ಗೋಕಾಕ:ಸಚಿವ ಸತೀಶ ಜಾರಕಿಹೊಳಿ ಅವರ ಮನೆ ಮೇಲೆ ಆದ ಇಡಿ ದಾಳಿ ರಾಜಕೀಯ ಪ್ರೇರಿತ ದಾಳಿಯಾಗಿದೆ : ಅಶೋಕ ಪೂಜಾರಿ

ಸಚಿವ ಸತೀಶ ಜಾರಕಿಹೊಳಿ ಅವರ ಮನೆ ಮೇಲೆ ಆದ ಇಡಿ ದಾಳಿ ರಾಜಕೀಯ ಪ್ರೇರಿತ ದಾಳಿಯಾಗಿದೆ : ಅಶೋಕ ಪೂಜಾರಿ
ಗೋಕಾಕ ಸೆ 11: ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಮನೆ ಮೇಲೆ ಆದ ಇಡಿ ದಾಳಿ ರಾಜಕೀಯ ಪ್ರೇರಿತ ದಾಳಿಯಾಗಿದ್ದು, ಕೇಂದ್ರ ಸರಕಾರದ ಅಧಿನದಲ್ಲಿ ಇರುವ ಇ.ಡಿ, ಸಿಬಿಐ, ಆದಾಯ ತೆರಿಗೆ ಸಂಸ್ಥೆಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಆಗ್ರಹಿಸಿದರು.
ಶುಕ್ರವಾರದಂದು ನಗರದ ಬಸವೇಶ್ವರ ವೃತ್ತದಲ್ಲಿ ಕಾಂಗ್ರೆಸ್ ಪಕ್ಷ, ದಲಿತ ಸಂಘಟನೆಗಳು, ಇಂಟೆಕ್ ಸಂಘಟನೆ, ಸತೀಶ ಜಾರಕಿಹೊಳಿ ಅವರ ಅಭಿಮಾನಿಗಳು ಹಾಗೂ ವಿವಿಧ ಸಂಘ ಸಂಸ್ಥೆಯವರು ಹಮ್ಮಿಕೊಂಡ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಇತ್ತೀಚೆಗೆ ದಿನಗಳಲ್ಲಿ ಇಡಿ, ಸಿಬಿಐ, ಆದಾಯ ತೆರಿಗೆ ಸಂಸ್ಥೆಗಳು ತಮ್ಮ ಪಾವಿತ್ರ್ಯ ಕಳೆದುಕೊಂಡು ಆಡಳಿತ ಪಕ್ಷದ ಕೈಗೊಂಬೆಯಾಗಿ ವರ್ತಿಸುತ್ತಿವೆ. ಈ ಹಿಂದೆ ಡಿ.ಕೆ.ಶಿವುಕುಮಾರ ಆವರ ಮೇಲೆಯೂ ಸಹ ಇಂತಹ ದಾಳಿಗಳು ಆಗಿವೆ. ಕಾಂಗ್ರೆಸ್ ಪಕ್ಷವನ್ನು ಟಾರ್ಗೆಟ್ ಮಾಡಿ ದಾಳಿಗಳು ನಡೆಯುತ್ತಿವೆ. ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಬಲಪಡಿಸುವ ಕಾರ್ಯ ಮಾಡಬೇಕಾದ ಕೇಂದ್ರ ಸರಕಾರ ಇದರಲ್ಲಿ ಎಡವುತ್ತಿದೆ. ಎಲ್ಲರ ಹಿತಕಾಯುವ ಕಾರ್ಯ ಈ ಸಂಸ್ಥೆಗಳು ಮಾಡಬೇಕು. ಆರ್ಥಿಕ ವಹಿವಾಟು ಬೇರೆ ದೇಶಕ್ಕೆ ಹೋಗಿದೆ ಎಂಬ ಒಂದೆ ಕಾರಣಕ್ಕೆ ರೆಡ ಆಗಿದ್ದು, ದುರದೃಷ್ಟಕರ ಎಂದ ಅವರು ಮೊದಲು ನೋಟಿಸ್ ನೀಡಿದರೆ ಅದಕ್ಕೆ ಸಚಿವ ಸತೀಶ ಜಾರಕಿಹೊಳಿ ಅವರು ಸೂಕ್ತ ಉತ್ತರ ಕೊಡಬಹುದಾಗಿತ್ತು ಆದರೆ ಇಡಿ ಸಂಸ್ಥೆ ತರಾತುರಿಯಲ್ಲಿ ದಾಳಿ ಮಾಡಿರುವುದು ಖಂಡನೀಯವಾಗಿದ್ದು, ಕೇಂದ್ರ ಸರಕಾರ ಇದಕ್ಕೆ ಅಂಕುಶ ಹಾಕಬೇಕು ಎಂದು ಆಗ್ರಹಿಸಿದ ಅವರು ಆದಷ್ಟು ಬೇಗನೆ ಸಚಿವ ಸತೀಶ ಅವರು ಇದರಿಂದ ಪಾರಾಗಿ ಬರುತ್ತಾರೆ ಎಂದರು.
ಮುಖಂಡರುಗಳಾದ ಸತ್ಯಪ್ಪ ಕರವಾಡೆ, ಈಶ್ವರ ಗುಡಾಜ, ಚಂದ್ರಶೇಖರ್ ಕೊಣ್ಣೂರ, ವಿವೇಕ ಜತ್ತಿ, ಕಮಲಾ ಕರೆಮನ್ನವರ, ಕಲ್ಪನಾ ಜೋಶಿ ಅವರು ಮಾತನಾಡಿ ಸತೀಶ್ ಜಾರಕಿಹೊಳಿ ಅವರ ಮೆನೆ ಮೇಲೆ ಆದ ಇಡಿ ದಾಳಿಯನ್ನು ಖಂಡಿಸಿದರು.
ಈ ಸಂದರ್ಭದಲ್ಲಿ ಕುಬೇಂದ್ರ ಕಲಾಲ, ರಿಯಾಜ ಚೌಗಲಾ, ಸುನೀಲ ಅಂಕದವರ,ಸತೀಶ ಹರಿಜನ, ರಮೇಶ ಮಾದರ, ಅಶೋಕ್ ಮೇಸ್ತ್ರಿ, ಬಸವರಾಜ ಆರೆನ್ನವರ, ರವಿ ಕಡಕೋಳ, ಕಾಡೇಶ ತೆಳಗೇರಿ, ಶೆಟ್ಟೆಪ್ಪ ಹರಿಜನ, ಸುಂದರವ್ವ ಕಟ್ಟಿಮನಿ, ದೊಡ್ಡವ್ವ ತೆಳಗೇರಿ, ಸುನೀತಾ ನಾಯಕ, ಸುರೇಶ ಜೋರಾಪೂರ, ಅರ್ಜುನ್ ದಂಡವ್ವಗೋಳ, ಗುಲಾಬ ಪೂಲತಾಂಬೆ, ರಾಜು ಪೀರಜಾದೆ, ಕರೆಪ್ಪ ಗೂಡೆನ್ನವರ, ಸುರೇಶ ನೆಗಿನಾಳ, ರಾಜು ಮೇದಾರ, ಪಾಂಡುರಂಗ ದೊಡ್ಠಮನಿ, ಸುನೀತಾ ಕಾಂಬಳೆ, ಶಬ್ಬೀರ ಮುಜಾವರ, ಜುಬೇರ ಮಿರ್ಜಾಬಾಯಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
