ಗೋಕಾಕ:ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಡಪದ ಅಪ್ಪಣ್ಣನವರ ಜಯಂತಿ ಆಚರಣೆ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಡಪದ ಅಪ್ಪಣ್ಣನವರ ಜಯಂತಿ ಆಚರಣೆ
ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಜು 16 :
ಸಮೀಪದ ಬಗರನಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಡಪದ ಅಪ್ಪಣ್ಣನವರ ಜಯಂತಿಯನ್ನು ಮಂಗಳವಾರದಂದು ಅದ್ಧೂರಿಯಾಗಿ ಆಚರಿಸಲಾಯಿತು.
ಸಮೀಪದ ಬಗರನಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಹಾಗೂ ಸೇವಾನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಕಾಶ ಕುರಬೇಟ ಮಾತನಾಡಿ, ಹಡಪದ ಅಪ್ಪಣ್ಣನವರು ಹನ್ನೆರಡನೆಯ ಶತಮಾನದ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರಾಗಿದ್ದರು, ಬಸವಣ್ಣನವರ ಬಾಲ್ಯದ ಒಡನಾಡಿಗಳಾಗಿದ್ದು ಇವರು ವಿಶ್ವದ ಪ್ರಪ್ರಥಮ ಪ್ರಜಾಪ್ರಭುತ್ವದ ಸಂಸತ್ತು ಎಂದೇ ಹೆಸರಾದ ಅನುಭವ ಮಂಟಪದಲ್ಲಿ ಬಸವಣ್ಣನವರಿಗೆ ಪ್ರಧಾನ ಕಾರ್ಯದರ್ಶಿಗಳಾಗಿ, ಬಸವಣ್ಣನವರಿಗೆ ಯಾವುದೇ ಮುಜುಗುರವಾಗದಂತೆ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಶಿವಶರಣ ಅಪ್ಪಣ್ಣನವರದು ಎಂದು ಅಭಿಪ್ರಾಯ ಪಟ್ಟರು.
ಶಾಲೆಯ ಎಸ್‍ಡಿಎಮ್‍ಸಿ ಅಧ್ಯಕ್ಷ ರಾಮಪ್ಪ ತಳವಾರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಆಯೋಜಕ ಸ್ಥಳೀಯ ಸವಿತಾ ಸಮಾಜದ ಮಂಜುನಾಥ ನಾವಿ, ಗ್ರಾಪಂ ಸದಸ್ಯ ಬಸನಗೌಡ ಪಾಟೀಲ, ಭೀಮಸಿ ಹರಿಜನ, ಹಣಮಂತ ಹಾವಾಡಿ, ರಾಮಪ್ಪ ವೆಂಕಟಾಪೂರ, ಯಮನಪ್ಪ ಹಾವಾಡಿ, ಶಿವಗೌಡ ಪಾಟೀಲ, ರಮೇಶ ಅವರಾದಿ, ಕೃಷ್ಣಪ್ಪ ಹಾವಾಡಿ, ರಾಮಯ್ಯ ಮಠದ, ಬೀಮಪ್ಪ ದುಂಡಗಿ, ರಮೇಶ ಕಾಲುಂಗಾರ, ಸಿದ್ದಪ್ಪ ಅಡವಿ, ಹಳೆಯ ವಿದ್ಯಾರ್ಥಿ ಮಿತ್ರರು, ಶಾಲಾ ಮಕ್ಕಳು ಇದ್ದರು.
ಪ್ರಧಾನ ಗುರುಗಳಾದ ಕಲ್ಲಪ್ಪನವರ ಕಾರ್ಯಕ್ರಮದ ನಿರೂಪಿಸಿದರು. ಪಾಟೀಲ ಸ್ವಾಗತಿಸಿದರು, ಮಂಜುನಾಥ ನಾವಿ ವಂದಿಸಿದರು.