RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ಮನುಕುಲದ ಸೇವೆಯೆ ಲಾಯನ್ಸ ಸಂಸ್ಥೆಯ ಪರಮೋಚ್ಚ ಉದ್ದೇಶವಾಗಿದೆ : ಜೈಅಮೋಲ ನಾಯಿಕ

ಗೋಕಾಕ:ಮನುಕುಲದ ಸೇವೆಯೆ ಲಾಯನ್ಸ ಸಂಸ್ಥೆಯ ಪರಮೋಚ್ಚ ಉದ್ದೇಶವಾಗಿದೆ : ಜೈಅಮೋಲ ನಾಯಿಕ 

ಮನುಕುಲದ ಸೇವೆಯೆ ಲಾಯನ್ಸ ಸಂಸ್ಥೆಯ ಪರಮೋಚ್ಚ ಉದ್ದೇಶವಾಗಿದೆ : ಜೈಅಮೋಲ ನಾಯಿಕ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 11 :
ಮನುಕುಲದ ಸೇವೆಯೆ ಲಾಯನ್ಸ ಸಂಸ್ಥೆಯ ಪರಮೋಚ್ಚ ಉದ್ದೇಶವಾಗಿದೆ ಎಂದು ಲಾಯನ್ಸ ಸಂಸ್ಥೆಯ ಜೈಅಮೋಲ ನಾಯಿಕ ಹೇಳಿದರು
ರವಿವಾರದಂದು ನಗರದಲ್ಲಿ ಸ್ಥಳೀಯ ಲಾಯನ್ಸ ಸಂಸ್ಥೆಯವರು ಆಯೋಜಿಸಿದ್ದ ವಲಯ ಮಟ್ಟದ ಲಾಯನ್ಸ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತಿನಾದ್ಯಂತ ಲಾಯನ್ಸ ಸಂಸ್ಥೆ ತಮ್ಮ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಜನರ ವಿಶ್ವಾಸಗಳಿಸಿದೆ. ಆರೋಗ್ಯ, ಹಸಿವು ನಿವಾರಣೆ, ಶಿಕ್ಷಣ ಸೇರಿದಂತೆ ಮಾನವೀಯ ಸಮಾಜಿಕ ಕಳಕಳಿಯ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಈ ಸಂಸ್ಥೆ ನಾಯಕತ್ವ ಗುಣಗಳನ್ನು ಬೆಳೆಸುವದರೊಂದಿಗೆ ವಿಶ್ವಾದ್ಯಂತ ಸ್ನೇಹಿತರನ್ನು ಪಡೆಯಲು ಸಹಕಾರಿಯಾಗಿ ಎಂದರು.
ಈ ಕಾರ್ಯಾಗಾರದಲ್ಲಿ ಲಾಯನ್ಸ ಸಂಸ್ಥೆಯ ಪದಾಧಿಕಾರಿಗಳಾದ ಜಿ.ಎಸ್.ಸಿದ್ದಾಪೂರಮಠ, ಡಾ.ಕೀರ್ತಿ ನಾಯಕ,ರಿತೇಶ್ ಜೈನ, ಭಾರತಿ ವಾಡವಿ , ಸುದೇಶ ಬೋರಕರ, ಸತೀಶ್ ಬಾಳೇಕುಂದರಗಿ, ಶಶಿಕಾಂತ ಜೋಷಿ ಅವರು ವಿವಿಧ ವಿಷಯಗಳ ಕುರಿತು ತರಬೇತಿ ನೀಡಿದರು.

ಈ ಕಾರ್ಯಕ್ರಮದಲ್ಲಿ ಸ್ಥಳೀಯ ಲಾಯನ್ಸ ಸಂಸ್ಥೆಯ ಡಾ.ಅಶೋಕ ಮುರಗೋಡ,ಮಹೇಂದ್ರ ಪೋರವಾಲ, ಪುರುಷೋತ್ತಮ ಭಾಪನಾ, ಡಾ.ಅಶೋಕ ಪಾಟೀಲ, ಅಶೋಕ ಲಗಮಪ್ಪಗೋಳ ಸೇರಿದಂತೆ ಅನೇಕರು ಇದ್ದರು.
ಎಸ್.ಕೆ ಮಠದ ಸ್ವಾಗತಿಸಿದರು, ಎಸ್.ಎಂ ಹಂಜಿ ವಂದಿಸಿದರು

Related posts: