ಗೋಕಾಕ:ಚರ್ಮದ ಉತ್ಪನ್ನಗಳ ತಯಾರಕ ಘಟಕ ಸ್ಥಳಾಂತರಿಸುವಂತೆ ಆಗ್ರಹಿಸಿ ಮನವಿ
ಚರ್ಮದ ಉತ್ಪನ್ನಗಳ ತಯಾರಕ ಘಟಕ ಸ್ಥಳಾಂತರಿಸುವಂತೆ ಆಗ್ರಹಿಸಿ ಮನವಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 4 :
ನಗರದ ವಾರ್ಡ ನಂ 9 ರ ಡೋಹರ ಗಲ್ಲಿಯಲ್ಲಿ ಚರ್ಮದ ಉತ್ಪನ್ನಗಳ ತಯಾರಕ ಘಟಕಗಳಿಂದ ದುರ್ವಾಸನೆ ಬರುತ್ತಿದ್ದು ಕೂಡಲೇ ಅವುಗಳನ್ನು ಸ್ಥಳಾಂತರಿಸುವಂತೆ ಆಗ್ರಹಿಸಿ ಬುಧವಾರದಂದು ವಾರ್ಡ ನಂ 5 ಹಾಗೂ 9 ರಲ್ಲಿಯ ಸಾರ್ವಜನಿಕರು ತಹಶೀಲದಾರ ಹಾಗೂ ಪೌರಾಯುಕ್ತರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿದರು.
ಗೋಕಾಕ ನಗರದ ವಾರ್ಡ ನಂ 9 ರಲ್ಲಿ ಬರುವ ಡೋಹರ ಗಲ್ಲಿಯಲ್ಲಿರುವ ಚರ್ಮದ ಉತ್ಪನ್ನಗಳ ತಯಾರಕ ಘಟಕಗಳಿಂದ ವಿಪರೀತವಾಗಿ ದುರ್ವಾಸನೆ ಬರುತ್ತಿದ್ದು, ಇಲ್ಲಿ ವಾಸ ಮಾಡುವ ಸಾರ್ವಜನಿಕರಿಗೆ ಅದರಲ್ಲಿ ವಯಸ್ಸಾದ ವೃದ್ದರಿಗೆ ಚಿಕ್ಕಮಕ್ಕಳಿಗೆ ಬಹಳ ತೊಂದರೆಯಾಗುತ್ತಿದೆ. ಇಲ್ಲಿಂದು ಬರುವ ದುರ್ವಾಸನೆಯು ಸುಮಾರು 200 ರಿಂದ 300 ಮೀಟರ ವರೆಗೆ ವ್ಯಾಪಿಸುತ್ತಿದೆ. ಇದರಿಂದ ಇಲ್ಲಿ ವಾಸಿಸುವ ಜನರಿಗೆ ತೀರಾ ತೊಂದರೆಯಾಗಿತ್ತಿದೆ. ಅಲ್ಲದೇ ಸೊಳ್ಳೆಗಳು ಕಾಟ ಹೆಚ್ಚಾಗಿದ್ದು ಡೆಂಗ್ಯೂ ಜ್ವರ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿದೆ. ಈಗಾಗಲೇ ನಾವು ಡೋಹರ ಸಮಾಜದ ಮುಖಂಡರಿಗೆ ಹಾಗೂ ಹಿರಿಯರಿಗೆ ಮೌಖಿಕವಾಗಿ ಮನವಿಯನ್ನು ಕೂಡಾ ಮಾಡಿದ್ದೇವೆ. ಅಲ್ಲದೇ ಈ ಹಿಂದೆಯೂ ನಗರಸಭೆಗೆ ಮನವಿಯನ್ನು ಕೂಡಾ ಮಾಡಲಾಗಿದೆ. ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸ್ಥಳವನ್ನು ಪರಿಶೀಲನೆ ಮಾಡಿ ಸತ್ಯಾಸತ್ಯತೆಯನ್ನರಿತು ಕಾನೂನು ರೀತ್ಯಾ ಕ್ರಮವನ್ನು ವಹಿಸಬೇಕೆಂದು ಮನವಿಯಲ್ಲಿ ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ಶಿವಲಿಂಗ ಮಾಯಗೊಂಡ, ಗಣಪತಿ ರಂಕನಕೊಪ್ಪ, ಹಣಮಂತ ಗುದಗೋಳ, ಸತ್ತೆವ್ವ ತಾಶೀಲದಾರ, ಪ್ರಕಾಶ ಬನಾಜ, ಶಿವರಾಜ ತಾಶೀಲದಾರ, ರಾಮಪ್ಪ ಬಂಡಿ, ನಬಿಸಾಬ ತಾಂಬೂಳೆ, ರಿಯಾಜ ಬೋಜಗಾರ, ಕಲಂ ಬೋಜಗಾರ ಸೇರಿದಂತೆ ಅನೇಕರು ಇದ್ದರು.