RNI NO. KARKAN/2006/27779|Sunday, July 13, 2025
You are here: Home » breaking news » ಮೂಡಲಗಿ:ಮೂಡಲಗಿಯಲ್ಲಿ ಸಂಭ್ರಮದಿಂದ ರಂಜಾನ್ ಹಬ್ಬ ಆಚರಣೆ

ಮೂಡಲಗಿ:ಮೂಡಲಗಿಯಲ್ಲಿ ಸಂಭ್ರಮದಿಂದ ರಂಜಾನ್ ಹಬ್ಬ ಆಚರಣೆ 

ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಮೂಡಲಗಿ ಪಟ್ಟಣದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಭಾಂದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಮೂಡಲಗಿಯಲ್ಲಿ ಸಂಭ್ರಮದಿಂದ ರಂಜಾನ್ ಹಬ್ಬ ಆಚರಣೆ

 

ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಜೂ 5 :

 
ಒಂದು ತಿಂಗಳ ಕಾಲ ಉಪವಾಸ ವೃತಾಚರಣೆ ಆಚರಿಸಿ ಮನುಕುಲದ ಒಳಿತಿಗಾಗಿ ಪ್ರಾರ್ಥಿಸುವ ಭಾವೈಕ್ಯತೆಯ ರಂಜಾನ್(ಈದ್ ಉಲ್ ಫಿತರ್) ಹಬ್ಬವನ್ನು ಪಟ್ಟಣದಲ್ಲಿ ಬುಧವಾರ ಮುಸ್ಲಿಂ ಭಾಂದವರು ಶಾಂತಿ ಸೌಹರ್ದತೆಯೊಂದಿಗೆ ಸಂಭ್ರಮದಿಂದ ಆಚರಿಸಿದರು.
ಮಂಗಳವಾರ ಚಂದ್ರದರ್ಶನ ಮಾಡಿದ ಮುಸ್ಲಿಂ ಬಾಂದವರು ಮುಂಜಾನೆ ಹೊಸಬಟ್ಟೆ ಧರಿಸಿ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಬಡವ, ಶ್ರೀಮಂತನೆಂಬ ಭೇದಭಾವವಿಲ್ಲದೇ ಮಕ್ಕಳು, ಹಿರಿಯರು ಪರಸ್ಪರ ಅಪ್ಪಿಕೊಂಡು ಸಿಹಿ ಹಂಚಿ ರಂಜಾನ್ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.


ಮೌಲಾನಾ ಮಹಮ್ಮದ್ ಶಫಿಕ್ ಅಜ್ಮಿ ಮತ್ತು ಮೌಲಾನಾ ಅಮೀರ್ ಹಂಜಾ ಥರಥರಿ ಮೌಲಾನಾ ಕೌಸರ್‍ರಜಾ ರಂಜಾನ್‍ಹಬ್ಬದ ಸಂದೇಶವನ್ನು ತಿಳಿಸಿದರು.
ಕಾಂಗ್ರೇಸ್ ಮುಖಂಡ ಅರವಿಂದ ದಳವಾಯಿ ಈದ್ಗಾ ಮೈದಾನಕ್ಕೆ ಆಗಮಿಸಿ ಮುಸ್ಲಿಂ ಬಾಂದವರಿಗೆ ಶುಭಾಶಯ ಕೋರಿದರು.
ಯಾವುದೇ ಅಹಿತಕರ ಘಟನೆ ಜರುಗದಂತೆ ಸಿಪಿಐ ವೆಂಕಟೇಶ ಮುರನಾಳ, ಪಿಎಸ್‍ಐ ಶರಣೇಶ ಜಾಲಿಹಾಳ ಬಿಗಿ ಬಂದೋಬಸ್ತ್ ಒದಗಿಸಿದ್ದರು.
ಈ ಸಂದರ್ಭದಲ್ಲಿ ಬಿಟಿಟಿ ಕಮೀಟಿಯ ಅಧ್ಯಕ್ಷ ಶರೀಫ್ ಪಟೇಲ್, ಉಪಾಧ್ಯಕ್ಷ ಮಲ್ಲಿಕ ಕಳ್ಳಿಮನಿ, ಸಲಿಂ ಇನಾಮದಾರ, ಎನ್.ಎಮ್.ಥರಥರಿ, ಹಾಜಿ ಹುಸೇನ್‍ಸಾಬ್ ಥರಥರಿ, ಹಾಜಿ ಹಸನ್‍ಸಾಬ ಮುಗಟಖಾನ್, ಅಬ್ದುಲಸಾಬ್ ಇನಾವiದಾರ, ಶಬ್ಬೀರ್ ಡಾಂಗೆ, ಸಾಹೇಬ ಫೀರಜಾದೆ, ಶಬ್ಬಿರ ನದಾಪ್ ಸೇರಿದಂತೆ ಸಾವಿರಾರು ಮುಸ್ಲಿಂ ಭಾಂದವರು ಪಾಲ್ಗೋಂಡಿದ್ದರು.

Related posts: