ಗೋಕಾಕ:ಸಚಿವ ರಮೇಶ ಪರ ಅಂಬಿರಾವ್ ಪಾಟೀಲ ಪ್ರಚಾರ

ಸಚಿವ ರಮೇಶ ಪರ ಅಂಬಿರಾವ್ ಪಾಟೀಲ ಪ್ರಚಾರ
ಗೋಕಾಕ ಮೇ 4 : ವಿಧಾನಸಭಾ ಚುನಾವಣೆ ದಿನಾಂಕ ಸಮೀಪಿಸುತ್ತಿದಂತೆ ಪ್ರಚಾರದ ಭರಾಠೆ ಜೋರಾಗಿ ನಡೆದಿದೆ . ಸಚಿವರ ಪರ ಅಳಿಯ ಅಂಬಿರಾವ್ ಪಾಟೀಲ , ಹಿರಿಯ ಮಗ ಸಂತೋಷ ಜಾರಕಿಹೊಳಿ ಮತ್ತು ಕಿರಿಯ ಮಗ ಅಮರನಾಥ ಜಾರಕಿಹೊಳಿ ಅವರು ಮನೆ ಮನೆ ತೆರಳಿ ಸರಕಾರದ ಹಾಗೂ ಸಚಿವರ ಅಭಿವೃದ್ಧಿ ಕಾರ್ಯಗಳನ್ನು ಪರಿಗಣಿಸಿ ಮತ್ತೋಮ್ಮೆ ಸಚಿವ ರಮೇಶ ಜಾರಕಿಹೊಳಿ ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸವಂತೆ ಮನವಿ ಮಾಡಿಕೋಳ್ಳುತ್ತಿದ್ದಾರೆ
ಶುಕ್ರವಾರದಂದು ಗೋಕಾಕ ಮತಕ್ಷೇತ್ರದ ಶಿಂಗಳಾಪೂರ ಗ್ರಾಮದಲ್ಲಿ ಪ್ರಚಾರ ಕೈಗೊಂಡ ಕಾರ್ಮಿಕ ಧುರೀಣ ಅಂಬಿರಾವ್ ಪಾಟೀಲ ಅವರು ಮನೆ ಮನೆ ತೆರಳಿ ಸಚಿವ ರಮೇಶ ಜಾರಕಿಹೊಳಿ ಪರ ಮತ ಯಾಚಿಸಿದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಟಿ.ಆರ್.ಕಾಗಲ್ , ಸುಧೀರ್ ಜೋಡಟ್ಟಿ , ತಾಪಂ ಸದಸ್ಯ ಕಿರಣ ಬೆನಚಿನಮರಡಿ , ಭಾಷಾಸಾಬ ಪೀರಜಾದೆ , ಆನಂದ ಮಗದುಮ್ಮ , ಆರೀಪ ಪೀರಜಾದೆ ರಶೀದ ಪೀರಜಾದೆ , ಮೊದೀನ ಪೀರಜಾದೆ , ಶಫಿ ಜಮಾದಾರ ಸೇರಿದಂತೆ ಎಲ್ಲ ಪ.ಪಂ ಸದಸ್ಯರು ಉಪಸ್ಥಿತರಿದ್ದರು