RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ಸಮಾಜಕ್ಕೆ ಬೇಕಾಗುವ ಎಲ್ಲ ಕ್ಷೇತ್ರದವರನ್ನು ಕೊಡುವ ಶಕ್ತಿ ಶಿಕ್ಷಕರಿಗೆ ಮಾತ್ರ ಇದೆ : ಬಿ.ಕೆ ಕುಲಕರ್ಣಿ

ಗೋಕಾಕ:ಸಮಾಜಕ್ಕೆ ಬೇಕಾಗುವ ಎಲ್ಲ ಕ್ಷೇತ್ರದವರನ್ನು ಕೊಡುವ ಶಕ್ತಿ ಶಿಕ್ಷಕರಿಗೆ ಮಾತ್ರ ಇದೆ : ಬಿ.ಕೆ ಕುಲಕರ್ಣಿ 

ಸಮಾಜಕ್ಕೆ ಬೇಕಾಗುವ ಎಲ್ಲ ಕ್ಷೇತ್ರದವರನ್ನು ಕೊಡುವ ಶಕ್ತಿ ಶಿಕ್ಷಕರಿಗೆ ಮಾತ್ರ ಇದೆ : ಬಿ.ಕೆ ಕುಲಕರ್ಣಿ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 30 :

 

ಸಮಾಜಕ್ಕೆ ಬೇಕಾಗುವ ಎಲ್ಲ ಕ್ಷೇತ್ರದವರನ್ನು ಕೊಡುವ ಶಕ್ತಿ ಶಿಕ್ಷಕರಿಗೆ ಮಾತ್ರ ಇದೆ ಎಂದು ಇಲ್ಲಿನ ಎಸ್.ಎಲ್.ಜೆ ಪ್ರೌಢಶಾಲೆಯ ಮುಖೋಫಾದ್ಯಯ ಬಿ.ಕೆ ಕುಲಕರ್ಣಿ ಹೇಳಿದರು.

ಬುಧವಾರದಂದು ನಗರದ ಲಕ್ಷ್ಮೀ ಎಜುಕೇಶನ್ ಟ್ರಸ್ಟ್ ನ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಬಿ.ಇಡಿ ಕಾಲೇಜಿನ ಅಂತಿಮ ವರ್ಷದ ಪ್ರಾಶಿಕ್ಷಣಾರ್ಥಿಗಳ ಬಿಳ್ಕೋಡುವ ಮತ್ತು ದೀಪದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಸಮಾಜದಲ್ಲಿ ಶಿಕ್ಷಕರಿಗೆ ಗೌರವಯುತ ಸ್ಥಾನವಿದೆ. ಶಿಕ್ಷಕರು ವೃತ್ತಿಯನ್ನು ಗೌರವಿಸಿ ವಿಷಯದ ಆಳವಾದ ಜ್ಞಾನವನ್ನು ಹೊಂದಿ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಪ್ರೀತಿಸಿ ಬೋಧಿಸಬೇಕು. ವಿದ್ಯಾರ್ಥಿಗಳೇ ದೇಶದ ಭವಿಷ್ಯವಾಗಿದ್ದು, ಅವರಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರವನ್ನು ನೀಡಿ ಒಳ್ಳೆಯ ನಾಗರಿಕರನ್ನಾಗಿ ರೂಪಿಸಿ ದೇಶಕ್ಕೆ ಕೊಡುಗೆಯಾಗಿ ನೀಡುವಂತೆ ಕರೆ ನೀಡಿದರು.
ಸಮಾರಂಭವನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ ಉದ್ಘಾಟಿಸಿದರು.
ವೇದಿಕೆಯಲ್ಲಿ ಪ್ರಾಚಾರ್ಯ ಡಾ. ಎಸ್.ಎಂ.ನಧಾಫ, ಉಪನ್ಯಾಸಕಿ ಎ.ಎಸ್.ಬಿಳಗಿ ಇದ್ದರು.

Related posts: