RNI NO. KARKAN/2006/27779|Wednesday, July 1, 2026
You are here: Home » breaking news » ಮುಂಬೈ :ಹೊರನಾಡಿನಲ್ಲಿ ಕನ್ನಡ ಭಾಷೆಯನ್ನು ಗಟ್ಟಗೊಳಿಸುವ ಕಾರ್ಯವನ್ನು ಕರವೇ ಮಾಡುತ್ತಿದೆ : ಡಿ.ಬಿ.ಅಮಿನ್

ಮುಂಬೈ :ಹೊರನಾಡಿನಲ್ಲಿ ಕನ್ನಡ ಭಾಷೆಯನ್ನು ಗಟ್ಟಗೊಳಿಸುವ ಕಾರ್ಯವನ್ನು ಕರವೇ ಮಾಡುತ್ತಿದೆ : ಡಿ.ಬಿ.ಅಮಿನ್ 

ಹೊರನಾಡಿನಲ್ಲಿ ಕನ್ನಡ ಭಾಷೆಯನ್ನು ಗಟ್ಟಗೊಳಿಸುವ ಕಾರ್ಯವನ್ನು ಕರವೇ ಮಾಡುತ್ತಿದೆ : ಡಿ.ಬಿ.ಅಮಿನ್

ಮುಂಬೈ ಜೂ 30 : ಹೊರನಾಡಿನಲ್ಲಿ ಕನ್ನಡ ಭಾಷೆಯನ್ನು ಗಟ್ಟಗೊಳಿಸುವ ಕಾರ್ಯವನ್ನು ಕರ್ನಾಟಕ ರಕ್ಷಣಾ ವೇದಿಕೆಯು ನಿರಂತರ ಮಾಡುತ್ತಿದೆ ಎಂದು ಕನ್ನಡ ಭವನ ಮುಂಬೈನ ಕನ್ನಡ ಶಾಲೆಯ ಅಧ್ಯಕ್ಷ ಡಿ. ಬಿ.ಅಮಿನ ಹೇಳಿದರು.

ಮಂಗಳವಾರದಂದು ಮುಂಬೈ ನಗರದಲ್ಲಿ ಗೋಕಾಕ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ 55ನೇ ವರ್ಷದ ಹುಟ್ಟು ಹಬ್ಬದ ನಿಮಿತ್ತ ಮುಂಬೈ ಕನ್ನಡ ಮಾಧ್ಯಮ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸತ್ಕರಿ ಮತ್ತು 8,9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲಾ ಅವಶ್ಯಕ ಪರಿಕರಗಳನ್ನು ವಿತರಿಸಿ ಅವರು ಮಾತನಾಡಿದರು

ಕಳೆದ ಹಲವು ವರ್ಷಗಳಿಂದ ಹೊರ ನಾಡಿನ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ ಹುಟ್ಟು ಹಬ್ಬದ ನೆಪ ಮಾಡಿಕೊಂಡು ಪ್ರೋತ್ಸಾಹ ನೀಡುತ್ತಿರುವ ಕರವೇಯ ಕಾರ್ಯ ನಿಜವಾಗಿಯೂ ಶ್ಲಾಘನೀಯವಾಗಿದ್ದು, ಇವರ ಹೊರ ನಾಡಿನ ಕನ್ನಡದ ಕಾಳಜಿ ಹೀಗೆ ಮುಂದುವರೆಯಲ್ಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮುಂಬೈನ ಸಮಾಜ ಸೇವಕ ಸಂತೋಷ ನಾಯಕರ ಮುಂಬೈಯಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ನಮ್ಮ ಸಮಾಜ ಸೇವಾ ಸಂಸ್ಥೆ ವತಿಯಿಂದ ವಿವಿಧ ರೀತಿಯ ತರಬೇತಿಗಳನ್ನು ನೀಡಲು ನಿರ್ಧರಿಸಿದ್ದು, ಮುಂಬೈನ ಕನ್ನಡ ಶಾಲೆಗಳ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಮಹಾರಾಷ್ಟ್ರ ರಾಜ್ಯದ ಮುಂಬೈನ ಮಹಾನಗರದಲ್ಲಿ ಕನ್ನಡ ಶಾಲೆಯ ಮುಖಾಂತರ ಕನ್ನಡವನ್ನು ಕಟ್ಟಿ ಬೆಳೆಸಿ, ಪ್ರತಿವರ್ಷ ನೂರಾರು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಕನ್ನಡದ ಪ್ರೀತಿಯನ್ನು ತುಂಬುತಿರುವ ಮುಂಬೈ ಕನ್ನಡ ಭವನ ಸೊಸೈಟಿಯ ಕಾರ್ಯ ಹೊರನಾಡಿನ ಕನ್ನಡಿಗರಿಗೆ ಮಾದರಿಯಾಗಿದ್ದು, ಕರ್ನಾಟಕ ಸರಕಾರ ಇವರ ಕನ್ನಡದ ಕೆಲಸವನ್ನು ಪರಿಗಣಿಸಿ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎಂದು ಕರ್ನಾಟಕ ಸರಕಾರವನ್ನು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಅಂಕಿತಾ ಗೌಡ, ದ್ವಿತೀಯ ಸ್ಥಾನ ಪಡೆದ ರತ್ನಿಕಾ ಢಂಗರ ಮತ್ತು ತೃತೀಯ ಸ್ಥಾನ ಪಡೆದ ಕವಿತಾ ಢಂಗರ ಅವರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಭವನದ ಗೌರವ ಕಾರ್ಯದರ್ಶಿ ಶೇಖರ ಅಮಿನ, ಸಂಸ್ಥೆಯ ನಿರ್ದೇಶಕ ಪ್ರಕಾಶ ಮೂಡಬಿದರಿ, ಪ್ರಾಚಾರ್ಯ ಶ್ರೀಮತಿ ಅಮೃತಾ ಶೆಟ್ಟಿ, ಶಿಕ್ಷಕ ವಿಠಲ್ ಮನುರೆ, ಶಿಕ್ಷಕಿ ಶ್ರೀಮತಿ ನಾಗರತ್ನ, ಸಾದಿಕ ಹಲ್ಯಾಳ, ಹನೀಫ್ ಸನದಿ, ಅಬ್ಬು ಮುಜಾವರ, ಹನುಮಂತ ಬನಾಜ, ರಮಜಾನ ಅಂಡಗಿ ಉಪಸ್ಥಿತರಿದ್ದರು.

Related posts: