RNI NO. KARKAN/2006/27779|Thursday, July 31, 2025
You are here: Home » breaking news » ಗೋಕಾಕ:ಡಾ.ರಾಜೇಂದ್ರ ಸಣ್ಣಕ್ಕಿ ಅವರಿಗೆ ಬರಿ ಸುಳ್ಳೇ ಹೇಳುವದು ರಕ್ತಗತವಾಗಿದೆ : ಅರವಿಂದ ದಳವಾಯಿ

ಗೋಕಾಕ:ಡಾ.ರಾಜೇಂದ್ರ ಸಣ್ಣಕ್ಕಿ ಅವರಿಗೆ ಬರಿ ಸುಳ್ಳೇ ಹೇಳುವದು ರಕ್ತಗತವಾಗಿದೆ : ಅರವಿಂದ ದಳವಾಯಿ 

ಡಾ.ರಾಜೇಂದ್ರ ಸಣ್ಣಕ್ಕಿ ಅವರಿಗೆ ಬರಿ ಸುಳ್ಳೇ ಹೇಳುವದು ರಕ್ತಗತವಾಗಿದೆ : ಅರವಿಂದ ದಳವಾಯಿ
ಕೌಜಲಗಿ ನ 22 : ಡಾ.ರಾಜೇಂದ್ರ ಸಣ್ಣಕ್ಕಿ ತನ್ನ ಹೇಯ ಕೃತ್ಯಗಳನ್ನು ಮುಚ್ಚಿಕೊಳ್ಳಲು ನಾನು ನೀಡಿರುವ ಪತ್ರಿಕಾ ಹೇಳಿಕೆಗೆ ಪ್ರತಿಯಾಗಿ ಸಾಮಾಜಿಕ ಮಾಧ್ಯಮ ಹಾಗೂ ಪತ್ರಿಕೆಯಲ್ಲಿ ನೀಡಿರುವ ಹೇಳಿಕೆ ಓದಿ ಸೋಜಿಗವಾಯಿತು. ಈತನಿಗೆ ಉದ್ದಮ್ಮದೇವಿ ಮತ್ತು ಬೀರೇಶ್ವರ ಸ್ವಾಮಿಯ ಹೆಸರಿನಲ್ಲಿ ಆಣೆಮಾಡಿ ಬರಿ ಸುಳ್ಳೇ ಹೇಳುವದು ರಕ್ತಗತವಾಗಿದೆ ಎಂದು ಕಾಂಗ್ರೆಸ್ ಮುಖಂಡ ಅರವಿಂದ ದಳವಾಯಿ ತಿಳಿಸಿದ್ದಾರೆ .
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸಣ್ಣಕ್ಕಿ ಅವರು ನೀಡಿದ ಪತ್ರಿಕಾ ಪ್ರಕಟನೆಗೆ ತಿರುಗೇಟು ನೀಡಿದ್ದಾರೆ .

ಕೌಜಲಗಿ ಗ್ರಾಮದಲ್ಲಿ ಶ್ರೀ ವಿಠ್ಠಲ ಬೀರದೇವರ ಯಾವುದೇ ಅಧೀಕೃತ ಟ್ರ್ರ್ರಸ್ಟ್ ಅಥವಾ ಕಮೀಟಿ ಇರುವದಿಲ್ಲ. ಈತನೇ ತನ್ನ ಛೇಲಾಗಳನ್ನು ಮಂದಿಟ್ಟುಕೊಂಡು ಮಂದಿರದ ಚಟುವಟಿಕೆಗಳನ್ನು ನಿಯಂತ್ರಿಸುತ್ತಿದ್ದಾನೆ. ಇವನೇ ವಿಠ್ಠಲದೇವರ ಜಾತ್ರೆಗೆ ಸಾರ್ವಜನಿಕರು ದೇಣಿಗೆ ನೀಡಿದ ಹಣವನ್ನು ಬಳಸಿಕೊಂಡು ಆಮಂತ್ರಣ ಪತ್ರಿಕೆ ಮುದ್ರಿಸಿರುತ್ತಾನೆ. ನನಗೆ ಮುಖಭಂಗ ಉಂಟುಮಾಡಬೇಕೆಂಬ ದುರುದ್ದೇಶದಿಂದ ನನ್ನ ಹೆಸರನ್ನು ಕೈಬಿಟ್ಟಿರುತ್ತಾನೆ. ಇದರಲ್ಲಿ ಗುಡಿಯ ಹಿರಿಯರು ಅಥವಾ ಸಮಾಜದ ಯಾವುದೇ ವ್ಯಕ್ತಿಗಳ ಕೈವಾಡ ಇರುವುದಿಲ್ಲ. ಈ ಲೋಪಕ್ಕೆ ಡಾ.ಸಣ್ಣಕ್ಕಿಯೇ ನೇರವಾಗಿ ಕಾರಣನಾಗಿದ್ದಾನೆ ಎಂದು ನನ್ನ ಮನೆದೇವರು ಶ್ರೀ ರೇವಣಸಿದ್ಧೇಶ್ವರ ಸಾಕ್ಷಿಯಾಗಿ ಹೇಳುತ್ತೇನೆ. ನಿನ್ನೆಯ ದಿನ ಸಣ್ಣಕ್ಕಿ ನೀಡಿದ ಪತ್ರಿಕಾ ಹೇಳಿಕೆಯಲ್ಲಿ ಬೀರದೇವರ ಜಾತ್ರಾ ಆಮಂತ್ರಣ ಪತ್ರಿಕೆಯನ್ನು ಜಾತ್ರಾ ಕಮೀಟಿಯವರು ಪ್ರಕಟಿಸಿದ್ದು, ಇದರಲ್ಲಿ ನನ್ನದೇನೂ ಕೈವಾಡ ಇಲ್ಲವೆಂದು ಹೇಳುತ್ತಾನೆ. ಇನ್ನೊಂದೆಡೆ ಬಾಲಚಂದ್ರ ಜಾರಕಿಹೊಳಿ, ವಿವೇಕರಾವ್ ಪಾಟೀಲ ಹಾಗೂ ಸಿದ್ಧರಾಮಯ್ಯನವರ ಹೆಸರನ್ನು ಪ್ರೀತಿದ್ಯೋತಕವಾಗಿ ಪ್ರಕಟಿಸಿದ್ದೇವೆ ಎಂದು ಹೇಳುತ್ತಾನೆ. ಇದರ ಮೂಲಕವೇ ನನ್ನ ಹೆಸರನ್ನು ಕೈಬಿಟ್ಟಿರುವದರ ಹಿಂದೆ ಇವನ ಕೈವಾಡ ಇರುವದು ತಿಳಿದು ಬರುತ್ತದೆ.
ಶ್ರೀ ವಿಠ್ಠಲ ಬೀರದೇವರ ಜಾತ್ರೆಗೆ ಪ್ರತಿವರ್ಷ ನಾನು ಮತ್ತು ನನ್ನ ಕುಟುಂಬದವರು ದೇಣಿಗೆ ನೀಡಿದ್ದೇವೆ. ಗುಡಿ ಕಟ್ಟಡಕ್ಕಾಗಿ ಲೋಡುಗಟ್ಟಲೇ ಇಟ್ಟಿಗೆಗಳನ್ನು ಕಳಿಸಿರುತ್ತೇನೆ. ಜಾತ್ರೆಗಾಗಿ ಹಲವಾರು ಬಾರಿ ಲೋಡುಗಟ್ಟಲೇ ರೇಷನ್‍ಕೂಡ ನೀಡಿರುತ್ತೇನೆ. ಪ್ರತಿವರ್ಷ ಗುಡಿಯ ಹಿರಿಯರು ಬಂದು ನನ್ನ ಹತ್ತಿರ ದೇಣಿಗೆ ಪಡೆದುಕೊಂಡಿರುತ್ತಾರೆ. ಈ ವರ್ಷವೂ ಕೂಡ ಜಾತ್ರೆಗಾಗಿ ನಾನು ರೂ.25,000/- ದೇಣಿಗೆ ನೀಡಿರುತ್ತೇನೆ. ಶ್ರೀ ವಿಠ್ಠಲ ಬೀರದೇವರ ದೇವಋಷಿಯಾದ ಶ್ರೀ ವಿಠ್ಠಲ ಕುರಗುಂದ ಅವರು ಗುಡಿಯ ಹಿರಿಯರನ್ನು ಕರೆದುಕೊಂಡು ಬಂದು ರೂ.25,000/- ದೇಣಿಗೆಯನ್ನು ತೆಗೆದುಕೊಂಡು ಹೋಗಿರುತ್ತಾರೆ. ಕೌಜಲಗಿ ಗ್ರಾಮದಲ್ಲಿ ನಡೆಯುವ ಜಾತ್ರೆ, ಉತ್ಸವ, ಕ್ರೀಡೆಗಳು ಎಲ್ಲದಕ್ಕೂ ನಾನು ನನ್ನ ಶಕ್ತ್ಯಾನುಸಾರ ದೇಣಿಗೆ ನೀಡುತ್ತಲೇ ಬಂದಿರುತ್ತೇನೆ. ಕಳೆದ ವರ್ಷ ನಡೆದ ಟಿಪ್ಪು ಸುಲ್ತಾನ ಜಯಂತಿಗೆ ರೂ.25,000/- ದೇಣಿಗೆ ನೀಡಿರುತ್ತೇನೆ. ಆದರೆ, ಡಾ. ಸಣ್ಣಕ್ಕಿ ಈ ಸಾರೆ ಅರಭಾವಿ ಶಾಸಕರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಟಿಪ್ಪು ಸುಲ್ತಾನ ಜಯಂತಿಯ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರನ್ನು ಕೈ ಬಿಡುವಂತೆ ಹುನ್ನಾರ ಮಾಡಿರುತ್ತಾನೆ. ನಾನು ಚಂದಾ ಹಣ ನೀಡಿಲ್ಲವೆಂದರೆ ವಿಠ್ಠಲದೇವರ ದೇವಋಷಿ ಹಾಗೂ ಟಿಪ್ಪು ಸುಲ್ತಾನ ಜಯಂತಿ ಕಮೀಟಿಯವರು ವಿಠ್ಠಲದೇವರು ಹಾಗೂ ಅಲ್ಲಾಹನ ಸಾಕ್ಷಿಯಾಗಿ ಹೇಳಬೇಕು.
ಯಾರ ಮನೆಗೂ ಕರೆಯದೇ ಊಟಕ್ಕೆ ಹೋಗುವ ಅಭ್ಯಾಸ ನನಗಿಲ್ಲ. ಡಾ.ಸಣ್ಣಕ್ಕಿತರಹ ಬೇರೆಯವರ ಗುಲಾಮಗಿರಿ ಮಾಡುವ ವ್ಯಕ್ತಿಯೂ ನಾನಲ್ಲ. ಹೇಳಿಸಿ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಹಾಕಿಸಿಕೊಳ್ಳುವ ವ್ಯಕ್ತಿತ್ವವೂ ನನ್ನದಲ್ಲ. ನನ್ನ ರಾಜ್ಯವ್ಯಾಪಿ ಅಭಿಮಾನಿ ಬಳಗವಿದೆ. ಕಳೆದ ಹಲವಾರು ವರ್ಷಗಳಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಾಧಿಕಾರ ರಚನೆಗಾಗಿ ಏಕಾಂಗಿಯಾಗಿ ಹೋರಾಟ ಮಾಡುತ್ತ ಬಂದಿರುತ್ತೇನೆ. ಸಮಾಜಕ್ಕಾಗಿ ಎಸ್.ಟಿ. ಮೀಸಲಾತಿಗಾಗಿಯೂ ಸುಮಾರು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇನೆ. ಕೌಜಲಗಿ ಗ್ರಾಮದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳನ್ನು ನಡೆಸುವ ಮೂಲಕ ದಲಿತ ಹಾಗೂ ಹಿಂದುಳಿದ ವರ್ಗದ ಮಕ್ಕಳಿಗೆ ಉಚಿತ ಹಾಗೂ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದೇನೆ. ನನ್ನ ಸಹೋದರರೂ ಕೂಡ ಒಳ್ಳೆಯ ಅಧಿಕಾರಿಯಾಗಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಡಾ.ಸಣ್ಣಕ್ಕಿ ನಮ್ಮ ಏಳ್ಗೆಯನ್ನು ಕಂಡು ಹೊಟ್ಟೆಕಿಚ್ಚು ಪಡುತ್ತಿದ್ದಾನೆ.
ಚುನಾವಣೆಯಲ್ಲಿ ಸೋತಿರಬಹುದು, ಅದಕ್ಕೆ ಡಾ.ಸಣ್ಣಕ್ಕಿಯಂತವರ ಕೈವಾಡವೇ ಕಾರಣ. ‘ಕೊಡಲಿಯ ಕಾವು ಕುಲಕ್ಕೆ ಮೂಲ’ ಎಂಬ ನಾನ್ನುಡಿ ಈತನಿಗೆ ಚನ್ನಾಗಿಯೇ ಅನ್ವಯಿಸುತ್ತದೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಈತನು ಕುರುಬ ಸಮಾಜದವರಿಂದ ಭಂಡಾರ ಮುಟ್ಟಿಸಿ ನನಗೆ ಮತ ಹಾಕಬಾರದೆಂದು ಆಣೆ ಮಾಡಿಸಿರುತ್ತಾನೆ. ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ಧರಾಮಯ್ಯನವರಿಂದ ಸಾಕಷ್ಟು ಉಪಕೃತನಾಗಿರುವ ಈತನು ಸ್ವತಃ ಅವರೇ ದೂರವಾಣಿಯ ಮೂಲಕ ನನ್ನ ಪರವಾಗಿ ಕೆಲಸ ಮಾಡುವಂತೆ ಸೂಚಿಸಿದರೂ ಕೂಡಾ ಅವರ ಮಾತನ್ನು ದಿಕ್ಕರಿಸಿರುತ್ತಾನೆ. ಆದರೆ, ಮೇಲ್ನೋಟಕ್ಕೆ ತಾನು ಶ್ರೀ ಸಿದ್ಧರಾಮಯ್ಯನವರ ಅಭಿಮಾನಿಯಂತೆ ತೋರಿಸಿಕೊಳ್ಳುತ್ತಾನೆ. ಶ್ರೀ ಸಿದ್ಧರಾಮಯ್ಯನವರು ಮತ್ತು ವೈಯಕ್ತಿಕವಾಗಿ ನನ್ನಿಂದ ಸಹಾಯ ಪಡೆದುಕೊಂಡಿರುವ ಈತನದು ಕೃತಘ್ಣ ವ್ಯಕ್ತಿತ್ವ. ಈತ ಮುಂದಿನ ದಿನಗಳಲ್ಲಿ ತನ್ನ ವರ್ತನೆಯನ್ನು ತಿದ್ದಿಕೊಳ್ಳದೇ ಹೋದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆಯೆಂದು ಅರವಿಂದ ದಳವಾಯಿ ಪತ್ರಿಕಾ ಪ್ರಕಟನೆ ಮೂಲಕ ಎಚ್ಚರಿಸಿದ್ದಾರೆ .

Related posts: