RNI NO. KARKAN/2006/27779|Tuesday, May 5, 2026
You are here: Home » breaking news » ಗೋಕಾಕ :ಹಸಿರು ಗೋಕಾಕಗೆ ಕರ್ನಾಟಕ ಯುವ ಸೇನೆ ಕಾರ್ಯಕರ್ತರಿಂದ ಬೆಂಬಲ : ಏಕಕಾಲಕ್ಕೆ 150 ಸಸಿ ನೆಟ್ಟು ಸಂಭ್ರಮ

ಗೋಕಾಕ :ಹಸಿರು ಗೋಕಾಕಗೆ ಕರ್ನಾಟಕ ಯುವ ಸೇನೆ ಕಾರ್ಯಕರ್ತರಿಂದ ಬೆಂಬಲ : ಏಕಕಾಲಕ್ಕೆ 150 ಸಸಿ ನೆಟ್ಟು ಸಂಭ್ರಮ 

ಹಸಿರು ಗೋಕಾಕಗೆ ಕರ್ನಾಟಕ ಯುವ ಸೇನೆ ಕಾರ್ಯಕರ್ತರಿಂದ ಬೆಂಬಲ : ಏಕಕಾಲಕ್ಕೆ 150 ಸಸಿ ನೆಟ್ಟು ಸಂಭ್ರಮ

ಗೋಕಾಕ ಅ 13: ಕರ್ನಾಟಕ ರಕ್ಷಣಾ ವೇದಿಕೆ,ಮಠಾಧೀಶರ ವೇದಿಕೆ ಆಶ್ರಯದಲ್ಲಿ ತಾಲೂಕಿನ ವಿವಿಧ ಸಂಘಟನೆಗಳ ಮತ್ತು ವಿವಿದ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಹಸಿರು ಗೋಕಾಕಗಾಗಿ ಒಂದು ದಿನ ನಿಮಿತ್ಯ ಏಕ ಕಾಲಕ್ಕೆ ಸುಮಾರು 25 ಸಾವಿರ ಸಸಿ ನೆಡುವ ಕಾರ್ಯಕ್ರಮಕ್ಕೆ ಬೆಂಬಲ ವ್ಯಕ್ತ ಪಡಿಸಿ ಕರ್ನಾಟಕ ಯುವ ಸೇನೆ,ಆಶಾ ಕಾರ್ಯಕರ್ತೆಯರು,ಅಂಗನವಾಡಿ ಕಾರ್ಯಕರ್ತೆಯರು, ಹಾಗೂ ಶಾಲಾ ವಿಧ್ಯಾರ್ಥಿಗಳು ಗೋಕಾಕ ನಗರದ ಗಣೇಶ ನಗರದಲ್ಲಿ ಮುಂಜಾನೆ ಸರಿಯಾಗಿ 11 ಗಂಟೆಗೆ ಏಕಕಾಲಕ್ಕೆ ಸುಮಾರು 150 ಸಸಿಗಳನ್ನು ನೆಡಲಾಯಿತು

ಸಂದರ್ಭದಲ್ಲಿ ಕರ್ನಾಟಕ ಯುವ ಸೇನೆ ತಾಲೂಕಾಧ್ಯಕ್ಷ ಸಂತೋಷ ಖಂಡ್ರಿ, ಮಹಿಳಾ ತಾಲೂಕಾಧ್ಯಕ್ಷ ರೂಪಾ ಧನಶೇಟ್ಟಿ, ಮಾನಿಂಗ ಕೆಂಚನ್ನವರ, ನಾರಾಯಣ ಜಡಕೀನ, ಮಂಜುನಾಥ ಜಲಿ, ಜುಬೇರ ಬಾನದಾರ, ಶಿಕ್ಷಕ ಕೆ.ಸಿ.ಯರಗಟ್ಟಿ, ಎಸ್.ಎಸ್.ಕೊಪ್ಪ, ಗಿರೀಶ ಝಂವರ, ಶ್ರೀಧರ ಮುತಾಲಿಕದೇಸಾಯಿ, ಅಂಗನವಾಡಿ ಕಾರ್ಯಕರ್ತೆಯರಾದ ಗೀತಾ ಹೀರೆಮಠ, ರೇಣುಕಾ ಪೂಜೆರಿ, ಸುಲೋಚನಾ ಗವಿಮಠ, ಗೌರವ್ವಾ ಹೀರೆಮಠ, ದಾನಮ್ಮ ಅಂದಾನಿ, ರಾಜೇಶ್ರೀ ತಲೆಪ್ಪಗೋಳ, ರೇಣುಕಾ ಗುದುಗೋಳ, ಸವಿತಾ ಸವತಿಕಾಯಿ, ಸೇರಿದಂತೆ ಇನ್ನು ಹಲವರು ಉಪಸ್ಥಿತರಿದ್ದರು

Related posts: