RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ತಾಲೂಕಿನಲ್ಲಿ 4 ಕೊರೋನಾ ಜನರಿಗೆ ಕೊರೋನಾ ಸೋಂಕು ದೃಡ : ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ಮಾಹಿತಿ

ಗೋಕಾಕ:ತಾಲೂಕಿನಲ್ಲಿ 4 ಕೊರೋನಾ ಜನರಿಗೆ ಕೊರೋನಾ ಸೋಂಕು ದೃಡ : ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ಮಾಹಿತಿ 

ತಾಲೂಕಿನಲ್ಲಿ 4 ಕೊರೋನಾ ಜನರಿಗೆ ಕೊರೋನಾ ಸೋಂಕು ದೃಡ : ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ಮಾಹಿತಿ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜು 21 :

 

ಗೋಕಾಕ ತಾಲೂಕಿನಲ್ಲಿ ಇಂದು ಒಟ್ಟು 4 ಕೊರೋನಾ ಪ್ರಕರಣಗಳು ದೃಡಪಟ್ಟಿವೆ ಎಂದು ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ತಿಳಿಸಿದ್ದಾರೆ

ಮಂಗಳವಾರದಂದು ನಗರದ ತಹಶೀಲ್ದಾರ ಕಛೇರಿಯಲ್ಲಿ ತಮ್ಮನ್ನು ಭೇಟಿಯಾದ ಪ್ರತಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ತಾಲೂಕಿನ ಕುಂದರಗಿ ಗ್ರಾಮದ (42 ) ವರ್ಷದ ಯುವಕನೋರ್ವನಿಗೆ , ಅಕ್ಕತಂಗೇರಹಾಳ ಗ್ರಾಮದ (52) ವರ್ಷದ ಮಹಿಳೆಯೋರ್ವಳಿಗೆ , ಅಡಿಬಟ್ಟಿ ಗ್ರಾಮದ (24) ವರ್ಷದ ಮಹಿಳೆಯೋರ್ವಳಿಗೆ ಹಾಗೂ ಖನಗಾಂವ ಗ್ರಾಮದ (52) ವರ್ಷದ ಮಹಿಳೆಯೋರ್ವಳಿಗೆ ಕೊರೋನಾ ಸೋಂಕು ದೃಡಪಟ್ಟಿದ್ದು , ಸೋಂಕಿತರನ್ನು ಗೋಕಾಕಿನ ಕೊವಿಡ್ ಕೇರಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುವುದು. ಈಗಾಗಲೇ ಗೋಕಾಕದಲ್ಲಿ 60 ಹಾಸಿಗೆ ಉಳ್ಳ ಎರೆಡು ಕೋವಿಡ್ ಕೇರ ಸೆಂಟರಗಳು ( ವಾರ್ಡಗಳು) ಕಾರ್ಯನಿರ್ವಹಿಸುತ್ತಿದ್ದು, ಪಕ್ಕದ ಮಲ್ಲಾಪೂರ ಪಿ.ಜಿ ಪ.ಪಂ ವ್ಯಾಪ್ತಿಯಲ್ಲಿ ಬರುವ ಮೂರಾರ್ಜಿ ದೇಸಾಯಿ ಶಾಲೆಯಲ್ಲಿ 100 ಹಾಸಿಗೆ ಉಳ್ಳ ಸುಸಜ್ಜಿತ ಕೊವಿಡ್ ಕೇರ ಪ್ರಾರಂಭಿಸಲಾಗಿದೆ. ಈ ಕೇರ ಸೆಂಟರನಲ್ಲಿ ಕಾರ್ಯನಿರ್ವಹಿಸಲು ನೋಡಲ್ ಅಧಿಕಾರಿ, ಮೇಲ್ವಿಚಾರಕರು, ವೈದ್ಯರು ಮತ್ತು ಸ್ಟಾಫ್ ನರ್ಸಗಳು ಸಿದ್ದರಿದ್ದು ಸಕಲ ಸಿದ್ದತೆಯನ್ನು ಮಾಡಿಕೊಂಡಿದ್ದಾರೆ. ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ 200 ಹಾಸಿಗೆ ಉಳ್ಳ ಮತ್ತೊಂದು ಕೊವಿಡ್ ಕೇರ ಸೆಂಟರ್ ತೆರೆಯಲು ಸಿದ್ದತೆಗಳು ನಡೆದಿದ್ದು, ಅತಿ ಶೀಘ್ರದಲ್ಲಿ ಈ ಹೊಸ ಕೋವಿಡ್ ಕೇರ ಸೆಂಟರ ಕೂಡಾ ಕಾರ್ಯನಿರ್ವಹಿಸಲ್ಲಿದೆ. ಈ ಸೆಂಟರಗಳನ್ನು ಒಳಗೊಂಡಂತೆ ಒಟ್ಟಾರೆ ಗೋಕಾಕ ಮತ್ತು ಇತರ ಕಡೆಗಳಲ್ಲಿ ಒಟ್ಟು 360 ಹಾಸಿಗೆ ಉಳ್ಳ ಸುಸಜ್ಜಿತ ಕೊವಿಡ್ ಕೇರ ಸೆಂಟರ ತೆರೆಯಲು ತಾಲೂಕಾಡಳಿತ ಮತ್ತು ಆರೋಗ್ಯ ಇಲಾಖೆಯಿಂದ ಕಾರ್ಯಪ್ರವೃತವಾಗಿದ್ದೆ ಎಂದು ಪ್ರಕಾಶ ಹೋಳೆಪ್ಪಗೋಳ ತಿಳಿಸಿದ್ದಾರೆ.

Related posts: