ಗೋಕಾಕ:ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಹಿಂದಿ ವಿಷಯದ ಪುನರ್ ಮನನ ಕಾರ್ಯಕ್ರಮ
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಹಿಂದಿ ವಿಷಯದ ಪುನರ್ ಮನನ ಕಾರ್ಯಕ್ರಮ
*ಅಡಿವೇಶ ಮುಧೋಳ.
ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಏ 3 :
ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯ ಬೆಟಗೇರಿ ವಿ.ವಿ.ದೇಯಣ್ಣವರ ಸರ್ಕಾರಿ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ವಿರಾಮದ ದಿನಗಳಲ್ಲಿ ಪ್ರಸಕ್ತ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಉಜಳನೆ ಎಂಬ ವಿನೂತನ ವಿಶೇಷ ತರಬೇತಿ ತರಗತಿಯ ಹಿಂದಿ ವಿಷಯದ ಪುನರ್ ಮನನ ಕಾರ್ಯಕ್ರಮ ಬುಧವಾರ ಏ.3 ರಂದು ನಡೆಯಿತು.
ಸನ್ 2019ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆ ಇದೇ ಮಾರ್ಚ್ 21 ರಿಂದ ಆರಂಭಗೂಂಡಿರುವ ಹಿನ್ನಲೆಯಲ್ಲಿ ಈ ಪರೀಕ್ಷಾ ವಿರಾಮದ ದಿನಗಳಲ್ಲಿ ಉಜಳನೆ ಎಂಬ ವಿನೂತನ ವಿಶೇಷ ತರಬೇತಿ ತರಗತಿಯ ಕಾರ್ಯಕ್ರಮವನ್ನು ಈಗಾಗಲೇ ಐದು ವಿಷಯಗಳಿಗೆ ಹಮ್ಮಿಕೊಳ್ಳಲಾಗಿದೆ. ಬುಧವಾರ ಏ.3 ರಂದು ಹಿಂದಿ ವಿಷಯದ ಕುರಿತು ಪ್ರಸಕ್ತ ಎಸ್ಸೆಸ್ಸೆಲ್ಸಿ ವಿಶೇಷ ತರಬೇತಿ ಕಾರ್ಯಕ್ರಮ ನಡೆಯಿತು.
ಈ ವಿನೂತನ ಕಾರ್ಯಕ್ರಮದ ಮೂಲಕ ಶಾಲೆಯ ಆಯಾ ವಿಷಯಗಳ ಸಹ ಶಿಕ್ಷಕರು, ನುರಿತ ಸಂಪನ್ಮೂಲ ಶಿಕ್ಷಕರಿಂದ ಪರೀಕ್ಷಾ ವಿರಾಮದ ಬಳಿಕ ನಡೆಯುವ ವಿಷಯಗಳ ಕುರಿತು ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕ್ಲಿಷ್ಠಕರ, ಬಹು ಅಂಕಗಳ ಪ್ರಶ್ನೆ, ನಕ್ಷೆ, ಹಾಗೂ ಪರೀಕ್ಷೆ ಬರೆಯುವ ಕ್ರಮಗಳ ಕುರಿತು ವಿಶ್ಲೇಷಣೆ ಸೇರಿದಂತೆ ಹಲವಾರು ಪ್ರಯೋಗಗಳನ್ನು ಸ್ಥಳೀಯ ಪರೀಕ್ಷಾ ಕೇಂದ್ರದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಿಷಯ ಪುನರ್ ಮನನ ಮಾಡುವ ವಿನೂತನ ಕಾರ್ಯಕ್ರಮ ಜರುಗಿತು.
ಕಳೆದೆರಡ್ಮೂರು ಬಾರಿ ಮೂಡಲಗಿ ಶೈಕ್ಷಣಿಕ ವಲಯ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ, ದ್ವಿತೀಯ ರ್ಯಾಂಕ್ ಗಳಿಸಿದೆ. ಈ ಸಲ ಆಸ್ಥಾನ ಉಳಿಸಿಕೊಳ್ಳುವ ನಿಟ್ಟಿನಲ್ಲಿ, ಉತ್ತಮ ಫಲಿತಾಂಶ ಪಡಿಯುವ ಸಲವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ ಅವರು ಪ್ರಯತ್ನಿಸುತ್ತಿದ್ದಾರೆ. ಅವರೂಂದಿಗೆ ವಲಯದ ಪ್ರೌಢ ಶಾಲೆಯ ಮುಖ್ಯೋಪಾಧ್ಯಯರು, ಸಹ ಶಿಕ್ಷಕರು ಹಾಗೂ ನೂರಿತ ಸಂಪನ್ಮೂಲ ವ್ಯಕ್ತಿಗಳು ಕೈ ಜೋಡಿಸಿ ಹಗಲಿರುಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಇಲ್ಲಿಯ ವಿವಿಡಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ತಿಳಿಸಿದರು.
ಈ ವೇಳೆ ಮಲ್ಲಿಕಾರ್ಜುನ ಹಿರೇಮಠ, ಮಂಜುನಾಥ ಹತ್ತಿ, ಮೋಹನ ತುಪ್ಪದ, ಎ.ಬಿ.ತಾಂವಶಿ, ರಮೇಶ ಬುದ್ನಿ, ಜಯಶ್ರೀ ಇಟ್ನಾಳ, ರಾಕೇಶ ನಡೋಣೆ, ಪ್ರಮೋದ ದಾಸರ, ವೀಣಾ ಹತ್ತಿ, ಶುಭಾ ಬಿ., ಮಲ್ಹಾರಿ ಪೋಳ, ಶಾಲೆಯ ಶಿಕ್ಷಕರು, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು, ಇತರರು ಇದ್ದರು.
“ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯ ಎಲ್ಲ ಪ್ರೌಢ ಶಾಲೆಗಳಲ್ಲಿರುವ ಪ್ರಸಕ್ತ ವರ್ಷದ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಬರೆಯಲಿರುವ ಎಲ್ಲ ವಿದ್ಯಾರ್ಥಿಗಳಿಗೆ ವಲಯ ವ್ಯಾಪ್ತಿಯ ಆಯಾ ಪ್ರೌಢ ಶಾಲೆಗಳಲ್ಲಿ ಪರೀಕ್ಷಾ ದಿನಗಳನ್ನು ಹೊರತುಪಡಿಸಿ, ಪರೀಕ್ಷಾ ವಿರಾಮದ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಮುಂದಿನ ವಿಷಯದ ಕುರಿತು ಪುನರ್ ಮನನ, ಅಂತಿಮ ಕ್ಷಣದ ಸಿದ್ಧತೆಗೆ, ಹೆಚ್ಚು ಅಂಕ ಗಳಿಕೆಗೆ ಇಂತಹ ವಿನೂತನ ಕಾರ್ಯಕ್ರಮಗಳು ಸಹಕಾರಿಯಾಗಲಿದೆ.* ಅಜೀತ ಮನ್ನಿಕೇರಿ. ಬಿಇಒ ಮೂಡಲಗಿ ಶೈಕ್ಷಣಿಕ ವಲಯ.
“ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ವಿನೂತನ ಕಾರ್ಯಕ್ರಮ ಆಯೋಜನೆ ಮಾಡುವದರಿಂದ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಲು ಮಕ್ಕಳಲ್ಲಿ ಚೈತ್ಯನ್ಯ ತುಂಬಿದಂತಾಗುತ್ತದೆ * ಮಂಜುನಾಥ ಹತ್ತಿ ಸಹ ಶಿಕ್ಷಕ ವಿವಿಡಿ ಸರಕಾರಿ ಪ್ರೌಢ ಶಾಲೆ ಬೆಟಗೇರಿ. ತಾ.ಗೋಕಾಕ
