RNI NO. KARKAN/2006/27779|Friday, May 9, 2025
You are here: Home » breaking news » ಗೋಕಾಕ:ಶ್ರೀ ಶಿದ್ದಲಿಂಗೇಶ್ವರ ಬಿ.ಸಿ.ಎ ಕಾಲೇಜಿನ ವಿದ್ಯಾರ್ಥಿಗಳ ಸಾಧನೆಗೆ ಶ್ರೀಗಳ ಹರ್ಷ

ಗೋಕಾಕ:ಶ್ರೀ ಶಿದ್ದಲಿಂಗೇಶ್ವರ ಬಿ.ಸಿ.ಎ ಕಾಲೇಜಿನ ವಿದ್ಯಾರ್ಥಿಗಳ ಸಾಧನೆಗೆ ಶ್ರೀಗಳ ಹರ್ಷ 

ಶ್ರೀ ಶಿದ್ದಲಿಂಗೇಶ್ವರ ಬಿ.ಸಿ.ಎ ಕಾಲೇಜಿನ ವಿದ್ಯಾರ್ಥಿಗಳ ಸಾಧನೆಗೆ ಶ್ರೀಗಳ ಹರ್ಷ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 25 :

 

ಇಲ್ಲಿಯ ಶೂನ್ಯ ಸಂಪಾದನ ಮಠದ ಶ್ರೀ ಶಿದ್ದಲಿಂಗೇಶ್ವರ ಬಿ.ಸಿ.ಎ ಕಾಲೇಜಿನ ವಿದ್ಯಾರ್ಥೀನಿಯರು ಅತ್ಯುತ್ತಮ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಅವರನ್ನು ಗುರುವಾರದಂದು ಶ್ರೀಮಠದಲ್ಲಿ ಶ್ರೀ ಮುರುಘರಾಜೇಂದ್ರಮಹಾಸ್ವಾಮಿಗಳು ಸತ್ಕರಿಸಿದರು.

ವಿದ್ಯಾರ್ಥಿನಿ ವೈಷ್ಣವಿ ತಳ್ಳಿ, ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯಕ್ಕೆ ಪ್ರಥಮ ಸ್ಥಾನ ಹಾಗೂ ರಾಜೇಶ್ವರಿ ಪತ್ತಾರ, 10ನೇ ಸ್ಥಾನ ಪಡೆದು ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆಂದು ಕಾಲೇಜಿನ ಸಂಸ್ಥಾಪಕರಾದ ಮುರುಘರಾಜೇಂದ್ರ ಮಹಾಸ್ವಾಮಿಗಳು , ಆಡಳಿತಾಧಿಕಾರಿ ಅಡಿವೇಶ ಗವಿಮಠ ಹಾಗೂ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಸಂಧರ್ಭದಲ್ಲಿ ಬಸನಗೌಡ ಪಾಟೀಲ, ಮಲ್ಲಿಕಾರ್ಜುನ ಈಟಿ, ವಿವೇಕ ಜತ್ತಿ ಸೇರಿದಂತೆ ಅನೇಕರು ಇದ್ದರು.

Related posts: