ಗೋಕಾಕ:ಕನ್ನಡ ನಾಡು ಕಂಡ ಅಪರೂಪದ ಹೃದಯವಂತ ಕವಿ ನಾಡೋಜ ಚನವೀರ ಕಣವಿ : ಅಕ್ಕಿ
ಕನ್ನಡ ನಾಡು ಕಂಡ ಅಪರೂಪದ ಹೃದಯವಂತ ಕವಿ ನಾಡೋಜ ಚನವೀರ ಕಣವಿ : ಅಕ್ಕಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 18 :
ಕನ್ನಡ ನಾಡು ಕಂಡ ಅಪರೂಪದ ಹೃದಯವಂತ ಕವಿ ನಾಡೋಜ ಚನವೀರ ಕಣವಿ ಅವರು ಅತಿ ಹೆಚ್ಚು ಕವಿತೆ ರಚಿಸಿ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತ ಗೋಳಿಸಿದ್ದರು ಎಂದು ಇಲ್ಲಿನ ಸಾಹಿತಿ ಪ್ರೋ ಚಂದ್ರಶೇಖರ್ ಅಕ್ಕಿ ಹೇಳಿದರು.
ಗುರುವಾರದಂದು ನಗರದ ಕೆಎಲ್ಇ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಕಣವಿ ಅವರ ಅಭಿಮಾನಿಗಳು ಆಯೋಜಿಸಿದ್ದ ಕವಿ ಚನವೀರ ಕಣವಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತಾ ಕಣವಿ ಅವರ ಕವಿತೆಗಳಲ್ಲಿ ನಿರ್ಸಗ ಪ್ರೇಮ , ದಾಂಪತ್ಯ ಜೀವನ ಹಾಗೂ ಮಾನವೀಯ ಮೌಲ್ಯಗಳಿಂದ ಓದುಗರ ಮನಗಳಲ್ಲಿ ಸದಾ ನೆಲೆಸಿರುತ್ತಾರೆಂದು ಹೇಳಿದರು.
ಈ ಸಂದರ್ಭದಲ್ಲಿ ಕೆಎಲ್ಇ ನಿರ್ದೇಶಕ ಜಯಾನಂದ ಮುನ್ನೋಳಿ, ಕಸಾಪ ತಾಲೂಕಾ ಅಧ್ಯಕ್ಷೆ ಭಾರತಿ ಮದಬಾಂವಿ, ಮಹಾಂತೇಶ ತಾಂವಶಿ, ಮಹಾಲಿಂಗ ಮಂಗಿ, ಸುರೇಶ ಮುದ್ದಾರ, ಮಹಾನಂದಾ ಪಾಟೀಲ, ವೈಶಾಲಿ ಭರಭರಿ, ರವೀಂದ್ರ ಸೋರಗಾಂವಿ, ಅನುಪಾ ಕೌಶಿಕ್ , ಈಶ್ವರಚಂದ್ರ ಬೆಟಗೇರಿ, ಬಸವರಾಜ ಮುರಗೋಡ , ಶಿವಲಿಲಾ ಪಾಟೀಲ, ಸುಭಾಸ ವಾಲಿಕರ, ಶಕುಂತಲಾ ಹಿರೇಮಠ, ಶೈಲಾ ಕೋಕ್ಕರಿ ಸೇರಿದಂತೆ ಅನೇಕರು ಇದ್ದರು.
