RNI NO. KARKAN/2006/27779|Saturday, February 14, 2026
You are here: Home » breaking news » ಗೋಕಾಕ:ಲಖನ್ ಜಾರಕಿಹೊಳಿಗೆ ಕೈ ಟಿಕೆಟ್ ಪಕ್ಕಾ : ಅಭಿಮಾನಿಗಳ ಸಂಭ್ರಮಾಚರಣೆ

ಗೋಕಾಕ:ಲಖನ್ ಜಾರಕಿಹೊಳಿಗೆ ಕೈ ಟಿಕೆಟ್ ಪಕ್ಕಾ : ಅಭಿಮಾನಿಗಳ ಸಂಭ್ರಮಾಚರಣೆ 

ಲಖನ್ ಜಾರಕಿಹೊಳಿಗೆ ಕೈ ಟಿಕೆಟ್ ಪಕ್ಕಾ : ಅಭಿಮಾನಿಗಳ ಸಂಭ್ರಮಾಚರಣೆ

 

 

ನಮ್ಮ ಬೆಳಗಾವಿ ಇ – ವಾರ್ತೆ  , ಗೋಕಾಕ ನ 14:

 

 

ಗೋಕಾಕ: ಗೋಕಾಕ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಲಖನ್ ಜಾರಕಿಹೊಳಿ ಅವರಿಗೆ ಟಿಕೇಟ್ ದೊರೆತ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು .
ಗುರುವಾರದಂದು ಟಿಕೆಟ್ ಘೋಷಣೆಯಾಗುತ್ತಿದ್ದಂತೆ ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ಕೈ ಕಾರ್ಯಕರ್ತರು ಮತ್ತು ಲಖನ್ ಅಭಿಮಾನಿಗಳು ಸಿದ್ದರಾಮಯ್ಯ , ಸತೀಶ ಜಾರಕಿಹೊಳಿ ಪರ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು. ಗುರುವಾರ ಮುಂಜಾನೆಯಷ್ಟೇ ರಮೇಶ ಜಾರಕಿಹೊಳಿ ಬಿಜೆಪಿ ಸೇರ್ಪಡೆಯಾಗಿದ್ದರ ಬೆನ್ನಲ್ಲೇ ಅವರ ಪ್ರತಿ ಸ್ವರ್ಧಿಯಾಗಿ ಕಾಂಗ್ರೆಸ್ ಪಕ್ಷದಿಂದ ಲಖನ್ ಜಾರಕಿಹೊಳಿ ಅವರಿಗೆ ಟಿಕೆಟ್ ನೀಡಿ ಸಹೋದರರ ನೇರ ಹಣಾಹಣಿಗೆ ವೇದಿಕೆ ಸಜ್ಜುಗೊಳಿಸಿದಂತಾಗಿದೆ

ಇಲ್ಲಿವರೆಗೂ ತೀವ್ರ ಕುತೂಹಲ ಮೂಡಿಸಿದ ಟಿಕೆಟ್ ಹಂಚಿಕೆ ವಿಚಾರವಾಗಿ ಒಂದು ಕಡೆ ಕಾಂಗ್ರೆಸನಿಂದ ಅಶೋಕ ಪೂಜೇರಿ ಕೂಡ ಟಿಕೆಟ್ ಆಕಾಂಕ್ಷಿ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿದ್ದವು ಇವರಿಗೆ ಟಿಕೆಟ್ ಕೊಡಿಸಲು ಕಾಂಗ್ರೆಸನ ಪ್ರಬಲ ನಾಯಕರು ಲಾಬಿ ನಡೆಸಿದರು. ಆದರೆ ಬೆಂಗಳೂರಿನಲ್ಲಿ ಸತೀಶ ಜಾರಕಿಹೊಳಿ ಟಿಕೆಟ್ ನೀಡುವ ವಿಚಾರವಾಗಿ ಸಿದ್ದರಾಮಯ್ಯ ಮುಂದೆ ಅಸಮಾಧಾನ ಹೊರಹಾಕಿದ್ದರು ಒಟ್ಟಾರೆ ಉಪ ಚುನಾವಣೆಯ ಜಾರಕಿಹೊಳಿ ಸಹೋದರರ ನೇರ ಹಣಾಹಣಿಗೆ ವೇದಿಕೆ ಸಜ್ಜುಗೊಂಡಿದ್ದು , ಅಶೋಕ ಪೂಜಾರಿ ಅವರ ನಡೆ ಇನ್ನೂ ನಿಗೂಡವಾಗಿ ಉಳಿದಿದೆ

Related posts: