RNI NO. KARKAN/2006/27779|Monday, February 2, 2026
You are here: Home » breaking news » ಬೆಳಗಾವಿ:ಸತೀಶಗೆ ಲೋಕೋಪಯೋಗಿ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಹೊಣೆ ?

ಬೆಳಗಾವಿ:ಸತೀಶಗೆ ಲೋಕೋಪಯೋಗಿ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಹೊಣೆ ? 

ಸತೀಶಗೆ ಲೋಕೋಪಯೋಗಿ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಹೊಣೆ ?

ಬೆಳಗಾವಿ ಮೇ 17 : ಬಹು ನಿರೀಕ್ಷಿತ ಸಿಎಂ ಆಯ್ಕೆ ಕೊನೆಯ ಹಂತ ತಲುಪಿದ್ದು, ಇಂದು ಸಾಯಂಕಾಲದವರೆಗೆ ಸಿಎಂ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬಿಳಲಿದೆ‌.
ಇಂದು ಸಾಯಂಕಾಲದವರೆಗೆ ಸಿಎಂ ಹೆಸರು ಪೈನಲ ಆದ ಬೆನ್ನಲ್ಲೇ ನಾಳೆ ರಾಜ್ಯದ ನೂತನ ಸಿಎಂ ಪ್ರಮಾಣ ವಚನ ಸ್ವೀಕರಿಸಿಲಿದ್ದು, ನಂತರ ಸಂಪುಟ ವಿಸ್ತರಣೆ ನಡೆಲಿದೆ. ಈಗಾಗಲೇ ಸಂಪುಟ ಸೇರಲು ಹಲವಾರು ಪ್ರಭಾವಿ ನಾಯಕರು ಕಸರತ್ತು ನಡೆಸುತ್ತಿರುವ ಬೆನ್ನಲ್ಲೇ ಬೆಳಗಾವಿ ಜಿಲ್ಲೆಯ ಪ್ರಭಾವಿ ನಾಯಕ ಸತೀಶ ಜಾರಕಿಹೊಳಿ ಅವರಿಗೆ ಲೋಕೋಪಯೋಗಿ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ಜವಾಬ್ದಾರಿ ನೀಡಲು ಹೈಕಮಾಂಡ್ ಮತ್ತು ರಾಜ್ಯ ನಾಯಕರು ನಿರ್ಧರಿಸಿದ್ದಾರೆ ಎಂದು ಅವರ ಆಪ್ತ ಮೂಲಗಳಿಂದ ತಿಳಿದು ಬಂದಿದೆ .

Related posts: