RNI NO. KARKAN/2006/27779|Tuesday, October 14, 2025
You are here: Home » breaking news » ಗೋಕಾಕ:ನಮ್ಮ ಕುಟುಂಬದಲ್ಲಿ ಕೆಲವರು ಕಾಂಗ್ರೆಸ್ ಕೆಲವರು ಬಿಜೆಪಿಯಲ್ಲಿದ್ದಾರೆ. ಅವರವರ ಶಕ್ತಿ ಸಾಮರ್ಥ್ಯ ಅವರಿಗಿದೆ : ವಿಪ ಸದಸ್ಯ ಲಖನ್

ಗೋಕಾಕ:ನಮ್ಮ ಕುಟುಂಬದಲ್ಲಿ ಕೆಲವರು ಕಾಂಗ್ರೆಸ್ ಕೆಲವರು ಬಿಜೆಪಿಯಲ್ಲಿದ್ದಾರೆ. ಅವರವರ ಶಕ್ತಿ ಸಾಮರ್ಥ್ಯ ಅವರಿಗಿದೆ : ವಿಪ ಸದಸ್ಯ ಲಖನ್ 

ನಮ್ಮ ಕುಟುಂಬದಲ್ಲಿ ಕೆಲವರು ಕಾಂಗ್ರೆಸ್ ಕೆಲವರು ಬಿಜೆಪಿಯಲ್ಲಿದ್ದಾರೆ. ಅವರವರ ಶಕ್ತಿ ಸಾಮರ್ಥ್ಯ ಅವರಿಗಿದೆ : ವಿಪ ಸದಸ್ಯ ಲಖನ್

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 17 :

ಕಳೆದ 30ವರ್ಷಗಳಿಂದ ಜಾರಕಿಹೊಳಿ ಕುಟುಂಬದ ವಿರುದ್ಧ ಷಡ್ಯಂತ್ರ ಮಾಡುತ್ತ ಬಂದಿದ್ದಾರೆ. ನಾವು ಎಲ್ಲ ಸಮಾಜದವರೊಂದಿಗೆ ಸಾಮರಸ್ಯದಿಂದಿದ್ದೆ ಎಂದು ವಿಧಾನ ಪರಿಷತ ಸದಸ್ಯ ಲಖನ್ ಜಾರಕಿಹೊಳಿ ಹೇಳಿದರು.
   ಅವರು, ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಕೆಲವರು ನಮ್ಮ ವಿರುದ್ಧ ಷಡ್ಯಂತ್ರ ಮಾಡುವವರ ಬಗ್ಗೆ ನಾವು ತೆಲೆಕೆಡಿಸಿಕೊಂಡಿಲ್ಲ. ಇದರ ಬಗ್ಗೆ ಹೆಚ್ಚು ಮಾತನಾಡಲು ಇಷ್ಟವಿಲ್ಲ. ನಮ್ಮ ಜತೆಗೆ ಜನ ಇದ್ದಾರೆ. ನಾವು ಹೆಚ್ಚು ಮಾತಾಡಿದ್ದಲ್ಲಿ ಅವರಿಗೆ ಪಬ್ಲಿಸಿಟಿ ಕೊಟ್ಹಾಗೆ ಆಗುತ್ತೆ ಹೀಗಾಗಿ ಹೆಚ್ಚು ಮಾತಾಡಲ್ಲ ಎಂದರು.
   ನಮ್ಮ ಕುಟುಂಬದಲ್ಲಿ ಕೆಲವರು ಕಾಂಗ್ರೆಸ್ ಕೆಲವರು ಬಿಜೆಪಿಯಲ್ಲಿದ್ದಾರೆ. ಅವರವರ ಶಕ್ತಿ ಸಾಮರ್ಥ್ಯ ಅವರಿಗಿದೆ ಅದನ್ನು ಹೇಗೆ ಉಪಯೋಗಿಸುವದು ಅವರಿಗೆ ಬಿಟ್ಟದ್ದು, ಕಾಣದ ಕೈಗಳು ಕೆಲಸ ಮಾಡುತ್ತವೆ ನಮನ್ನು ಸೋಲಿಸಲಬೇಂಕೆಂದು ಲೆಕ್ಕ ಹಾಕಿದ್ದಾರೆ ಅದು ಸಾಧ್ಯವಿಲ್ಲ ಏಕೆಂದರು ಅದನ್ನು ಜನರು ನಿರ್ಣಯಿಸುತ್ತಾರೆ. ಪೆನ್ನು ಅವರದೆ ಹಾಳೆಯೂ ಅವರದೆ ಇನ್ನು ಎರಡಮೂರು ತಿಂಗಳು ಸಂತೋಷವಿರುತ್ತೆ ಮಾಡಲಿ. ನಮಗೆ ಇದೇನು ಹೊಸದಲ್ಲ ಎಂದು ವಿರೋಧಿಗಳ ವಿರುದ್ಧ ಲಖನ್ ವಾಗ್ದಾಳಿ ನಡೆಸಿದರು

Related posts: