಬಂದಿದೆ. ಗೋಕಾಕ ಜಿಲ್ಲಾ ರಚನೆಯ ವಿಷಯ ಬಂದಾಗ ಗೋಕಾಕ ನ್ಯಾಯವಾದಿಗಳ ಸಂಘ ತಾಲೂಕಿನ ಮಠಾಧೀಶರುಗಳು, ಸಾರ್ವಜನಿಕರು, ಸಂಘ ಸಂಸ್ಥೆಗಳು, ವ್ಯಾಪಾಸ್ಥರು, ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು, ವಿಧ್ಯಾರ್ಥಿ ಸಂಘಟನೆಗಳು ಹಾಗೂ ರಾಜಕೀಯ ಮುಖಂಡರುಗಳ ಸಹಕಾರದಿಂದ ಹೋರಾಟದಲ್ಲಿ ಸಕ್ರೀಯವಾಗಿ ಸಂಘಟನಾತ್ಮಕ ರೀತಿಯಲ್ಲಿ ತನ್ನದೇ ಆದ ಪಾತ್ರ ನಿರ್ವಹಿಸುತ್ತಿದ್ದು, ಗೋಕಾಕ ಜಿಲ್ಲಾ ರಚನೆಯಾಗುವವರೆಗೆ ನಮ್ಮ ಹೋರಾಟ ನಿರಂತರ ಎಂದು ತಿಳಿಸಿದ್ದಾರೆ.

Related posts: