ಗೋಕಾಕ:ಬಾಸ್ಕೇಟ್ ಬಾಲ್ ಪಂದ್ಯಾವಳಿಯಲ್ಲಿ ನವ ಜೀವನ ಶಾಲೆಗೆ ಪ್ರಥಮ ಸ್ಥಾನ
ಬಾಸ್ಕೇಟ್ ಬಾಲ್ ಪಂದ್ಯಾವಳಿಯಲ್ಲಿ ನವ ಜೀವನ ಶಾಲೆಗೆ ಪ್ರಥಮ ಸ್ಥಾನ
ಗೋಕಾಕ ಸೆ, 17 ;- ಸಾರ್ವಜನಿಕ ಶಿಕ್ಷಣ ಇಲಾಖೆ ಚಿಕ್ಕೋಡಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಗೋಕಾಕ ಹಾಗೂ ನವ ಜೀವನ ಮಿಷನ್ ಆಂಗ್ಲ ಮಾಧ್ಯಮ ಶಾಲೆ ಗೋಕಾಕ ಇವರ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ನಗರದ ಕೆಎಲ್‍ಇ ಆಂಗ್ಲ ಮಾದ್ಯಮ ಶಾಲೆಯ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಬಾಸ್ಕೇಟ್ ಬಾಲ್ ಪಂದ್ಯಾವಳಿಗಳು ಜರುಗಿದವು.
ಈ ಪಂದ್ಯಾವಳಿಯಲ್ಲಿ ಪ್ರೌಢ ಹಾಗೂ ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ನವ ಜೀವನ ಶಾಲೆ ಪ್ರಥಮ ಸ್ಥಾನ ಹಾಗೂ ಬಾಲಕಿಯರ ವಿಭಾಗದಲ್ಲಿ ಮಯೂರ ಶಾಲೆ ಪ್ರಥಮ ಸ್ಥಾನ ಗಳಿಸಿವೆ.
ಪಂದ್ಯಾವಳಿಯಲ್ಲಿ ಭಾಗವಹಿಸಿದ ಈ ಎಲ್ಲಾ ಕ್ರೀಡಾ ಪಟುಗಳಿಗೆ ಸಂಸ್ಥೆಯ ಮುಖ್ಯಸ್ಥರಾದ ಬಾಬು ವರ್ಗೀಸ್ ಚೇರಮನ್ನರಾದ ಜೇಮ್ಸ್ ವರ್ಗೀಸ್ ಮತ್ತು ಶಾಲೆಯ ಪ್ರಾಚಾರ್ಯರಾದ ಮ್ಯಾಥ್ಯೂವ್ ವರ್ಗೀಸ್ ಹಾಗೂ ಶಾಲೆಯ ದೈಹಿಕ ಶಿಕ್ಷಕರಾದ ಗಿರೀಶ ಮುನವಳ್ಳಿ, ಸಂತೋಷ ಪಾಟೀಲ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.
