ಗೋಕಾಕ:ಪ್ರಜಾಪ್ರಭುತ್ವವು ಕೇವಲ ಸರ್ಕಾರದ ಆಡಳಿತಕ್ಕೆ ಸೀಮಿತವಾಗಬಾರದು : ನ್ಯಾಯಾಧೀಶ ಸಂಪತ್ತಕುಮಾರ

ಪ್ರಜಾಪ್ರಭುತ್ವವು ಕೇವಲ ಸರ್ಕಾರದ ಆಡಳಿತಕ್ಕೆ ಸೀಮಿತವಾಗಬಾರದು : ನ್ಯಾಯಾಧೀಶ ಸಂಪತ್ತಕುಮಾರ
ಗೋಕಾಕ ಸೆ 15 : ಪ್ರಜಾಪ್ರಭುತ್ವವು ಕೇವಲ ಸರ್ಕಾರದ ಆಡಳಿತಕ್ಕೆ ಸೀಮಿತವಾಗಿರದೆ, ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದ್ದು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಮಾನ ಅವಕಾಶ ಸಿಗುವಂತಾಗಬೇಕು ಎಂದು ಇಲ್ಲಿನ ಪ್ರಧಾನ ಕಿರಿಯ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಸಂಪತ್ತಕುಮಾರ ಬಳ್ಳೋಲಗಿಡದ ಹೇಳಿದರು.
ಮಂಗಳವಾರದಂದು ನಗರದ ತಾಲೂಕು ಪಂಚಾಯತ್ ಕಾರ್ಯಾಲಯದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್,ನಗರಸಭೆ,ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಕಾನೂನು ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಗೋಕಾಕ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಾಗೂ ಯುವ ಸಂಸತ್ತು ಸಭೆಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಭಾರತ ಸಂವಿಧಾನದ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಆಶಯಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಬಿಇಒ ಜಿ.ಬಿ.ಬಳಗಾರ ಮಾತನಾಡಿ ನಾವೆಲ್ಲರೂ ಅರ್ಥಪೂರ್ಣ ಬದುಕನ್ನು ಬದಕುತ್ತಿದ್ದೇವೆ ಅಂದರೆ ಅದಕ್ಕೆ ಪ್ರಜಾಪ್ರಭುತ್ವ ಕಾರಣವಾಗಿದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವ ದಿನಾಚರಣೆ ಕೆವಲ ಮತದಾನ ಮಾಡುವ ಕಾರ್ಯವಲ್ಲ ಬದಲಾಗಿ ನಾವು ನಮ್ಮ ದೇಶಕ್ಕೆ ಅರ್ಪಿಸಿಕೊಳ್ಳವ ದಿನವಾಗಿ ಆಚರಣೆ ಮಾಡಬೇಕು. ಎಲ್ಲರೂ ಭಾರತದ ಕಾನೂನು ಗಟ್ಟಿಯಾಗಿ ಪಾಲಿಸುವ ಕಾರ್ಯವಾಗಬೇಕು. ಮನೆಯಲ್ಲಿಯೂ ಸಹ ಕೆಲವು ನಿಯಮಗಳಿರುತ್ತವೆ ಪ್ರತಿದಿನ ಅವುಗಳನ್ನು ಪಾಲನೆ ಮಾಡುವಂತಾಗಬೇಕು ಅಂದಾಗ ನಾವು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಗಟ್ಟಿಯಾಗಿ ಕಟ್ಟಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಅಧಿಕಾರಿ ಎ.ಬಿ.ಮಲಬನ್ನವರ, ಜಯಶ ತಾಂಬೂಳೆ, ಶ್ರೀಮತಿ ಎ.ಡಿ.ಕುರಬೇಟ್, ಎಸ್.ಎಂ.ಐಹೋಳೆ, ಬಿ.ಐ.ತಿಳಗಂಜಿ, ವೀರಭದ್ರ ಮೈಲನ್ನವರ ಸೇರಿದಂತೆ ಇತರರು ಉಪಸ್ಥಿತರಿದ್ದರು.
