RNI NO. KARKAN/2006/27779|Sunday, May 10, 2026
You are here: Home » breaking news » ಗೋಕಾಕ:ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳಿಗೆ ಗೂಲಾಬಿ ಹೂ, ಮತ್ತು ಸಿಹಿ ಕೊಟ್ಟು ಸ್ವಾಗತಿಸಿದ ಬಿಇಒ ಜಿ.ಬಿ.ಬಳಗಾರ

ಗೋಕಾಕ:ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳಿಗೆ ಗೂಲಾಬಿ ಹೂ, ಮತ್ತು ಸಿಹಿ ಕೊಟ್ಟು ಸ್ವಾಗತಿಸಿದ ಬಿಇಒ ಜಿ.ಬಿ.ಬಳಗಾರ 

ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳಿಗೆ ಗೂಲಾಬಿ ಹೂ, ಮತ್ತು ಸಿಹಿ ಕೊಟ್ಟು ಸ್ವಾಗತಿಸಿದ ಬಿಇಒ ಜಿ.ಬಿ.ಬಳಗಾರ

 

ನಮ್ಮ ಬೆಳಗೂ ಇ – ವಾರ್ತೆ, ಗೋಕಾಕ ಮಾ 28 :

 
ಗೋಕಾಕ ಶೈಕ್ಷಣಿಕ ವಲಯದಲ್ಲಿ ಇಂದಿನಿಂದ ಪ್ರಾರಂಭವಾದ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಮೊದಲದಿನ ಸುಗಮವಾಗಿ ಜರುಗಿದವು.

ಸೋಮವಾರದಂದು ಬೆಳ್ಳಗೆ ಕ್ರೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಮತ್ತು ಇಲಾಖೆ ಪ್ರಮುಖ ಅಧಿಕಾರಿಗಳು ಹಾಗೂ ಇಲ್ಲಿನ ಜೆಸಿಐ ಸಂಸ್ಥೆಯವರು ನಗರದ ಬಸವೇಶ್ವರ ವೃತ್ತದಲ್ಲಿ ನಿಂತು ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿಗಳಿಗೆ ಗೂಲಾಬಿ ಹೂ, ಮತ್ತು ಸಿಹಿ ಕೊಟ್ಟು ಸ್ವಾಗತಿಸಿ , ವಿದ್ಯಾರ್ಥಿಗಳು ಭಯಮುಕ್ತ ಪರೀಕ್ಷೆ ಬರೆಯುವಂತೆ ಧೈರ್ಯ ತುಂಬಿದರು.

ವಲಯದಲ್ಲಿ ಪರೀಕ್ಷೆ ಬರೆಯಲು ಸ್ಥಾಪಿಸಲಾದ ಒಟ್ಟು 21 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 4514ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದರು. ಒಟ್ಟು 22 ವಿದ್ಯಾರ್ಥಿಗಳು ಮೊದಲ ದಿನ ಪರೀಕ್ಷೆ ಗೈರು ಹಾಜರಿ ಯಾಗಿದ್ದರು.
ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ತೊಂದರೆಯಾಗದಂತೆ ಪ್ರತಿ ಕೇಂದ್ರದಲ್ಲಿ ನೀರು, ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿ‌ಸಲಾಗಿತು.
ಅಹಿತಕರ ಘಟನೆಗಳು ನಡೆಯದಂತೆ ತಾಲೂಕಾಡಳಿತ ಮತ್ತು ಪೊಲೀಸ್ ಇಲಾಖೆಯಿಂದ ಬೀಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು

ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಗೋಪಾಲ ಮಾಳಗಿ , ಎಂ ಬಿ ಪಾಟೀಲ, ಜೆಸಿಐ ಸಂಸ್ಥೆಯ ವಿಷ್ಣು ಲಾತೂರ, ರಜನಿಕಾಂತ್ ಮಾಳೋದೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

Related posts: