ಘಟಪ್ರಭಾ:ರಸ್ತೆ ಬದಿಯ ಎಲ್ಲ ವ್ಯಾಪಾರ ವಹಿವಾಟ ಕನ್ನಡ ಶಾಲೆಯ ಆವರಣದಲ್ಲಿ ಸ್ಥಳಾಂತರ : ಕೆ.ಬಿ .ಪಾಟೀಲ
ರಸ್ತೆ ಬದಿಯ ಎಲ್ಲ ವ್ಯಾಪಾರ ವಹಿವಾಟ ಕನ್ನಡ ಶಾಲೆಯ ಆವರಣದಲ್ಲಿ ಸ್ಥಳಾಂತರ : ಕೆ.ಬಿ .ಪಾಟೀಲ
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಮೇ 1 :
ರಸ್ತೆ ಬದಿಯ ಎಲ್ಲ ವ್ಯಾಪಾರ ವಹಿವಾಟವನ್ನು ಮಲ್ಲಾಪೂರ ಪಿ.ಜಿ ಸರ್ಕಾರಿ ಕನ್ನಡ ಶಾಲೆಯ ಆವರಣದಲ್ಲಿ ಸ್ಥಳಾಂತರಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಕೆ.ಬಿ .ಪಾಟೀಲ ತಿಳಿಸಿದರು.
ಶನಿವಾರ ಪುರಸಭೆ ಕಾರ್ಯಾಲಯದಲ್ಲಿ ಘಟಪ್ರಭಾ ಪೊಲೀಸ ಠಾಣೆಯ ಸಿಪಿಐ ಶ್ರೀಶೈಲ ಬ್ಯಾಕೂಡ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಸೋಮವಾರದಿಂದ ಘಟಪ್ರಭಾ ಪುರಸಭೆ ವ್ಯಾಪ್ತಿಯ ಎಲ್ಲ ರಸ್ತೆ ಬದಿಯ ವ್ಯಾಪಾರಸ್ಥರು ಮುಂಜಾನೆ 6 ಗಂಟೆಯಿಂದ 10 ಗಂಟೆಯ ವರೆಗೆ ತಮ್ಮ ಅಂಗಡಿಗಳನ್ನು ಮಲ್ಲಾಪೂರ ಪಿ.ಜಿ ಸರ್ಕಾರಿ ಕನ್ನಡ ಶಾಲೆಯ ಆವರಣದಲ್ಲಿ ಹಚ್ಚಲು ವ್ಯವಸ್ಥೆ ಮಾಡಲಾಗಿದೆ.
ಸಿಪಿಐ ಶ್ರೀಶೈಲ ಬ್ಯಾಕೂಡ ಮಾತನಾಡಿ ಸೂಚನೆಯಂತೆ ಎಲ್ಲ ಬೀದಿ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಸ್ಥಳಾಂತರಿಸಬೇಕು. ಗ್ರಾಹಕರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ವ್ಯಾಪಾರ ವಹಿವಾಟ ನಡೆಸಬೇಕು. ಸರ್ಕಾರ ಅನುಮತಿ ನೀಡಿರುವ ಹಾಗೂ ಅಗತ್ಯ ವಸ್ತುಗಳ ಅಂಗಡಿಗಳನ್ನು ಹೊರತು ಪಡಿಸಿ ಬೇರೆ ಯಾರಾದರೂ ತಮ್ಮ ಅಂಗಡಿಗಳನ್ನು ತರೆದರೆ ಅಂತವರ ಮೇಲೆ ಕೇಸ್ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಪ.ಪಂ ಉಪಾಧ್ಯಕ್ಷ ಈರಣ್ಣಾ ಕಲಕುಟಗಿ, ಸದಸ್ಯರಾದ ಸಲೀಮ ಕಬ್ಬೂರ, ಮಲ್ಲು ಕೋಳಿ, ನಾಗರಾಜ ಚಚಡಿ, ಮಾರುತಿ ಹುಕ್ಕೇರಿ, ಪ್ರವೀಣ ಮಟಗಾರ, ಸುರೇಶ ಪೂಜೇರಿ, ಮಲ್ಲಿಕಾರ್ಜುನ ತುಕ್ಕಾನಟ್ಟಿ, ಕೆಂಪಣ್ಣಾ ಚೌಕಶಿ, ಶೇಖರ ಕುಲಗೋಡ, ಸರ್ಕಾರಿ ಕನ್ನಡ ಶಾಲೆಯ ಮುಖ್ಯೋಪಾದ್ಯಾಯರಾದ ಈಶ್ವರ ರಾಜಾಪೂರೆ, ಇದ್ದರು.