RNI NO. KARKAN/2006/27779|Saturday, July 27, 2024
You are here: Home » breaking news » ಗೋಕಾಕ:“ನನ್ನ ಮಣ್ಣು ನನ್ನ ದೇಶ” ಅಭಿಯಾನದಡಿ ಮಣ್ಣು ಸಂಗ್ರಹಣೆ ಕಾರ್ಯಕ್ರಮಕ್ಕೆ ಚಾಲನೆ

ಗೋಕಾಕ:“ನನ್ನ ಮಣ್ಣು ನನ್ನ ದೇಶ” ಅಭಿಯಾನದಡಿ ಮಣ್ಣು ಸಂಗ್ರಹಣೆ ಕಾರ್ಯಕ್ರಮಕ್ಕೆ ಚಾಲನೆ 

“ನನ್ನ ಮಣ್ಣು ನನ್ನ ದೇಶ” ಅಭಿಯಾನದಡಿ ಮಣ್ಣು ಸಂಗ್ರಹಣೆ ಕಾರ್ಯಕ್ರಮಕ್ಕೆ ಚಾಲನೆ

ಗೋಕಾಕ ಸೆ 12 : ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ನಗರದ ಸೈನಿಕ ಬಡಾವಣೆಯ ಮಹಾಗಣಪತಿ ದೇವಸ್ಥಾನ ಆವರಣದಲ್ಲಿ ಮಂಗಳವಾರದಂದು “ನನ್ನ ಮಣ್ಣು ನನ್ನ ದೇಶ” ಅಭಿಯಾನದಡಿ ಮಣ್ಣು ಸಂಗ್ರಹಣೆ ಕಾರ್ಯಕ್ರಮ ನಡೆಯಿತು.
ಗೋಕಾಕ ಬಿಜೆಪಿ ಗ್ರಾಮೀಣ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ ಅವರು ಮಾತನಾಡಿ, ದೇಶದ ರಕ್ಷಣೆಗೆ ಜೀವನವನ್ನು ಮುಡುಪಾಗಿ ಇಟ್ಟಿರುವಂತಹ ಯೋಧರನ್ನು ಸ್ಮರಿಸುವಂತಹ ಕಾರ್ಯಕ್ರಮವಾಗಿದೆ, ಪ್ರತಿಯೊಬ್ಬ ಮನುಷ್ಯನು ದೇಶ ಅಭಿಮಾನವನ್ನು ಮೈಗೂಡಿಸಿಗೊಳ್ಳಬೇಕು, ಪ್ರತಿಯೊಬ್ಬರು ದೇಶಕ್ಕಾಗಿ ನನ್ನ ಕೊಡುಗೆ ಏನು ಎಂಬುದನ್ನು ಪ್ರಶ್ನೆ ಮಾಡಿಕೊಳ್ಳಬೇಕು. ದೇಶದಲ್ಲಿ ನಾವು ಸುರಕ್ಷತೆಯಿಂದ ವಾಸಿಸುತ್ತೇವೆ ಎಂದರೆ ಅದು ಯೋಧರ ಕೊಡುಗೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಅಧಿಕಾರವಧಿಯಲ್ಲಿ ಸೈನಿಕರಿಗೆ ಅತ್ಯುತ್ತಮ ಸೌಲಭ್ಯಗಳನ್ನು ನೀಡಿದ್ದಾರೆ. ದೇಶದ ಭದ್ರತೆಗೆ ಹಗಲಿರುಳು ಶ್ರಮಿಸುತ್ತಿರುವ ನಮ್ಮ ರಕ್ಷಕರಾದ ಸೈನಿಕರನ್ನು ಪ್ರತಿಯೊಬ್ಬರು ಪ್ರತಿನಿತ್ಯ ಸ್ಮರಿಸುವ ಹಾಗೂ ಅವರಿಗೆ ಗೌರವ ನೀಡುವ ಕಾರ್ಯವಾಗಬೇಕಿದೆ ಎಂದು ತಿಳಿಸಿದರು.
ಮಹಾಗಣಪತಿಗೆ ವಿಶೇಷ ಪೂಜೆ ನಡೆಸಿ, ಕಳಸ ಪೂಜೆ ಹಾಗೂ ದೇವಸ್ಥಾನದಲ್ಲಿ ಆವರಣದಲ್ಲಿ ಸಸಿ ನೆಡಲಾಯಿತು. ನಂತರ ಮನೆ ಮನೆಗೆ ತೆರಳಿ ಮಣ್ಣು ಸಂಗ್ರಹಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ, ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮಣ್ಣವರ, ಓಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಮಾಳೇದ, ಸುರೇಶ ಸನದಿ, ಪದಾಧಿಕಾರಿಗಳಾದ ಜಯಾನಂದ ಹುಣಚ್ಯಾಳ, ಬಾಳೇಶ ಗಿಡ್ಡನವರ, ರಾಜೇಶ್ವರಿ ಒಡೆಯರ, ಸುರೇಶ ಪತ್ತಾರ, ಮಂಜುನಾಥ ಪ್ರಭುನಟ್ಟಿ, ಬಾಳೇಶ ತೋಟಗಿ, ಕುಸುಮಾ ಖನಗಾಂವಿ, ಲಕ್ಕಪ್ಪ ತಹಶೀಲದಾರ, ಸದರಜೋಶಿ, ಮುಖಂಡರುಗಳಾದ ಕುತ್ಬುದ್ದಿನ ಗೋಕಾಕ, ಬಸವರಾಜ ಆರೇನ್ನವರ, ದುರ್ಗಪ್ಪ ಶಾಸ್ತ್ರಿಗೊಲ್ಲರ, ಅಬ್ಬಾಸ ದೇಸಾಯಿ, ಪ್ರಕಾಶ ಮುರಾರಿ, ಯೂಸುಫ ಅಂಕಲಗಿ, ಹರೀಶ ಬೂದಿಹಾಳ, ಅಬ್ದುಲಸತ್ತಾರ ಶಭಾಶಖಾನ, ಶಿವಪ್ಪ ಗುಡ್ಡಾಕಾಯು, ಶ್ರೀರಂಗ ನಾಯ್ಕ, ವಿಜಯ ಜತ್ತಿ ಸೇರಿದಂತೆ ಅನೇಕರು ಇದ್ದರು.

Related posts: