RNI NO. KARKAN/2006/27779|Tuesday, May 26, 2026
You are here: Home » breaking news » ಗೋಕಾಕ:ಕೊರೋನಾ ಹಿನ್ನೆಲೆ: ಅಂಗವಿಕಲರಿಗೆ ಆಹಾರ ಧಾನ್ಯ ವಿತರಣೆ

ಗೋಕಾಕ:ಕೊರೋನಾ ಹಿನ್ನೆಲೆ: ಅಂಗವಿಕಲರಿಗೆ ಆಹಾರ ಧಾನ್ಯ ವಿತರಣೆ 

ಕೊರೋನಾ ಹಿನ್ನೆಲೆ: ಅಂಗವಿಕಲರಿಗೆ ಆಹಾರ ಧಾನ್ಯ ವಿತರಣೆ

 

 
ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಎ 16 :

 

 
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗ್ರಾಮ ಪಂಚಾಯಿತಿ ಹಾಗೂ ವಿವಿಡಿ ಸರ್ಕಾರಿ ಪ್ರೌಢ ಶಾಲೆಯ ಸಹಯೋಗದಲ್ಲಿ ಸ್ಥಳೀಯ ಅಂಗವಿಕಲರಿಗೆ ಆಹಾರ ಧಾನ್ಯ ವಿತರಣೆ ಕಾರ್ಯಕ್ರಮ ಗುರುವಾರದಂದು ನಡೆಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಈಶ್ವರ ಬಳಿಗಾರ ಅವರು ಅಮಗವಿಕಲರಿಗೆ ರೇಶನ್ ವಿತರಣೆ ಮಾಡಿದ ಬಳಿಕ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಅವರು ಮಾತನಾಡಿ, ತಾವು ಮತ್ತು ತಮ್ಮ ಮನೆಯಲ್ಲಿರುವ ಎಲ್ಲರೂ ಸ್ವಯಂ ಪ್ರೇರಿತರಾಗಿ ಮಾಸ್ಕ್ ಧರಿಸಬೇಕು. ಎಲ್ಲರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಕರೊನಾ ವೈರಸ್ ನಿಯಂತ್ರಣಾ ಕ್ರಮಗಳನ್ನು ಅನುಸರಿಸಬೇಕು ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಪಿಡಿಒ ಎಚ್.ಎನ್.ಬಾವಿಕಟ್ಟಿ, ಗ್ರಾಮಲೆಕ್ಕಾಧಿಕಾರಿ ಜೆ.ಎಮ್.ನದಾಫ್, ಕಾರ್ಯದರ್ಶಿ ಪರಸರಾಮ ಇಟಗೌಡ್ರ, ಗೌಡಪ್ಪ ಮಾಳೇದ, ಸುರೇಶ ಬಾಣಸಿ, ಬಸವರಾಜ ಪಣದಿ, ಈರಣ್ಣ ದಂಡಿನ, ಶಿವಾನಂದ ಐದುಡ್ಡಿ, ಶಾಲೆಯ ಬಿಸಿಯೂಟ ಅಡುಗೆ ಸಿಬ್ಬಂದಿ, ಅಂಗವಿಕಲರು, ಕರೊನಾ ಸೈನಿಕರು, ಮತ್ತೀತರರು ಇದ್ದರು.

Related posts: