ಘಟಪ್ರಭಾ:ಘಟಪ್ರಭಾದಲ್ಲಿ ಈದ್ ಉಲ್ ಫಿತರ ಹಬ್ಬ ಆಚರಣೆ

ರಮಜಾನ ಹಬ್ಬದ ನಿಮಿತ್ಯ ಪ್ರಾರ್ಥನೆ ಸಲ್ಲಿಸಲು ಈದ್ಗಾದಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿರುವ ಸ್ಥಳೀಯ ಮುಸ್ಲಿಂ ಸಮಾಜದ ಬಾಂಧವರು.
ಘಟಪ್ರಭಾದಲ್ಲಿ ಈದ್ ಉಲ್ ಫಿತರ ಹಬ್ಬ ಆಚರಣೆ
ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಜೂ 5 :
ಸ್ಥಳೀಯ ಮುಸ್ಲಿಂ ಸಮಾಜದ ಬಾಂಧವರಿಂದ ರಮಜಾನ (ಈದ್ ಉಲ್ ಫಿತರ) ಹಬ್ಬವನ್ನು ಬುಧವಾರ ಸಂಭ್ರಮದಿಂದ ಆಚರಿಸಲಾಯಿತು. ಮುಂಜಾನೆ ಗ್ರಾಮದ ಹೊರವಲಯದಲ್ಲಿರುವ ಈದ್ಗಾಗೆ ಮುಸ್ಲಿಂ ಬಾಂಧವರು ಸಾವಿರಾರು ಸಂಖ್ಯೆಯಲ್ಲಿ ತೆರಳಿ ಪ್ರಾರ್ಥನೆ (ನಮಾಜ) ಸಲ್ಲಿಸದರು.
ಮೌಲಾನಾ ಅಬ್ದುಲಗಫೂರ ನಯೀಮಿ ಪ್ರಾರ್ಥನೆ ನೇರವೆರಿಸಿದರು. ಘಟಪ್ರಭಾ ಅಹಲೆ ಸುನ್ನತ ಜಮಾತದ ನೂರ ಪೀರಜಾದೆ, ಶಾಹೀದ ಹುದಲಿ, ಗೌಸ ಬಾಗವಾನ, ಸಮಾಜದ ಮುಖಂಡರಾದ ಸುಲ್ತಾನಸಾಬ ಕಬ್ಬೂರÀ, ಪಟ್ಟಣ ಪಂಚಾಯತಿ ಸದಸ್ಯರಾದ ಸಲೀಮ ಕಬ್ಬೂರ, ಇಮ್ರಾನ ಬಟಕುರ್ಕಿ, ಸೇರಿದಂತೆ ಅನೇಕ ಮುಖಂಡರು. ಅಪಾರ ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಹಾಗೂ ಯುವಕರು ಉಪಸ್ಥಿತರಿದ್ದರು.