ಮೂಡಲಗಿ:ಮೀರಜ್-ಮಂಗಳೂರ ವಾಯಾ ಅರಸೀಕೆರೆ ಮಾರ್ಗವಾಗಿ ರೈಲು ಓಡಾಟ ಶೀಘ್ರ : ರೈಲ್ವೆ ಸಚಿವರಿಗೆ ಎಂಪಿ ಕಡಾಡಿ ಮನವಿ
ಮೀರಜ್-ಮಂಗಳೂರ ವಾಯಾ ಅರಸೀಕೆರೆ ಮಾರ್ಗವಾಗಿ ರೈಲು ಓಡಾಟ ಶೀಘ್ರ : ರೈಲ್ವೆ ಸಚಿವರಿಗೆ ಎಂಪಿ ಕಡಾಡಿ ಮನವಿ
ನಮ್ಮ ಬೆಳಗಾವಿ ಇ – ವಾರ್ತೆ, ಮೂಡಲಗಿ ಅ 4 :
ಬೆಳಗಾವಿ ಜಿಲ್ಲೆ ಹಾಗೂ ಸುತ್ತಲಿನ ವಿವಿಧ ಜಿಲ್ಲೆಗಳ ಸಾರ್ವಜನಿಕರ ಅನುಕೂಲಕ್ಕಾಗಿ ಮೀರಜ್-ಮಂಗಳೂರ ವಾಯಾ ಅರಸೀಕೆರೆ ಮಾರ್ಗವಾಗಿ ರೈಲು ಓಡಾಟ ಶೀಘ್ರ ಆರಂಭಿಸಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರಿಗೆ ಮನವಿ ಪತ್ರ ನೀಡಿ ಒತ್ತಾಯಿಸಿದರು.
ಬುಧವಾರಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿ ಈ ಭಾಗದ ಸಾರ್ವಜನಿಕರ ಪರವಾಗಿ ಮನವಿ ಪತ್ರ ಸಲ್ಲಿಸಿದ ಬಳಿಕ ಮಾತನಾಡಿ, ಬೆಳಗಾವಿ-ಬೆಂಗಳೂರು ಸೂಪರ ಫಾಸ್ಟ್ ರೈಲು ಸಂಚಾರವನ್ನು ಮೈಸೂರವರೆಗೆ ವಿಸ್ತರಿಸಬೇಕು, ಮೀರಜ್- ಬೆಳಗಾವಿ-ಮಡಗಾಂವ್ (ಗೋವಾ ರಾಜ್ಯ) ದಿಂದ ಹೊಸ ರೈಲು ಸೇವೆ ಆರಂಭಿಸಬೇಕು. ಬೆಳಗಾವಿ-ಕಿತ್ತೂರು-ಧಾರವಾಡ ಹೊಸ ರೈಲ್ವೆ ಮಾರ್ಗದ ತ್ವರಿತ ಅನುಷ್ಠಾನದ ಅಗತ್ಯತೆ ಇದೆ ಎಂದು ಹೇಳಿದರು.
ಹುಬ್ಬಳ್ಳಿಯ ನೈಋತ್ಯ ರೈಲ್ವೆ ವಿಭಾಗದ ಭೌಗೊಳಿಕ ವ್ಯಾಪ್ತಿಯ ವಿಜಯನಗರದವರೆಗೆ ಮಾತ್ರ ಇದ್ದು, ಅದನ್ನು ಮಿರಜ್‌ವರೆಗೆ ವಿಸ್ತರಿಸಬೇಕು. ಕೋವಿಡ್ 19 ಕಾರಣದಿಂದ ಕೆಲವು ರೈಲುಗಳ ಓಡಾಟ ನಿಲ್ಲಿಸಲಾಗಿದ್ದು, ಅವುಗಳನ್ನು ಮರಳಿ ಪ್ರಾರಂಭಿಸುವ ಮೂಲಕ ಉತ್ತರ ಕರ್ನಾಟಕದ ಜನರ ಬೇಡಿಕೆಗೆ ಸ್ಪಂದಿಸಬೇಕೆAದರು. ಮಹಾನಗರ ಬೆಂಗಳೂರು ಬಿಟ್ಟು, ಅತಿ ಹೆಚ್ಚು ಜನರ ಸಂಪರ್ಕ ಸೇತುವೆಯಂತಿದ್ದ ಬೆಳಗಾವಿಗೆ ರೈಲ್ವೆ ಸೌಲಭ್ಯಕ್ಕೆ ವಿಶೇಷ ಗಮನ ನೀಡಬೇಕೆಂದು ಮನವಿ ಮಾಡಿಕೊಂಡರು.
ಕೇAದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ ಜೋಶಿ, ಕೇಂದ್ರ ರೈಲ್ವೆ ರಾಜ್ಯ ಸಚಿವ ರಾವಸಾಹೇಬ ದಾನ್ವೆ, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಭಗವಂತ ಖೂಬಾ, ರಾಜ್ಯ ಬಿಜೆಪಿ ಅಧ್ಯಕ್ಷ, ಸಂಸದ ನಳಿನಕುಮಾರ ಕಟೀಲ ಸೇರಿದಂತೆ ರಾಜ್ಯದ ಸಂಸದರು ಉಪಸ್ಥಿತರಿದ್ದರು.