RNI NO. KARKAN/2006/27779|Wednesday, February 11, 2026
You are here: Home » breaking news » ಗೋಕಾಕ:ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ : ಮಡಿವಾಳಪ್ಪ ಮುಚಳಂಬಿ ಹರ್ಷ

ಗೋಕಾಕ:ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ : ಮಡಿವಾಳಪ್ಪ ಮುಚಳಂಬಿ ಹರ್ಷ 

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ : ಮಡಿವಾಳಪ್ಪ ಮುಚಳಂಬಿ ಹರ್ಷ

 

 

ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ನ 17 :

 

 
ಕರ್ನಾಟಕ ಸರ್ಕಾರ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿರುವದಕ್ಕೆ ವೀರಶೈವ ಸಮಾಜದ ಹಿರಿಯರಾದ ಮಡಿವಾಳಪ್ಪ ಮುಚಳಂಬಿ ಸ್ವಾಗತಿಸಿದ್ದಾರೆ.
ವೀರಶೈವ ಸಮಾಜದ ಹಲವಾರು ಮಠಾಧೀಶರು ವಿವಿಧ ಸಂಘಟನೆಗಳು ಸಮಾಜದ ಹಿರಿಯರು ಹಲವು ದಶಕಗಳಿಂದ ಸರ್ಕಾರಕ್ಕೆ ಬೇಡಿಕೆಗಳನ್ನು ಸಲ್ಲಿಸುತ್ತಾ ಬಂದಿದ್ದರು. ಮುಖ್ಯಮಂತ್ರಿಗಳು ಸೂಕ್ತ ಸಮಯದಲ್ಲಿ ಸಮಾಜದ ಬೇಡಿಕೆಗಳನ್ನು ಮನ್ನಿಸಿ ಕರ್ನಾಟಕ ರಾಜ್ಯ ಸರ್ಕಾರ ಮತ್ತು ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವದರ ಮೂಲಕ ಬಹುಜನಾಂಗದ ಸಮಾಜದಲ್ಲಿ ಇವರಲ್ಲಿ ಆರ್ಥಿಕ ಸಾಮಾಜಿಕ ಶೈಕ್ಷಣಿಕವಾಗಿ ಹಿಂದುಳಿದವರ ಈ ಸಮಾಜದ ಸರ್ವೋತೋಮುಖ ಅಭಿವೃದ್ಧಿಗಾಗಿ ಮಾಡಿದ್ದಕ್ಕೆ ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರಿಗೆ ವೀರಶೈವ ಸಮಾಜದ ಪರವಾಗಿ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಸಮಾಜದ ಏಳಿಗೆಗಾಗಿ ನಿಗಮಕ್ಕೆ ಹೆಚ್ಚಿನ ಅನುದಾನ ಮಂಜೂರು ಮಾಡಿ ಇನ್ನು ಹೆಚ್ಚಿನ ಯೋಜನೆಗಳು ಕಾರ್ಯಗತಗೊಳ್ಳಲೆಂದು ವೀರಶೈವ ಸಮಾಜದ ಹಿರಿಯರಾದ ಮಡಿವಾಳಪ್ಪ ಮುಚಳಂಬಿ ಆಸೆ ವ್ಯಕ್ತಪಡಿಸಿದ್ದಾರೆ.

Related posts: