RNI NO. KARKAN/2006/27779|Tuesday, May 5, 2026
You are here: Home » breaking news » ಗೋಕಾಕ:ಪಕ್ಷದ ಎಲ್ಲ ಕಾರ್ಯಕರ್ತರನ್ನು ವಿಶ್ವಾಸಕ್ಕೆತೆಗೆದುಕೊಂಡು ಪಕ್ಷದ ಸಂಘಟನೆ ಮಾಡಿ : ಸಚಿವ ರಮೇಶ

ಗೋಕಾಕ:ಪಕ್ಷದ ಎಲ್ಲ ಕಾರ್ಯಕರ್ತರನ್ನು ವಿಶ್ವಾಸಕ್ಕೆತೆಗೆದುಕೊಂಡು ಪಕ್ಷದ ಸಂಘಟನೆ ಮಾಡಿ : ಸಚಿವ ರಮೇಶ 

ಪಕ್ಷದ ಎಲ್ಲ ಕಾರ್ಯಕರ್ತರನ್ನು ವಿಶ್ವಾಸಕ್ಕೆತೆಗೆದುಕೊಂಡು ಪಕ್ಷದ ಸಂಘಟನೆ ಮಾಡಿ : ಸಚಿವ ರಮೇಶ

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮೇ 27 :

 

 

ಪಕ್ಷದ ಎಲ್ಲ ಕಾರ್ಯಕರ್ತರನ್ನು ವಿಶ್ವಾಸಕ್ಕೆತೆಗೆದುಕೊಂಡು ಪಕ್ಷದ ಸಂಘಟನೆ ಮಾಡಬೇಕೆಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಅವರು, ಬುಧವಾರದಂದು ತಮ್ಮ ಕಾರ್ಯಾಲಯದಲ್ಲಿ ನೂತನ ಬಿಜೆಪಿ ನಗರ ಘಟಕದ ಅಧ್ಯಕ್ಷ ಭೀಮಶಿ ಭರಮನ್ನವರ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಜಯಾನಂದ ಹುಣಶ್ಯಾಳಿ, ತವನರಾಜ ಬೆನ್ನಾಡಿ ಅವರಿಂದ ಸತ್ಕಾರ ಸ್ವೀಕರಿಸಿ, ಸಿಹಿ ಹಂಚಿ, ಅಭಿನಂಧನೆ ಸಲ್ಲಿಸಿ ಮಾತನಾಡಿದರು.
ನಗರದ ಎಲ್ಲ ವಾರ್ಡಗಳಲ್ಲಿ ಬೂತ್ ಮಟ್ಟದಿಂದ ಕಾರ್ಯಕರ್ತರನ್ನು ಸಂಘಟಿಸುವ ಮೂಲಕ ಗೋಕಾಕ ನಗರದಲ್ಲಿ ಬಿಜೆಪಿ ಭದ್ರಗೊಳಿಸಲು ಕಾರ್ಯಪ್ರವೃತ್ತರಾಗುವಂತೆ ನೂತನ ಪದಾಧಿಕಾರಿಗಳಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ಶಶಿಧರ ದೇಮಶೆಟ್ಟಿ, ಮುಖಂಡರಾದ ಶಾಮಾನಂದ ಪೂಜೇರಿ, ಬಸವರಾಜ ಹಿರೇಮಠ, ಶಕೀಲ ಧಾರವಾಡಕರ, ಬಸವರಾಜ ಹುಳ್ಳೇರ, ಎಲ್ ಎಚ್ ಭಂಡಿ, ಮಾಯಪ್ಪ ತಹಶೀಲ್ದಾರ, ಲಕ್ಕಪ್ಪ ತಹಶೀಲ್ದಾರ, ವಾಯ್ ಎಲ್ ಹೆಜ್ಜೆಗಾರ, ಲಕ್ಷ್ಮಣ ತಳ್ಳಿ, ರಾಜು ಹಿರೇಅಂಬಿಗೇರ, ಸುಭಾಸ ಸಣ್ಣತಿಪ್ಪಗೋಳ, ಅಡಿವೇಶ ಮಜ್ಜಗಿ, ಮುತ್ತುರಾಜ ಜಮಖಂಡಿ, ಯಮನಪ್ಪಾ, ಲಕ್ಷ್ಮಣ ಖಡಕಭಾವಿ, ಪ್ರವೀಣ ಗೊಸಬಾಳ, ಆನಂದ ತಹಶೀಲ್ದಾರ, ಆನಂದ ಧರ್ಮಟ್ಟಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇದ್ದರು.

Related posts: