RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ಕಾವೇರಿಯಿಂದ ಗೋಧಾವರಿವರೆಗೆ ಇದ್ದ ಕರ್ನಾಟಕ ಇಂದು ಒಡೆದು ಹೋಳಾಗಿದೆ : ಸಾಹಿತಿ ಮಹಾಲಿಂಗ ಮಂಗಿ ಖೇದ

ಗೋಕಾಕ:ಕಾವೇರಿಯಿಂದ ಗೋಧಾವರಿವರೆಗೆ ಇದ್ದ ಕರ್ನಾಟಕ ಇಂದು ಒಡೆದು ಹೋಳಾಗಿದೆ : ಸಾಹಿತಿ ಮಹಾಲಿಂಗ ಮಂಗಿ ಖೇದ 

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿರುವ ಹಿರಿಯ ಸಾಹಿತಿ ಮಹಾಲಿಂಗ ಮಂಗಿ

ಕಾವೇರಿಯಿಂದ ಗೋಧಾವರಿವರೆಗೆ ಇದ್ದ ಕರ್ನಾಟಕ ಇಂದು ಒಡೆದು ಹೋಳಾಗಿದೆ : ಸಾಹಿತಿ ಮಹಾಲಿಂಗ ಮಂಗಿ ಖೇದ

 

 

ನಮ್ಮ ಬೆಳಗಾವಿ ಸುದ್ದಿ, ಗೋಕಾಕ ಸೆ 22 :

 

 
ಕಾವೇರಿಯಿಂದ ಗೋಧಾವರಿವರೆಗೆ ಇದ್ದ ಕರ್ನಾಟಕ ಇಂದು ಒಡೆದು ಹೋಳಾಗಿರುವದು ಖೇದಕರ ಎಂದು ಹಿರಿಯ ಸಾಹಿತಿ ಮಹಾಲಿಂಗ ಮಂಗಿ ವಿಷಾದ ವ್ಯಕ್ತಪಡಿಸಿದರು

ರವಿವಾರದಂದು ತಾಲೂಕಿನ ಕೊಣ್ಣೂರು ಪಟ್ಟಣದ ಲಕ್ಕಮ್ಮಾ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಕ್ಷಣಾ ವೇದಿಕೆ ನೂತನ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು

ಇಂದಿನ ಪ್ರಸ್ತುತ ದಿನಮಾನದಲ್ಲಿ ಕನ್ನಡಿಗರು ಅಭಿಮಾನ ಶೂನ್ಯವಾಗುತ್ತಿರುವ ಪರಣಾಮ ಕನ್ನಡ ಭಾಷೆ , ನಾಡು ನುಡಿ ಉಳಿಸಲು ಇಂದು ನಾವು ಹರಸಹಾಸ ಪಡೆಬೇಕಾಗಿದೆ.ಭಾಷೆಯ ಜೊತೆಗೆ ಸಮಗ್ರ ಕನ್ನಡದ ಸ್ವಾರಸ್ವತ್ವವನ್ನು ಉಳಿಸಿ ಬೆಳೆಸಬೇಕಾಗಿದೆ.

ಕನ್ನಡ ಪರ ಸಂಘಟನೆಗಳು ಇದರ ಬಗ್ಗೆ ಗಮನ ಹರಿಸಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸಿ ಯುವ ಜನಾಂಗವನ್ನು ಕನ್ನಡದ ಕಡೆ ವಾಲುವಂತೆ ಮಾಡಿ ಕನ್ನಡ ಭಾಷೆಯನ್ನು ಉತ್ತಂಗಕ್ಕೆ ಒಯ್ಯಬೇಕಾಗಿದೆ.

ಯಾವುದೇ ಒಂದು ಮುಲಾಜಿಗೆ ಒಳಗಾಗಿ ನಮ್ಮನ್ನು ಆಳುವವರು ಇಂದು ನಮ್ಮ ಮೇಲೆ ಹಿಂದಿ ಸೇರಿದಂತೆ ಬೇರೆ ಬೇರೆ ಭಾಷೆಗಳನ್ನು ಹೇರುವ ಹುನ್ನಾರ ನಡೆಯುತ್ತಿದ್ದೆ ಕನ್ನಡವನ್ನು ಕಾಯುವ ಸಂಘಟನೆಗಳು ಇದರ ಬಗ್ಗೆ ಹೆಚ್ಚಿನ ಮೂತೂವರ್ಜಿ ವಹಿಸಿ ಹೋರಾಟವನ್ನು ಎಚ್ಚರಿಕೆ ಸಂದೇಶಗಳನ್ನು ನೀಡಿ ದಬ್ಬಾಳಿಕೆಯನ್ನು ತಡೆಯುವ ನಿಟ್ಟಿನಲ್ಲಿ ಹೋರಾಡಬೇಕಾಗಿದೆ ಎಂದ ಅವರು ಗಡಿ ಭಾಗಗಳಲ್ಲಿ ಕನ್ನಡವನ್ನು ಗಟ್ಠಿಗೋಳಿಸುವ ದಿಸೆಯಲ್ಲಿ ಯುವಕರು ಮುಂದಾಗಿ ಕನ್ನಡದ ಛಾಪ್ಪನ್ನು ಮತ್ತೆ ಕಾವೇರಿಯಿಂದ ಗೋಧಿವರಿವರೆಗೆ ಮೂಡಿಸಬೇಕಾಗಿದೆ ಎಂದು ಸಾಹಿತಿ ಮಂಗಿ ಹೇಳಿದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇದಿಕೆಯ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ವಹಿಸಿ ಮಾತನಾಡಿದರು.
ಕೋಣ್ಣೂರ ಗ್ರಾಮದ ನೂನತ ಕರವೇ ಘಟಕವನ್ನು ಕೋಣ್ಣೂರ ಪಟ್ಟಣ ಪಂಚಾಯತ್ ಹಿರಿಯ ಸದಸ್ಯ ವಿನೋದ ಕರನಿಂಗ ದೀಪ ಪ್ರಜ್ವಲಿಸಿ ಉದ್ಘಾಸಿದರು

ವೇದಿಕೆಯಲ್ಲಿ ಸಾದಿಕ ಹಲ್ಯಾಳ , ಎಸ್‌.ರಾಜ ಬೆಳಮಡಿ , ಮನೋಹರ ಮ್ಯಾಗೇರಿ, ಶೆಟ್ಟೆಪ್ಪಾ ಗಾಡಿವಡ್ಡರ, ರಹೇಮಾನ ಮೋಕಾಶಿ, ಸ್ಥಳೀಯ ನೂತನ ಘಟಕದ ಅಧ್ಯಕ್ಷ ರಾಜು ಮುತ್ತೆನ್ನವರ , ಉಪಾಧ್ಯಕ್ಷ ಸುನೀಲ ಬೆಳಮಡಿ ಸೇರಿದಂತೆ ಇತತರು ಇದ್ಧರು. ಕಾರ್ಯಕ್ರಮವನ್ನು ಸುಭಾಸ ಮೇದಾರ ನಿರೂಪಿಸಿ ವಂದಿಸಿದರು

Related posts: