ಗೋಕಾಕ: ಘಟಪ್ರಭಾ,ಮಾರ್ಕಂಡೇಯ ಸಂಗಮಕ್ಷೇತ್ರಗಳ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ ಅಶೋಕ ಪೂಜಾರಿ ಒತ್ತಾಯ

ಘಟಪ್ರಭಾ,ಮಾರ್ಕಂಡೇಯ ಸಂಗಮಕ್ಷೇತ್ರಗಳ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ ಅಶೋಕ ಪೂಜಾರಿ ಒತ್ತಾಯ
ಗೋಕಾಕ ಸೆ 23 : ಇಲ್ಲಿನ ಘಟಪ್ರಭಾ ಮತ್ತು ಮಾರ್ಕಂಡೇಯ ನದಿಗಳ ಪವಿತ್ರ ಕ್ಷೇತ್ರ ಕೂಡಲಸಂಗಮ ಸಂಗಮನಾಥ ದೇವಸ್ಥಾನ ಅಭಿವೃದ್ಧಿ ಪಡೆಸಿ, ಗೋಕಾಕ ಶ್ರೀ ಸಂಗಮೇಶ್ವರ ದೇವಸ್ಥಾನದ ಘಟಪ್ರಭಾ,ಮಾರ್ಕಂಡೇಯ ಸಂಗಮಕ್ಷೇತ್ರಗಳ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ಅಶೋಕ್ ಪೂಜಾರಿ ಒತ್ತಾಯಿಸಿದರು.
ಬುಧವಾರದಂದು ನಗರದ ಜ್ಞಾನ ಮಂದಿರ’ ಆಧ್ಯಾತ್ಮ ಕೇಂದ್ರದಲ್ಲಿ ಇಲ್ಲಿನ ಶ್ರೀ ಕೂಡಲಸಂಗಮೇಶ್ವರ ದೇವಸ್ಥಾನ ಮತ್ತು ಘಟಪ್ರಭಾ ಮಾರ್ಕಂಡೇಯ ನದಿಗಳ ಸಂಗಮ ಕ್ಷೇತ್ರ ಅಭಿವೃದ್ಧಿ ಸಮಿತಿ ವತಿಯಿಂದ ನಗರದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಈ ಮಹತ್ತರ ಕಾರ್ಯವಾಗಲು ನಗರದ ಸಾರ್ವಜನಿಕರ ಸಹಕಾರದ ಜೊತೆಗೆ ಸರಕಾರದ ಸಹಕಾರ ಮುಖ್ಯವಾಗಿದ್ದು, ದಕ್ಷಿಣ ಕರ್ನಾಟಕವನ್ನು ಹೋಲಿಸಿದರೆ ಉತ್ತರ ಕರ್ನಾಟಕ ಸುಕ್ಷೇತ್ರಗಳ ಅಭಿವೃದ್ಧಿ ಅಷ್ಟೊಂದು ಪ್ರಾಮಾಣದಲ್ಲಿ ಆಗಿಲ್ಲ. ಉತ್ತರ ಕರ್ನಾಟಕ ಅಭಿವೃದ್ಧಿ ಆಗಬೇಕಾದರೆ ಸುಕ್ಷೇತ್ರಗಳ ಅಭಿವೃದ್ಧಿ ಅತ್ಯಂತ ಮುಖ್ಯವಾಗಾದ್ದು, ಸರಕಾರ ಆದಷ್ಟು ಬೇಗ ಇದಕ್ಕೆ ಪ್ರಾಧಿಕಾರದ ರಚನೆ ಮಾಡಬೇಕು ಎಂದ ಅವರು ಈಗಾಗಲೇ ಸಚಿವ ಸತೀಶ ಜಾರಕಿಹೊಳಿ ಅವರು ರಸ್ತೆ ನಿರ್ಮಾಣಕ್ಕೆ 4 ಕೋಟಿ ರೂ ಮಂಜೂರು ಮಾಡಿದ್ದು, ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣದ ಕಾರ್ಯವು ಸರಕಾರದ ಮಟ್ಟದಲ್ಲಿದೆ. ಇದರ ಜೊತೆಗೆ ಇದರ ಪ್ರಾಧಿಕಾರದ ರಚನೆ ಮಾಡಿದರೆ ಇನ್ನಷ್ಟು ಅಭಿವೃದ್ಧಿಯಾಗಲು ಸಾಧ್ಯ ಆ ದಿಸೆಯಲ್ಲಿ ಸರಕಾರ ಗೋಕಾಕ ಶ್ರೀ ಸಂಗಮೇಶ್ವರ ದೇವಸ್ಥಾನದ ಘಟಪ್ರಭಾ,ಮಾರ್ಕಂಡೇಯ ನದಿಗಳ ಸಂಗಮಕ್ಷೇತ್ರಗಳ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ ಇದರ ಅಭಿವೃದ್ಧಿಗೆ ಕನಿಷ್ಠ 100 ಕೋಟಿ ರೂ ಮಂಜೂರು ಮಾಡಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.
ಸಮಿತಿಯ ಗೌರವಾಧ್ಯಕ್ಷ ರಾಜು ಮುನ್ನವಳ್ಳಿ ಮಾತನಾಡಿ ಸವದತ್ತಿ ಯಲ್ಲಮ್ಮನ ದೇವಸ್ಥಾನ ಪ್ರಾಧಿಕಾರ ರಚನೆ ಮಾಡಿದಂತೆ ಗೋಕಾಕ ಶ್ರೀ ಸಂಗಮೇಶ್ವರ ದೇವಸ್ಥಾನವನ್ನು ಅಭಿವೃದ್ಧಿ ಪಡೆಸಿ, ಪ್ರಾಧಿಕಾರ ರಚನೆ ಮಾಡಬೇಕು. ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಮತ್ತು ಸಚಿವ ಸತೀಶ ಜಾರಕಿಹೊಳಿ ಅವರು ಈ ಕಾರ್ಯಕ್ಕೆ ಸಹಕಾರ ನೀಡಿದ್ದಾರೆ. ಈ ಪವಿತ್ರ ಕಾರ್ಯಕ್ಕೆ ಪಕ್ಷಾತೀತವಾಗಿ ಎಲ್ಲರೂ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ಸಮಿತಿಯ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟಿ, ಸೋಮಶೇಖರ್ ಮಗದುಮ್ಮ,ಚಂದ್ರು ಕುರಬೇಟ್, ಬಸವರಾಜ ದೇಶನೂರ, ಆನಂದ ಹೀರೆಹೋಳ್ಳಿ,ಬಾಳು ಅಂಬಿ, ಮಲ್ಲಿಕಾರ್ಜುನ ನಂದಗಾವಿ, ಎಲ್.ಎಸ್.ಜಿರಳಿ, ದೇವೆಂದ್ರ ಕಂಬಾರ, ಮಲ್ಲಿಕಾರ್ಜುನ ಹೊಸಪೇಠ, ರವಿ ಜುಗಳಿ, ಆನಂದ ಸಂಕಾಜಿ, ಸಂಜೀವ ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
