RNI NO. KARKAN/2006/27779|Monday, June 16, 2025
You are here: Home » breaking news » ಘಟಪ್ರಭಾ:ಘಟಪ್ರಭಾ ಐ.ಡಿ.ಬಿ.ಐ ಬ್ಯಾಂಕ ಕಳ್ಳತನಕ್ಕೆ ಯತ್ನ – ವಿಫಲ

ಘಟಪ್ರಭಾ:ಘಟಪ್ರಭಾ ಐ.ಡಿ.ಬಿ.ಐ ಬ್ಯಾಂಕ ಕಳ್ಳತನಕ್ಕೆ ಯತ್ನ – ವಿಫಲ 

ಘಟಪ್ರಭಾ ಐ.ಡಿ.ಬಿ.ಐ ಬ್ಯಾಂಕ ಕಳ್ಳತನಕ್ಕೆ ಯತ್ನ – ವಿಫಲ

 

ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಜೂ 7 :

 

 

ಇಲ್ಲಿನ ಮುಖ್ಯ ರಸ್ತೆಯಲ್ಲಿರುವ ಐ.ಡಿ.ಬಿ.ಐ ಬ್ಯಾಂಕ ಕಳ್ಳತನಕ್ಕೆ ಕಳ್ಳರು ಪ್ರಯತ್ನಿಸಿ ವಿಫಲರಾಗಿದ್ದಾರೆ.
ರವಿವಾರ ರಾತ್ರಿ 1 ಗಂಟೆ ಸುಮಾರಿಗೆ ಇಲ್ಲಿಯ ವರ್ಜಿ ಕಾಂಪ್ಲೇಕ್ಸ್‍ನ 2 ನೇ ಅಂತಸ್ತಿನಲ್ಲಿರುವ ಐ.ಡಿ.ಬಿ.ಐ ಬ್ಯಾಂಕಿಗೆ ನುಗ್ಗಿದ ಕಳ್ಳರು ಮೊದಲು ಸಿಸಿ ಟಿ.ವ್ಹಿ ಕ್ಯಾಮರಾ ಹಾಗೂ ಅಲಾರ್ಮ ಬಂದ ಮಾಡಿದ್ದಾರೆ. ನಂತರ ಹಣವಿರುವ ಲಾಕರವನ್ನು ಒಡೆಯಲು ಯತ್ನಸಿದ್ದಾರೆ ಒಡೆಯಲು ಸಾಧ್ಯವಾಗದೆ ಕಾರಣ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಮುಂಜಾನೆ ಸ್ಥಳಕ್ಕೆ ಆಗಮಿಸಿದ ಘಟಪ್ರಭಾ ಪೊಲೀಸರು ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಕರೆಯಿಸಿ ತಪಾಸನೆ ನಡೆಸಿದ್ದಾರೆ. ಈ ಕುರಿತು ಘಟಪ್ರಭಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ಯಾಂಕ ಸಿಬ್ಬಂದಿಗೆ ಸಿಪಿಐ ತರಾಟೆ: ಘಟನಾ ಸ್ಥಳಕ್ಕೆ ಆಗಮಿಸಿದ ಸಿಪಿಐ ಶ್ರೀಶೈಲ ಬ್ಯಾಕೂಡ, ಬ್ಯಾಂಕಿನಲ್ಲಿ ಸುರಕ್ಷೆಯ ದೃಷ್ಠಿಯಿಂದ ಯಾವುದೇ ಮುಂಜಾಗೃತಾ ಕ್ರಮಗಳನ್ನು ಯಾಕೇ ಕೈಗೊಂಡಿಲ್ಲ. ಬ್ಯಾಂಕಿನ ಸಿಸಿ ಕ್ಯಾಮರಾಗಳು ತೀರಾ ಕಳಪೆ ಮಟ್ಟಗಾಗಿದ್ದು, ಕಳ್ಳರ ಬಗ್ಗೆ ಯಾವುದೆ ಸುಳಿವು ದೊರಕುತ್ತಿಲ್ಲ ಅಲ್ಲದೇ ರಾತ್ರಿ ವೇಳೆಯಲ್ಲಿ ಬ್ಯಾಂಕಿನಲ್ಲಿ ಸೆಕ್ಯೂರಿಟಿ ಗಾರ್ಡ ಯಾಕೆ ಇರಲಿಲ್ಲ ಎಂದು ಬ್ಯಾಂಕಿನ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು.

Related posts: