ಕೌಜಲಗಿ :ಬಸ್ ಮತ್ತು ಬೈಕ್ ಡಿಕ್ಕಿ ಯುವಕನೋರ್ವ ಸ್ಥಳದಲ್ಲೇ ಸಾವು : ಕೌಜಲಗಿಯಲ್ಲಿ ಘಟನೆ
ಬಸ್ ಮತ್ತು ಬೈಕ್ ಡಿಕ್ಕಿ ಯುವಕನೋರ್ವ ಸ್ಥಳದಲ್ಲೇ ಸಾವು : ಕೌಜಲಗಿಯಲ್ಲಿ ಘಟನೆ
ಕೌಜಲಗಿ ಅ 22 : ಬೈಕ್ ಗೆ ಬಸ್ಸ ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ಗೋಕಾಕ ತಾಲೂಕಿನ ಕೌಜಲಗಿ ಪಟ್ಟಣದಲ್ಲಿ ನಡೆದಿದೆ .
ಯಾಸಿನ ಮುಲ್ತಾನಿ (15) ಮೃತಪಟ್ಟ ದುರ್ದೈವಿಯಾಗಿದು ಇಂದು ಮಧ್ಯಾಹ್ನ ಪಟ್ಟಣದ ಕಟ್ಟಿ ಬಸವೇಶ್ವರ ದೇವಸ್ಥಾನ ಹತ್ತಿರದ ಗೋಕಾಕ ಫಾಲ್ಸ್-ಬದಾಮಿ 134 ರಾಜ್ಯ ಹೆದ್ದಾರಿಯಲ್ಲಿ
ಬಸ್ಸ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಕುಲಗೋಡ ಪೋಲಿಸ್ ಠಾಣೆಯ ಸಿಬ್ಬಂದಿ ಮತ್ತು ಪಿ.ಎಸ್.ಐ ರವಿ ಬೀಳಗಿ ಈ ಕುರಿತು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ