RNI NO. KARKAN/2006/27779|Sunday, June 15, 2025
You are here: Home » breaking news » ಗೋಕಾಕ:ಪಂಚಾಯಿತಿ ಮಟ್ಟದಲ್ಲಿ ಪಿಡಿಓಗಳು ಪೀಲ್ಡ್ ಗಿಳಿದು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ: ಶಾಸಕ ರಮೇಶ ಎಚ್ಚರಿಕೆ

ಗೋಕಾಕ:ಪಂಚಾಯಿತಿ ಮಟ್ಟದಲ್ಲಿ ಪಿಡಿಓಗಳು ಪೀಲ್ಡ್ ಗಿಳಿದು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ: ಶಾಸಕ ರಮೇಶ ಎಚ್ಚರಿಕೆ 

ಪಂಚಾಯಿತಿ ಮಟ್ಟದಲ್ಲಿ ಪಿಡಿಓಗಳು ಪೀಲ್ಡ್ ಗಿಳಿದು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ: ಶಾಸಕ ರಮೇಶ ಎಚ್ಚರಿಕೆ

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೆ 26 :

 

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಿಡಿಓಗಳು ಪೀಲ್ಡ್ ಗಿಳಿದು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಮಾಜಿ ಸಚಿವ ಶಾಸಕ ರಮೇಶ ಜಾರಕಿಹೊಳಿ ಹೇಳಿದರು

ಬುಧವಾರದಂದು ನಗರದ ತಾಲೂಕಾ ಪಂಚಾಯತ್ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಪಿಡಿಓಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗ್ರಾಮ ಮಟ್ಟದಲ್ಲಿ ಅಧಿಕಾರಿಗಳು ಸಂಘಟಿತವಾಗಿ ಕಾರ್ಯಮಾಡಿದರೆ ಕರೋನಾ ಚೈನ ಬ್ರೇಕ್ ಮಾಡಬಹುದು ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುಧ್ಧ ಕಠಿಣ ಕ್ರಮ ಜರುಗಿಸಲಾಗುವದು.
ಗ್ರಾಮದಲ್ಲಿ ಒಬ್ಬರಿಗೆ ಕೊರೋನಾ ಸೋಂಕು ಕಾಣಿಸಿಕೊಂಡ ತಕ್ಷಣ ಸ್ಥಳೀಯ ಶಾಲೆ ಹಾಗೂ ಹಾಸ್ಟೆಲ್ ಗಳನ್ನು ಬಳಕೆ ಮಾಡಿಕೊಂಡು ತಕ್ಷಣ ಅವರಿಗೆ ಪ್ರಾಥಮಿಕ ವೈದ್ಯಕೀಯ ಚಿಕಿತ್ಸೆಗಳನ್ನು ನೀಡಿ ಗ್ರಾಮದಲ್ಲಿ ಕೊರೋನಾ ಹರಡದಂತೆ ಜಾಗೃತಿ ವಹಿಸಬೇಕು. ಅತೀ ಮುಖ್ಯವಾಗಿ ಗ್ರಾಮದಲ್ಲಿ ನೀರು ಗಟಾರು ಸಾನಿಟೈಜರ,ಸೇರಿದಂತೆ ಸ್ವಚ್ಛತೆಗೆ ಒತ್ತು ನೀಡಬೇಕು. ಗ್ರಾಮ ಪಡೆಯ ಎಲ್ಲ ಸದಸ್ಯರು ತಕ್ಷಣದಲ್ಲಿ ಕಾರ್ಯ ಪ್ರವೃತ್ತರಾಗಬೇಕು. ಪ್ರಾಥಮಿಕ ಹಂತದಲ್ಲಿ ಕೊರೋನಾ ಚಿಕಿತ್ಸೆಯನ್ನು ನೀಡಿದರೆ ನಾವು ಕೊರೋನಾವನ್ನು ಗೆಲ್ಲಬಹುದಾಗಿದೆ ಎಂಬ ಜಾಗೃತಿಯನ್ನು ಜನರಲ್ಲಿ ಮೂಡಿಸಬೇಕು ಎಂದ ಶಾಸಕ ರಮೆಶ ಅವರು ಆಶಾ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರು ತಮ್ಮ ಜೀವವನ್ನು ಪಣಕ್ಕಿಟ್ಟು ಕಾರ್ಯಮಾಡುತ್ತಿದ್ದಾರೆ ಇವರನ್ನು ಜನರು ಗೌರವದಿಂದ ಕಾಣಬೇಕು ಮತ್ತು ಅವರು ನೀಡುವ ನಿರ್ದೇಶನಗಳನ್ನು ತಪ್ಪದೆ ಪಾಲಸಿ ಕೊರೋನಾ ಚೈನ ಬ್ರೇಕ್ ಮಾಡಲು ಸಹಕರಿಸಬೇಕು ಎಂದು ಶಾಸಕ ರಮೇಶ ಜಾರಕಿಹೊಳಿ ಅವರು ಮನವಿ ಮಾಡಿಕೊಂಡರು.

ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ಮಾತನಾಡಿ ಗ್ರಾಮ ಮಟ್ಟದಲ್ಲಿ ಕೊರೋನಾ ದೃಢಪಟ ವ್ಯಕ್ತಿಗೆ ಅದರ ಗಂಭೀರತೆಯನ್ನು ತಿಳಿ ಹೇಳಿ ಕೂಡಲೆ ಅವರನ್ನು ತಕ್ಷಣ ಕೋವಿಡ್ ಕೇರ ಸೆಂಟರಗಳಿಗೆ ಸ್ಥಳಾಂತರಿಸಬೇಕು. ತಾಲೂಕಿನ ಹಿರೇನಂದಿ ಗ್ರಾಮದಲ್ಲಿಯೂ ಸಹ ಕೊವೀಡ್ ಕೇರ ಸೆಂಟರ ತೆರೆಯಲಾಗುವದು. ಗ್ರಾಮ ಮಟ್ಟದಲ್ಲಿ ನಡೆಯುವ ಮದುವೆ ಮತ್ತು ಶವಸಂಸ್ಕಾರಗಳಿಗೆ ಅಧಿಕಾರಿಗಳು ಬೇಟಿ ನೀಡಿ ಅವರ ಮೇಲೆ ತೀವ್ರ ನಿಗಾ ವಹಿಸಬೇಕು. ಅಂತಹ ವಾತಾವರಣದಲ್ಲಿ ಮಾಸ್ಕ ಹಾಗೂ ಸಾನಿಟೈಜರ ಬಳಸಲು ಹೇಳಬೇಕು ಯಾರಾದರೂ ನಿಯಮಗಳನ್ನು ಉಲ್ಲಂಘಿಸಿದರೆ ಕೂಡಲೇ ಕ್ರಮ ಜರುಗಿಸಬೇಕು ಎಂದು ಹೇಳಿದರು

ಡಿ.ವಾಯ್.ಎಸ . ಪಿ ಮನೋಜಕುಮಾರ್ ನಾಯ್ಕ , ಪೌರಾಯುಕ್ತ ಶಿವಾನಂದ ಹಿರೇಮಠ, ತಾ.ಪಂ ಸಿಇಓ ಭೀಮಪ್ಪ ಲಾಳಿ, ಪ್ರೋಬೆಷನರಿ ಎ.ಸಿ ಅಭಿಷೇಕ್ ವ್ಹಿ ಇದ್ದರು.

Related posts: